ಶಿವಮೊಗ್ಗ ಸರ್ಕಾರಿ ಶಾಲೆಯ ಶಿಕ್ಷಕಿ ನಿವೃತ್ತಿ ಹೊಂದಿದಾಗ ಹಳೆ ವಿದ್ಯಾರ್ಥಿಗಳುಬಾಬಾಸಾಹೇಬ್ ಅಂಬೇಡ್ಕರ್ ಫೋಟೋ ನೀಡುವ ಮೂಲಕ ಬೀಳ್ಕೊಟ್ಟರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿಳ್ ಘಟ್ಟ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವಕುಮಾರ್ ಮತ್ತು ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮಸ್ತಾನ್ ಆರ್ ಹಾಗೂ ಸಾಮಾಜಿಕ ಮುಖಂಡರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಿದರು.
“ಶಿಕ್ಷಕಿ ಶಶಿಯವರ ನಿವೃತ್ತಿ ಜೀವನ ಸುಖಕರವಾಗಿರಲಿ” ಎಂದು ಹಾರೈಸುತ್ತ ವಿದ್ಯಾರ್ಥಿಗಳು ಅವರಿಗೆ ಬಾಬಾಸಾಹೇಬ್ ಅಂಬೇಡ್ಕರ್ ಫೋಟೋ ನೀಡುವ ಮೂಲಕ ಸನ್ಮಾನಿಸಿ ಗೌರವಿಸಿದರು.
“ಶಿಕ್ಷಕಿ ಶಶಿಯವರು ವಿದ್ಯಾರ್ಥಿಗಳಿಗೆ ಸಾಕಷ್ಟು ಉತ್ತಮವಾದ ಜೀವನ ರೂಪಿಸಿಕೊಳ್ಳಲು ಉತ್ತಮ ಶಿಕ್ಷಣ ನೀಡಿದ್ದಾರೆ” ಎಂದು ಹಳೆ ವಿದ್ಯಾರ್ಥಿಗಳು ಸ್ಮರಿಸಿದರು.
“ಶಿವಕುಮಾರ್ ಶಿವಮೊಗ್ಗ ನಗರದಲ್ಲಿ ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದು, ಪರಿಶಿಷ್ಟ ಜಾತಿಯವರ ಸಮಸ್ಯೆಗಳನ್ನು ಬಗೆಹರಿಸುವತ್ತ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅನೇಕ ರೀತಿಯ ಸಾಮಾಜಿಕ ಕೆಲಸದಲ್ಲಿ ನಿರತರಾಗಿದ್ದಾರೆ. ಹಾಗಾಗಿ ಶಶಿ ಶಿಕ್ಷಕರ ಮಾರ್ಗದರ್ಶನ ಅಭಿನಂದನೀಯ. ಅನೇಕರಿಗೆ ಇವರು ಉತ್ತಮ ಶಿಕ್ಷಣ ನೀಡಿದ್ದಾರೆ” ಎಂದು ಹೇಳುತ್ತ ಅನೇಕ ವಿಶೇಷ ವಿಷಯಗಳನ್ನು ಸ್ಮರಿಸಿದರು.
ನಿವೃತ್ತ ಶಿಕ್ಷಕಿ ಶಶಿಕಲಾ ಮಾತನಾಡಿ, “ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ. ಒಳ್ಳೆ ಭವಿಷ್ಯ ರೂಪಿಸಿಕೊಳ್ಳುವ ಮುಖಾಂತರ ಸತ್ಪ್ರಜೆಗಳಾಗಿ ಸಮಾಜಕ್ಕೆ, ಪೋಷಕರಿಗೆ ಶಿಕ್ಷಕರಿಗೆ ಹೆಸರು ಕೀರ್ತಿ ತನ್ನಿ. ಯಾವಾಗಲೂ ಸಮಾಜಮುಖಿಯಾಗಿರಿ” ಎಂದು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.
ಈ ಸುದ್ದಿ ಓದಿದ್ದೀರಾ? ಗೃಹಸಚಿವ ಅಮಿತ್ ಶಾ ವಿರುದ್ಧ ಜ.9ರಂದು ʼವಿಜಯನಗರ ಬಂದ್’ಗೆ ಕರೆ
ನಂತರ ಶಾಲೆ ವಿದ್ಯಾರ್ಥಿಗಳು ಕಣ್ಣು ತುಂಬಿ ದುಃಖಿಸಿ ನೀವೇ ಶಿಕ್ಷಕರಾಗಿ ಮುಂದುವರಿಯಲು ಕೇಳಿಕೊಂಡರು ಅದಕ್ಕೆ ಶಿಕ್ಷಕರು ಆಗಾಗ ಶಾಲೆಗೆ ಬಂದು ಹೋಗುತ್ತೇನೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಸದಸ್ಯರು ಮತ್ತು ಶಾಲೆಯ ಮುಖ್ಯ ಶಿಕ್ಷಕಿ ಜಾಹ್ನವಿ, ಶಿಕ್ಷಕ ಸಂಘದ ಅಧಿಕಾರಿಗಳು, ಸಮನ್ವಯ ಅಧಿಕಾರಿಗಳು, ಮಿಳ್ ಘಟ್ಟ ಕ್ಲಸ್ಟರ್ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕಿ ಭಾಗ್ಯಲಕ್ಷ್ಮಿ ಸೇರಿದಂತೆ ಪೋಷಕರು ಇದ್ದರು.