ಶಿವಮೊಗ್ಗ ನಗರದಲ್ಲಿ ಸದ್ಯ ತುಂಗಾನದಿ ನೀರಿನಲ್ಲಿ ಟರ್ಬಿಡಿಟಿ ಪ್ರಮಾಣ ಹೆಚ್ಚಾಗಿದ್ದು, ಇದೇ ಜಲಾಶಯದಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಆರೋಗ್ಯದ ಹಿತದೃಷ್ಟಿಯಿಂದ ನೀರನ್ನು ಕುದಿಸಿ, ಆರಿಸಿ ಕುಡಿಯುವುದು ಉತ್ತಮ ಎನ್ನಲಾಗಿದೆ.
ಶಿವಮೊಗ್ಗ ನಗರ ನೀರು ಸರಬರಾಜು ವ್ಯವಸ್ಥೆಯ ನಿರ್ವಹಣೆ ಮಾಡುತ್ತಿರುವ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಕ್ಟೋಬರ್ 10ರಂದು ಪ್ರಕಟಣೆ ಹೊಡಿಸಿದೆ
ಕಳೆದ ಅಕ್ಟೋಬರ್ 8ರಂದು ಸುರಿದ ಭಾರೀ ಮಳೆಯಿಂದ ಗಾಜನೂರು ತುಂಗಾ ಜಲಾಶಯ ಹಾಗೂ ತುಂಗಾನದಿ ನೀರಿನಲ್ಲಿ ಕೆಂಪುಬಣ್ಣ ಹೆಚ್ಚಾಗಿದೆ. ಟರ್ಬಿಡಿಟಿ ಪ್ರಮಾಣ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಪೂರೈಕೆಯಾಗುವ ನೀರನ್ನು ಕುದಿಸಿ, ಆರಿಸಿ ಕುಡಿಯುವಂತೆ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬೀಡಾಡಿ ದನಗಳಿಂದ ಪ್ರಯಾಣಿಕರಿಗೆ ಸಂಕಷ್ಟ; ಮಾಧ್ಯಮಗಳಲ್ಲಿ ವರದಿಯಾದರೆ ಮಾತ್ರ ಅಧಿಕಾರಿಗಳು ಅಲರ್ಟ್
ಕುಡಿಯಲು ಯೋಗ್ಯವಾದ ನೀರಿನಲ್ಲಿನ ಟರ್ಬಿಡಿಟಿ ಪ್ರಮಾಣ 1ಎನ್‌ಟಿಯು ಇರಬೇಕು. ಆದರೆ ಪ್ರಸ್ತುತ ತುಂಗಾ ನದಿ ನೀರಿನಲ್ಲಿ ಟರ್ಬಿಡಿಟಿ ಪ್ರಮಾಣ 5 ಎನ್‌ಟಿಯು ಇದೆಯೆಂದು ಹೇಳಲಾಗುತ್ತಿದೆ.