ಶಿವಮೊಗ್ಗದಲ್ಲಿ ಏನೇ ಕಾನೂನು ಬಾಹಿರ ಚಟುವಟಿಕೆಗಳು ನಡೆದರೂ ಅದನ್ನು ಸರಿಪಡಿಸಲಾಗುವುದು. ಆದರೆ ಭದ್ರಾವತಿಯನ್ನು ರಿಪಬ್ಲಿಕ್ ಆಗಲು ಬಿಡಲ್ಲ ಎಂದು ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಭದ್ರಾವತಿ ರಿಪಬ್ಲಿಕ್ ಎಂದು ಮಾಧ್ಯಮದವರು ಕರೆಯುತ್ತಿದ್ದಾರೆ. ಆದರೆ ರಿಪಬ್ಲಿಕ್ ಆಗಲು ಬಿಡಲ್ಲ. ಪೊಲೀಸ್ ಇಲಾಖೆ ನಿಷ್ಕ್ರಿಯಗೊಳ್ಳಲು ಬಿಡುವುದಿಲ್ಲ ಎಂದು ಪುನರುಚ್ಛರಿಸಿದರು. ಭದ್ರಾವತಿಯಲ್ಲಿ ಇಸ್ಪೀಟು, ಅಕ್ರಮ ಮರಳುಗಾರಿಕೆ, ಜೂಜಾಟಗಳಂತರ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗಿವೆ. ಅನುಮಾನಸ್ಪದ ಸಾವು, ಆತ್ಮಹತ್ಯೆ ಕೊಲೆ ಪ್ರಕರಣಗಳಂತಹ ಆತಂಕಕಾರಿ ಘಟನೆಗಳು ನಡೆಯುತ್ತಿದ್ದು, ಶೀಘ್ರವೇ ಎಲ್ಲಾ ಚಟುವಟಿಕೆಗೆ ಬ್ರೇಕ್ ಹಾಕಲಾಗುವುದು ಎಂದರು.
ಕುಪ್ಪಳಿಯಲ್ಲಿ ಕುವೆಂಪು ಪ್ರತಿಷ್ಠಾನವು ಅದ್ದೂರಿ ಮದುವೆಗೆ ಅನುವು ಮಾಡಿಕೊಟ್ಟಿದೆ. ಅದನ್ನ ವಿಚಾರಿಸಿ ಕ್ರಮ ಜರುಗಿಸಲಾಗುವುದು. ಚಂದ್ರಗುತ್ತಿಯಲ್ಲಿ ಪ್ರಾಧಿಕಾರ ಮತ್ತು ಗುಡವಿಯಲ್ಲಿ ಪ್ರವಾಸೋದ್ಯಮಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲಮಪ್ರಭು ಫ್ರೀಡಂ ಪಾರ್ಕ್ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಧ್ಯಮದವರ ಹಲವು ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ l ಯೋಗ, ಧ್ಯಾನದಿಂದ ಮಕ್ಕಳು ಕ್ರಿಯಾಶೀಲರಾಗುತ್ತಾರೆ; ಆರ್ ಕೃಷ್ಣಪ್ಪ
ಹಿರಿಯ ಬಿಜೆಪಿ ನಾಯಕ ಯಡಿಯೂರಪ್ಪ ಅವರ ಚೋಟಾ ಸಹಿಯನ್ನ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಮತ್ತೊಬ್ಬ ಬಿಜೆಪಿ ನಾಯಕ ಶ್ರೀರಾಮುಲು ಕಾಂಗ್ರೆಸ್ ಪಕ್ಷ ಸೇರ್ಪಡೆ ಎನ್ನುವ ಗುಮಾನಿಗೆ ಉತ್ತರಿಸಿದ ಅವರು, ಪಕ್ಷದ ಸಿದ್ಧಾಂತಗಳನ್ನು ಒಪ್ಪಿಕೊಂಡು ಯಾರು ಬೇಕಾದರೂ ಪಕ್ಷಕ್ಕೆ ಬರಬಹುದು ಎಂದರು.