ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಯಡೂರು ಸಮೀಪ ಮತ್ತಿಗ ಬಳಿ ಮೀನು ಹಿಡಿಯಲು ಹೋಗಿ ವಾಪಾಸ್ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಕಾರಿನಲ್ಲಿದ್ದ ಓರ್ವ ಯುವಕ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿರುವವರನ್ನು ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಅತಿಶಯ(23) ಮೃತಪಟ್ಟ ಯುವಕ. ತೀರ್ಥಹಳ್ಳಿಯಿಂದ ಐವರು ಮೀನು ಹಿಡಿಯಲು ಕಾರಿನಲ್ಲಿ ಹೋಗಿದ್ದರು. ವಾಪಾಸ್ ಬರುವಾಗ ಕಾರು ಪಲ್ಟಿಯಾಗಿ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರನ್ನು ಮಣಿಪಾಲ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಓರ್ವ ಮೃತಪಟ್ಟಿದ್ದಾನೆ.
ಈ ಸುದ್ದಿ ಓದಿದ್ದೀರಾ? ಗದಗ | ನೀಟ್-ಯುಜಿಸಿ ಪರೀಕ್ಷೆ ಭ್ರಷ್ಟಾಚಾರ ಹಗರಣ; ನ್ಯಾಯಕ್ಕಾಗಿ ಎಸ್ಎಫ್ಐ ಆಗ್ರಹ
ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
