ಮಂಜುನಾಥ್ ಜಿ ಡಿ ಅವರನ್ನು ಕರ್ನಾಟಕ ರಾಜ್ಯ ಅಹಿಂದ (ಅಲ್ಪಸಂಖ್ಯಾತರ, ಹಿಂದುಳಿದವರ, ದಲಿತ ಒಕ್ಕೂಟ) ಶಿವಮೊಗ್ಗ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದೆ ಎಂದು ಅಹಿಂದ ಸಂಘಟನೆ ಶಿವಮೊಗ್ಗ ಜಿಲ್ಲಾಧ್ಯಕ್ಷ ಸಿ ಎಸ್ ಚಂದ್ರಭೂಪಾಲ ತಿಳಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಪತ್ರಿಕೆ ಹೇಳಿಕೆ ನೀಡಿರುವ ಅವರು, “ಕರ್ನಾಟಕ ಅಹಿಂದ ಸಂಘಟನೆಯ ರಾಜ್ಯಾಧ್ಯಕ್ಷ ಪ್ರಭುಲಿಂಗ ಎಲ್ ದೊಡ್ಡಿಣಿ ಅವರ ನಿರ್ದೇಶನದ ಮೇರೆಗೆ ನೇಮಕಾತಿ ಮಾಡಲಾಗಿದ್ದು, ತಾವೂ ಅಹಿಂದ ಒಕ್ಕೂಟದ ಸಿದ್ಧಾಂತಗಳಿಗೆ ಬದ್ಧರಾಗಿ ಅಹಿಂದ ಸಂಘಟನೆಗೆ ಹೆಚ್ಚಿನ ಒತ್ತುಕೊಟ್ಟು ಎಲ್ಲ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರತವಾಗಿ ಅಹಿಂದ ಸಂಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತಷ್ಟು ಸದೃಢವಾಗಿ ಮುನ್ನಡೆಸಲು ಕಾರ್ಯನಿರ್ವಹಿಸಬೇಕೆಂದು ಸೂಚನೆ ನೀಡಲಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಭೂ ಹಕ್ಕು ಕಲ್ಪಿಸುವುದು ಕಾಂಗ್ರೆಸ್ ಸರ್ಕಾರದ ಕರ್ತವ್ಯ: ಸಚಿವ ಮಧು ಬಂಗಾರಪ್ಪ
“ಅಹಿಂದ ಶಿವಮೊಗ್ಗ ಜಿಲ್ಲಾ ಘಟಕ ನೀಡುವ ಸೂಚನೆ ಮತ್ತು ಆದೇಶಗಳ ಅನುಸಾರವಾಗಿ ಜವಾಬ್ದಾರಿ ಮತ್ತು ನೀತಿ ನಿರೂಪಣೆಗಳು ಉಲ್ಲಂಘನೆಯಾಗದಂತೆ ಕರ್ತವ್ಯ ನಿರ್ವಹಿಸಲು ಅಹಿಂದ ಸಂಘಟನೆಗೆ ಇಂದಿನಿಂದಲೇ ತೊಡಗಿಸಿಕೊಂಡು ಕಾರ್ಯೋನ್ಮುಖರಾಗಬೇಕು ಹಾಗೂ ಅಹಿಂದ ಶಿವಮೊಗ್ಗ ಜಿಲ್ಲಾ ಘಟಕದ ಜತೆಗೆ ನಿರಂತರ ಸಂಪರ್ಕದಲ್ಲಿರುವಂತೆ ಸೂಚಿಸಲಾಗಿದೆ” ಎಂದು ತಿಳಿಸಿದ್ದಾರೆ.
