ಸಿಡಿಮದ್ದು ಸ್ಫೋಟಗೊಂಡು ಓರ್ವ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರು ಬಾಲಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ತುಂಗಾನದಿ ದಡದಲ್ಲಿ ನಡೆದಿದೆ.
ತೇಜು ಎಂಬ ಬಾಲಕನಿಗೆ ಮೈಕೈ ಹಾಗೂ ಮುಖಕ್ಕೆ ಗಾಯಗಳಾಗಿದ್ದು, ಕಣ್ಣುಗಳಿಗೆ ತೀವ್ರ ಹಾನಿಯಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜನವರಿ 1ರಂದು ತೀರ್ಥಹಳ್ಳಿ ಪಟ್ಟಣದಲ್ಲಿ ತೆಪ್ಪೋತ್ಸವದ ಅಂಗವಾಗಿ ಸಿಡಿಮದ್ದು ಪ್ರದರ್ಶನ ಏರ್ಪಡಿಸಲಾಗಿತ್ತು. ಸುಮಾರು 2 ಗಂಟೆಗಳ ಕಾಲ ಪ್ರದರ್ಶನ ನಡೆದಿತ್ತು. ಬಳಿಕ ಜನವರಿ 5ರಂದು ಸಿಡಿಯದೇ ಇದ್ದ ಪಟಾಕಿಗಳನ್ನು ಬಾಲಕರು ಸಂಗ್ರಹಿಸಿದ್ದರು. ಈ ವೇಳೆ ಏಕಾಏಕಿ ಪಟಾಕಿ ಸಿಡಿದ ಪರಿಣಾಮ ತೇಜು ತೀವ್ರವಾಗಿ ಗಾಯಗೊಂಡಿದ್ದಾನೆ.
ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಪಟಾಕಿ ಸ್ಪೋಟ; ಸವಾಲು ಗೆಲ್ಲಲು ಹೋದ ಯುವಕ ಸಾವು
ಸಿಡಿಮದ್ದು ಪ್ರದರ್ಶನದ ವೇಳೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳದಿದ್ದರಿಂದ ಹಾಗೂ ಪ್ರದರ್ಶನ ಮುಗಿದು 4 ದಿನಗಳಾದರೂ ಪ್ರದೇಶವನ್ನು ಸ್ವಚ್ಛ ಮಾಡದೇ ಇರುವುದು ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ.
