ಶಿವಮೊಗ್ಗ | ಭಾರಿ ಮಳೆ : ಕೋರ್ಪಳ್ಳಯ್ಯನ ಮಂಟಪ್ಪ ಮುಳುಗಡೆ

Date:

Advertisements

ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಾ ನದಿಯಲ್ಲಿ ಒಳಹರಿವು ವಿಪರೀತ ಹೆಚ್ಚಿದೆ. ಶೃಂಗೇರಿಯಲ್ಲಿಯೇ ತುಂಗಾನದಿಯು ಅಬ್ಬರಿಸಿ ಹರಿಯುತ್ತಿದ್ದು, ತಿರ್ಥಹಳ್ಳಿಯಲ್ಲಿ ತುಂಗೆಯ ಆರ್ಭಟ ಇನ್ನೂ ಜೋರಾಗಿದೆ. ಇಲ್ಲಿನ ರಾಮೇಶ್ವರ ಮಂಟಪ ಬಹುತೇಕ ಮುಳುಗಡೆಯಾಗಿದೆ.

ಗಾಜನೂರಿನಲ್ಲಿರುವ ತುಂಗಾ ಜಲಾಶಯಕ್ಕೆ ಜಲರಾಶಿಯೇ ಹರಿದು ಬರುತ್ತಿದೆ. ಇವತ್ತು ಲಭ್ಯ ಮಾಹಿತಿ ಪ್ರಕಾರ, ಗಾಜನೂರು ಜಲಾಶಯಕ್ಕೆ ಇವತ್ತು ಜಲಾಶಯಕ್ಕೆ ಒಟ್ಟು 73,415 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ ಒಟ್ಟು 76,656 ಕ್ಯೂಸೆಕ್‌ ನೀರು ನದಿಗೆ ಬಿಡಲಾಗುತ್ತಿದೆ.

ಇದರ ಪರಿಣಾಮವಾಗಿ ಶಿವಮೊಗ್ಗ ನಗರ ಭಾಗದಲ್ಲಿಯೇ ತುಂಗೆ ತನ್ನ ವ್ಯಾಪ್ತಿಯ ವಿಶಾಲತೆಯನ್ನು ಪ್ರದರ್ಶನ ಮಾಡುತ್ತಿದ್ದಾಳೆ. ಕೆಂಬಣ್ಣದ ಸೀರೆಯುಟ್ಟು ಮೆರವಣಿಗೆ ಹೊರಟಂತೆ ಕಾಣುತ್ತಿರರುವ ತುಂಗಾ ನದಿ ಅಪಾಯದ ರೌದ್ರವತೆಯನ್ನು ನೋಡುಗರ ಮನಸಿನಲ್ಲಿಯೇ ಸೃಷ್ಟಿಸುತ್ತಿದ್ದಾಳೆ.

Advertisements

ತುಂಗಾ ನದಿಯ ಅಪಾಯದ ತೀವ್ರತೆಯನ್ನು ಲೆಕ್ಕ ಹಾಕುವ ಹಿಂದಿನ ಪದ್ದತಿಯಂತೆ ನೋಡುವುದಾದರೆ, ಶಿವಮೊಗ್ಗದ ಕೋರ್ಪಳ್ಳಯ್ಯನ ಮಂಟಪ್ಪ ಮುಳುಗಿದೆ. ಇದನ್ನು ನೋಡಲು ಮಂಟಪದ ಬಳಿಗೆ ಜನರು ಬಂದು ಹೋಗುತ್ತಿದ್ದಾರೆ. ಜಿಟಿ ಮಳೆಯ ನಡುವೆ ತುಂಗಾನದಿ ಮೈದುಂಬಿ ಹರಿವುದನ್ನು ಕಂಡು ಜನರು ರೋಮಾಂಚನಗೊಳ್ಳುತ್ತಿದ್ದಾರೆ.

ಇನ್ನೊಂದೆಡೆ ಇವತ್ತು ಸಹ ಮಳೆ ಮುಂದುವರಿದರೆ ತಗ್ಗುಪ್ರದೇಶಗಳಲ್ಲಿ ಪ್ರವಾಹ ಭೀತಿಯ ಆತಂಕವೂ ಇದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ಮಕ್ಕಳನ್ನು ಡ್ರಗ್ಸ್‌ ದಾಸರನ್ನಾಗಿ ಮಾಡಿ ಭಾರತವನ್ನು ಮುಳುಗಿಸುವಲ್ಲಿ ದೊಡ್ಡ ದೊಡ್ಡ ದೇಶಗಳ ಕೈವಾಡವಿದೆ: ಎಚ್‌ ಎಂ ವಿಶ್ವನಾಥ್

ದೊಡ್ಡ ದೊಡ್ಡ ದೇಶಗಳು ನಮ್ಮ ದೇಶದ ಮಕ್ಕಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್‌ನಲ್ಲಿ ಮುಳುಗಿಸುತ್ತಿದ್ದಾರೆ....

ಹಾವೇರಿ | ಮಾದಕ ವಸ್ತು ಮಾರಾಟ; ನಾಲ್ವರು ಬಂಧನ

ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ನಾಲ್ವರನ್ನು ಪೊಲೀಸರು ಬಂಧಿಸಿದ ಘಟನೆ ಹಾವೇರಿ...

ಶಿವಮೊಗ್ಗ | ಕಾಂಗ್ರೆಸ್ ಕಚೇರಿಯಲ್ಲಿ ಅರಸು ಮತ್ತು ರಾಜೀವ್‍ಗಾಂಧಿಯವರ ಜನ್ಮದಿನಾಚರಣೆ

ಶಿವಮೊಗ್ಗ, ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಹಿಂದುಳಿದ ವರ್ಗಗಳ ನಾಯಕ ಹಾಗೂ...

ಶಿವಮೊಗ್ಗ | ಆರು ಜಿಲ್ಲೆಯ ಮುಖಂಡರಿಂದ ಅಹಿಂದ ಸಮಾವೇಶದ ಪೂರ್ವಭಾವಿ ಸಭೆ : ತೀ.ನ. ಶ್ರೀನಿವಾಸ್

ಶಿವಮೊಗ್ಗ, ಮಲೆನಾಡು ರೈತರ ಸಮಸ್ಯೆ ಹಾಗೂ ಕಾಂತ್‌ರಾಜ್ ವರದಿಯ ಜಾರಿಗೆ ಆಗ್ರಹಿಸಿ...

Download Eedina App Android / iOS

X