ಮೂರೂವರೆ ದಶಕಗಳಿಂದ ಮುದ್ರಣ ಕ್ಷೇತ್ರದಲ್ಲಿ ತೊಡಗಿದ್ದ ಕಾಶಿ ವಿಶ್ವನಾಥ್ ಭಾನುವಾರ ಮುಂಜಾನೆ ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದೆ ಆನಾರೋಗ್ಯಕ್ಕೆ ಒಳಗಾಗಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪತ್ರಕರ್ತೆ ಪತ್ನಿ ಪದ್ಮಿನಿ, ಇಬ್ಬರು ಮಕ್ಕಳು ಮತ್ತು ಅಪಾರ ಬಂಧು-ಬಳಗವನ್ನು ಕಾಶಿ ವಿಶ್ವನಾಥ್ ಅಗಲಿದ್ದಾರೆ.
ಜಿಲ್ಲಾ/ರಾಜ್ಯ ಮಟ್ಟದ ಪತ್ರಿಕೆಗಳ ಪ್ರಿಂಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕಾಶಿ ವಿಶ್ವನಾಥ್ ಸ್ವಂತ ಪ್ರಿಂಟಿಂಗ್ ಪ್ರೆಸ್ ಆರಂಭಿಸಿದ್ದರು. ಮುದ್ರಣ ಯಂತ್ರದಲ್ಲಿ ಯಾವುದೇ ದೋಷ ಕಂಡುಬಂದರೂ ಅದನ್ನು ಪರಿಹರಿಸುವಲ್ಲಿ ನಿಸ್ಸೀಮರಾಗಿದ್ದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಎಫ್‌ಪಿಒಗಳೊಂದಿಗೆ ಸೃಜನಾತ್ಮಕ ಹೆಜ್ಜೆಯನ್ನಿಡಲು ರೈತರಿಗೆ ಕರೆ
ಕಳೆದ ಆರು ತಿಂಗಳಿಂದ ಕ್ರಾಂತಿದೀಪ ಮುದ್ರಣಾಲಯದಲ್ಲಿ ಮುಖ್ಯ ಮುದ್ರಕರಾಗಿ ಕಾರ್ಯ ನಿರ್ಹಸುತ್ತಿದರು. ಪತ್ರಿಕೆಗಳ ಮುದ್ರಣ ವಿಭಾಗದ ಮೇಧಾವಿ ಕಾಶಿ ವಿಶ್ವನಾಥ್ ಅವರ ನಿಧನ ಶಿವಮೊಗ್ಗ ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ನಿಧನಕ್ಕೆ ಕ್ರಾಂತಿದೀಪ ಬಳಗ ಕಂಬನಿ ಮಿಡಿದಿದೆ.