ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಧಾರಾಕಾರ ಮಳೆಯಾಗಿದ್ದು, ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.
ಮಳೆಯಿಂದಾಗಿ, ಸೊರಬ ರಸ್ತೆಯ ಪೆಟ್ರೋಲ್ ಬಂಕ್ ಎದುರು ನೀರು ಸಂಗ್ರಹವಾದ ಕಾರಣ ಸಾರ್ವಜನಿಕರು ಪರದಾಡುವಂತಾಯಿತು. ರಸ್ತೆ ಜಲಾವೃತವಾಗಿದ್ದು, ರಸ್ತೆಯೋ, ಕೆರೆಯೂ ಎಂಬಂತೆ ಭಾಸಾವಾಗಿತ್ತು. ರಸ್ತೆ ದಾಟಲು ಪಾದಚಾರಿಗಳು ಕಷ್ಟಪಟ್ಟರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಧಾರಾಕಾರ ಮಳೆಗೆ ಅಪಾರ ಆಸ್ತಿಪಾಸ್ತಿ ಹಾನಿ; ಸ್ಥಳೀಯರಲ್ಲಿ ಪ್ರವಾಹ ಭೀತಿ
“ಪೆಟೋಲ್ ಬಂಕ್ ಎದುರಿನ ಕಾಲುವೆ ಕಾಮಗಾರಿ ಅಪೂರ್ಣಗೊಂಡಿದ್ದು, ಮಳೆನೀರು ಹರಿದು ಹೋಗುತ್ತಿಲ್ಲ ಹಾಗೂ ಎರಡು ವರ್ಷಗಳಾದರೂ, ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ ಸಮಸ್ಯೆ ಹೆಚ್ಚಿದೆ. ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು” ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.