ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಅಪ್ತಾಪ್ತೆಯೊಬ್ಬಳು ಪತ್ತೆಯಾಗಿದ್ದಾಳೆ. ರೈಲುಗಳ ಓಡಾಟದ ಸಂದರ್ಭದಲ್ಲಿ ಶಿವಮೊಗ್ಗ ರೈಲ್ವೆ ನಿಲ್ದಾಣದ ಪ್ಲಾಟ್ಫಾರಮ್ನಲ್ಲಿ ಕಾಣಿಸಿಕೊಂಡಿದ್ದಾಳೆ.
ತುಂಬಾ ಸಮಯದಿಂದ ರೈಲು ನಿಲ್ದಾಣದಲ್ಲಿಯೇ ಓಡಾಡುತ್ತಿದ್ದ 15 ವರ್ಷದ ಅಪ್ರಾಪ್ತೆಯ ನಡೆ ಅನುಮಾನ ಮೂಡಿಸಿದ್ದರಿಂದ ರೈಲ್ವೆ ಪೊಲೀಸರು ಆಕೆಯನ್ನು ಗಮನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಪಟಾಕಿ ಅಕ್ರಮ ಮಾರಾಟ; ಮಳಿಗೆಗಳ ಮೇಲೆ ಪೊಲೀಸ್ ದಾಳಿ
ಅಪ್ರಾಪ್ತೆಯನ್ನು ರಕ್ಷಿಸಿ ರೈಲ್ವೆ ಪೊಲೀಸರು ಆಕೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೆ ಮುಂದುವರಿದ ಕಾನೂನು ಕ್ರಮವಾಗಿ ಆಕೆಯನ್ನು ಶಿವಮೊಗ್ಗ ಸುರಬಿ ಉಜ್ವಲ ಕೇಂದ್ರ ಎನ್ಜಿಒಗೆ ಒಪ್ಪಿಸಿದ್ದಾರೆ.