ಶಿವಮೊಗ್ಗ | ಅಕ್ರಮವಾಗಿ ಮದ್ಯ ಮಾರಾಟ ದಂಧೆಯಿಂದ ಹಳ್ಳಿ ಹಳ್ಳಿಯಲ್ಲೂ ಅಶಾಂತಿ ಸೃಷ್ಟಿ: ಹೋನಗೋಡು ರತ್ನಾಕರ

Date:

Advertisements

ಸಾಗರ ತಾಲೂಕಿನಲ್ಲಿ ಮದ್ಯ ಮಾರಾಟ ಮಳಿಗೆ(ಬಾರ್)‌ 24 ಗಂಟೆಯೂ ತೆರದೇ ಇರುತ್ತದೆ. ಶಾಸಕರ ಹಿಂಬಾಲಕರು ಹಳ್ಳಿ ಹಳ್ಳಿಗೂ ಬಾಕ್ಸ್‌ಗಟ್ಟಲೆ ಮದ್ಯವನ್ನು ಸಾಗಿಸುತ್ತಿದ್ದು, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಹಳ್ಳಿ ಹಳ್ಳಿಯಲ್ಲೂ ಅಶಾಂತಿ ಸೃಷ್ಟಿಯಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹೋನಗೋಡು ರತ್ನಾಕರ ದೂರಿದರು.

ಸಾಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪತ್ರಕರ್ತರೊಂದಿಗೆ ಮಾತನಾಡಿ ಅವರು, “ಹಾಲಪ್ಪನವರ ಅಧಿಕಾರದಲ್ಲಿ ನಮ್ಮ ವಿಧಾನಸಭಾಕ್ಷೇತ್ರ ಕುಡುಕರ ತಾಣವಾಗಿದೆ. ಒಮ್ಮೆಲೆ ನನಗೆ ಅಧಿಕಾರ ಕೊಟ್ಟು ನೋಡಿ ಇದನ್ನೆಲ್ಲ ಬದಲಿಸುತ್ತೇನೆಂಬ ಭರವಸೆಯಿಂದ ಅಧಿಕಾರಕ್ಕೆ ಬಂದವರು ಈಗಿನ ಶಾಸಕರು. ಆದರೆ ಈಗ ಮಾಡುತ್ತಿರುವುದೇನು? ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ಕುಟುಕಿದ್ದಾರೆ.

“ಅಬಕಾರಿ ಇಲಾಖೆಯ ಭ್ರಷ್ಟಾಚಾರ ಮಿತಿಮೀರಿದೆ. ರಾಜ್ಯದಿಂದ ಹಿಡಿದು ತಾಲೂಕಿನವರೆಗೂ ಇವರದೇ ಹಾವಳಿ ಶುರುವಾಗಿದೆ. ಇದರಿಂದ ಬಡ ಕೂಲಿ ಕಾರ್ಮಿಕರು ಮದ್ಯಪ್ರಿಯರಾಗಿದ್ದಾರೆ. ಇದಕ್ಕೆಲ್ಲ ಅಬಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಶಾಸಕರ ಕುಮಕ್ಕೇ ಕಾರಣ. ಹಾಗಾಗಿ ಇದನ್ನು ವಿರೋಧಿಸಿದ ಬಾರ್ ಮಾಲೀಕರು ನವೆಂಬರ್ 20ರಂದು‌ ರಾಜ್ಯಾದ್ಯಂತ ಬಾರ್‌ ಬಂದ್ ಮಾಡಲು ಸಿದ್ಧರಾಗಿದ್ದಾರೆ” ಎಂದರು.

Advertisements

“ಅಬಕಾರಿ ಇಲಾಖೆಯವರು ಇದಕ್ಕೆ ಕಡಿವಾಣ ಹಾಕದೇ ಹೋದರೆ, ಇಂದಿನಿಂದ ಒಂದು ತಿಂಗಳವರೆಗೂ ಕಾಲಾವಕಾಶ ಕೊಟ್ಟು ಸಾರ್ವಜನಿಕ ಹಿತದೃಷ್ಟಿಗಾಗಿ ದಲಿತ ಸಂಘಟನೆಗಳು, ಸ್ವಸಹಾಯ ಸಂಘಗಳು, ಮಹಿಳಾ ಸಂಘಗಳೆಲ್ಲ ಒಗ್ಗೂಡಿ ಶಿವಮೊಗ್ಗದ ಅಬಕಾರಿ ಕಚೇರಿ ಹಾಗೂ ಡಿಸಿ ಕಚೇರಿ ಎದುರು ಧರಣಿ ಕೂರುತ್ತೇವೆ” ಎಂದರು.

“ತಾಲೂಕಿನ ಅಭಿವೃದ್ಧಿಗೆಂದು ಬಂದವರು ಅಬಕಾರಿ ಇಲಾಖೆಯಿಂದ ಹಣ ಲೂಟಿ ಮಾಡುತ್ತಿದ್ದಾರೆ. ಹಾಲಪ್ಪನವರು ತಂದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಿ ನಾವೇ ಮಾಡಿದ್ದು ಎನ್ನುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಾಲಪ್ಪನವರ ನೇತೃತ್ವದಲ್ಲಿ ಇದರ ವಿರುದ್ಧ ಹೋರಾಟ ಮಾಡುತ್ತೇವೆ. ಸಾಗರ ವಿಧಾನಸಭಾ ಕ್ಷೇತ್ರ ಪ್ರಜ್ಞಾವಂತರ ಕ್ಷೇತ್ರವಾಗಿದೆ. ಮುಂದೊಂದು ದಿನ ಅವರೇ ಇದನ್ನೆಲ್ಲ ವಿರೋಧಿಸಿ ಹೋರಾಟಕ್ಕೆ ಇಳಿಯುತ್ತಾರೆ” ಎಂದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಹೋಟೆಲ್ ಮೇಲೆ ದಾಳಿ: ಬಾಲ ಕಾರ್ಮಿಕನನ್ನು ರಕ್ಷಿಸಿ ಶಾಲೆಗೆ ಸೇರಿಸಿದ ಅಧಿಕಾರಿಗಳು

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಮೋಹನ್ ಕುಮಾರ್, ಮಾಜಿ ಗ್ರಾ ಪಂ ಅಧ್ಯಕ್ಷ ನವೀನ್, ರವಿಗೌಡ, ನೇತ್ರಾವತಿ ಮಂಜುನಾಥ, ಗೌತಮಪುರ ಗ್ರಾ. ಪಂ. ಸದಸ್ಯ ಪರಮೇಶ್, ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಶಾಂತಕುಮಾರ ಹಾಗೂ ನಾಗರಾಜ ದಾಸಕೊಪ್ಪ ಸೇರಿದಂತೆ ಇತರರು ಇದ್ದರು.

ವರದಿ : ಅಮಿತ್ ಆರ್, ಆನಂದಪುರ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X