ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯಲ್ಲಿ ಶ್ರೀ ಚೌಡೇಶ್ವರಿ ಸಭಾಂಗಣವನ್ನು ಪಾಲಿಕೆ ಸದಸ್ಯೆ ರೇಖಾ ರಂಗನಾಥ್, ಬಡಾವಣೆಯ ನಿವಾಸಿಗಳೊಂದಿಗೆ ಉದ್ಘಾಟಿಸಿದರು.
ನಂತರ ಮಾತನಾಡಿದ ರೇಖಾ ರಂಗನಾಥ್, ಈಗಾಗಲೇ ಹೊಸಮನೆ ಬಡಾವಣೆಯಲ್ಲಿ ಪಾಲಿಕೆ ಸದಸ್ಯರ ಅನುದಾನ ಮತ್ತು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಶೇ. 90ರಷ್ಟು ಕಾಮಗಾರಿಗಳನ್ನು ಕಳೆದ ಐದು ವರ್ಷದಲ್ಲಿ ಪೂರ್ಣಗೊಳಿಸಿ ಜನತೆಯ ಅನುಕೂಲಕ್ಕೆ ಅನುವು ಮಾಡಿಕೊಟ್ಟಿದ್ದು ಒಂದು ತೃಪ್ತಿಯ ವಿಚಾರ.
ಇಂದು ಉದ್ಘಾಟನೆಗೊಂಡಿರುವ ಹೊಸಮನೆಯ ಚೌಡೇಶ್ವರಿ ದೇವಿ ಸಭಾಂಗಣವು, ಸ್ಥಳೀಯರಿಗೆ ಹಬ್ಬ ಹರಿದಿನಗಳು, ಶಬರಿಮಲೆ ಯಾತ್ರೆ ಹೊರಡುವ ಸ್ವಾಮಿಗಳಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಸಣ್ಣಪುಟ್ಟ ಕಾರ್ಯಕ್ರಮಗಳನ್ನು ನೆರವೇರಿಸಲು ಪಾಲಿಕೆ ಅನುದಾನದಲ್ಲಿ ನಿರ್ಮಾಣ ಮಾಡಲಾಗಿದೆ.
ಸಾರ್ವಜನಿಕರು ಸ್ವಚ್ಛತೆಯನ್ನು ಕಾಪಾಡುವುದರೊಂದಿಗೆ ಸದುಪಯೋಗಪಡಿಸಿಕೊಳ್ಳಬೇಕು. ಈ ಸಭಾಂಗಣದ ಹತ್ತಿರ ನೀರಿನ ವ್ಯವಸ್ಥೆಗಾಗಿ ಹೊಸ ಬೋರ್ ವೆಲ್ ಕೊರೆಸಲು ಅನುದಾನವನ್ನು ಸಿದ್ಧಪಡಿಸಲಾಗಿದೆ. ಕೆಲವೇ ದಿನಗಳಲ್ಲಿ ಆ ಕಾರ್ಯವೂ ಪೂರ್ಣಗೊಳ್ಳುವುದು ಎಂದು ತಿಳಿಸಿದರು.
ಸಂದರ್ಭದಲ್ಲಿ ಯುವ ಮುಖಂಡ ಕೆ.ರಂಗನಾಥ್ ಬಡಾವಣೆಯ ಪ್ರಮುಖರಾದ ರವಿ, ಆನಂದ್ ಮೂರ್ತಿ, ಶಂಕರ್, ರಾಮಾಂಜನಿ, ಶಿವಪ್ರಸಾದ್, ಕಿರಣ್, ಚೌಡಪ್ಪ, ರಾಮಕೃಷ್ಣ, ಶಿವಮ್ಮ, ಕೆಂಪಮ್ಮ, ಲೋಕಮ್ಮ, ಕೃಷ್ಣಮೂರ್ತಿ ಇತರರು ಇದ್ದರು.