ಶಿವಮೊಗ್ಗದ ಅಗ್ನಿ ಶಾಮಕ ದಳದ ಠಾಣಾಧಿಕಾರಿ ನರೇಂದ್ರ ಅವರ ನೇತೃತ್ವದಲ್ಲಿ ಅಣಕು ಪ್ರದರ್ಶನದ ಮೂಲಕ ಶಾಲೆಯ ವಿದ್ಯಾರ್ಥಿಗಳಿಗೆ ಅಗ್ನಿ ಅವಘಡದ ಬಗ್ಗೆ ಮಾಹಿತಿ ನೀಡಿದರು.
“ಮುಖ್ಯವಾಗಿ ಮನೆಗಳಲ್ಲಿ ಅಡುಗೆ ಅನಿಲ ಸೋರಿಕೆಯಾದಾಗ ಯಾವ ರೀತಿಯ ಕ್ರಮ ಕೈಗೊಳ್ಳಬೇಕು. ಅಡುಗೆ ಅನಿಲದ ಒಲೆ ಮತ್ತು ಸಿಲಿಂಡರ್‌ಗೆ ಕನಿಷ್ಟ 2.5 ಅಡಿ ಅಂತರವಿರಬೇಕು. ಮತ್ತು ಸಿಲಿಂಡರ್ ಕಾಲಾವಧಿ ಅದರ ತುದಿಯಲ್ಲಿ ಎ.ಬಿ.ಸಿ.ಡಿ ಎಂದು ಹಾಕಿ ಇಸವಿ ನಮೂದಿಸಿರುತ್ತಾರೆ. ಅದನ್ನು ತಿಳಿದುಕೊಳ್ಳಬೇಕು. ಆ ಇಸವಿಯ ಒಳಗೆ ಮಾತ್ರ ಅದನ್ನು ಬಳಸಬೇಕು. ಒಂದು ವೇಳೆ ಸರಬರಾಜುದಾರರು ಅವಧಿ ಮುಗಿದ ಸಿಲಿಂಡರ್‌ಗಳನ್ನು ನೀಡಿದ್ದಲ್ಲಿ ನಿಮಗೆ ಅದರ ಅರಿವಿರಬೇಕು. ಅವಧಿ ಮುಗಿದ ಸಿಲಿಂಡರ್‌ಗಳನ್ನು ಕೂಡಲೇ ಹಿಂತಿರುಗಿಸಬೇಕು” ಎಂದು ಅಗ್ನಿ ಶಾಮಕ ದಳದ ಠಾಣಾಧಿಕಾರಿ ನರೇಂದ್ರ ತಿಳಿಸಿದರು.
ಪ್ರಮುಖವಾಗಿ ಶಾಲೆ ಕಾಲೇಜುಗಳು, ಸಿನಿಮಾ ಮಂದಿರಗಳು, ಹಾಸ್ಟೆಲ್‌ಗಳು ಸೇರಿದಂತೆ ಇತರ ಸಾರ್ವಜನಿಕ ಸ್ಥಳಗಳಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಯಾವ ರೀತಿ ವರ್ತಿಸಬೇಕು ಎಂಬುದನ್ನು ತಿಳಿಸಿದ ಅವರು ಕೂಡಲೇ 112ಕ್ಕೆ ಕರೆ ಮಾಡಿದರೆ ಅವಘಡ ಸಂಭವಿಸಿದ ಸ್ಥಳದ ಲೋಕೇಷನ್ ಸಹಿತ ಮಾಹಿತಿ ಅಗ್ನಿಶಾಮಕ ದಳಕ್ಕೆ ಸಿಗುತ್ತದೆ ಎಂದರು.
ಅಗ್ನಿಶಾಮಕ ದಳದಲ್ಲಿ ಅತ್ಯಾಧುನಿಕ ಸಲಕರಣೆಗಳು ಮತ್ತು ನುರಿತ ಸಿಬ್ಬಂದಿಗಳಿದ್ದಾರೆ. ನೀರು ಹಾಗೂ ಅಗ್ನಿ ಅವಘಡಗಳು ಸೇರಿದಂತೆ ಯಾವುದೇ ತುರ್ತು ಸಂದರ್ಭದಲ್ಲಿ ಕಾರ್ಯಾಚರಿಸಲು ಅಗ್ನಿಶಾಮಕ ದಳದಲ್ಲಿ ಎಲ್ಲ ರೀತಿಯ ಸೌಲಭ್ಯಗಳಿವೆ. ಇದರ ಅರಿವು ಪ್ರತಿಯೊಬ್ಬರಿಗೆ ಇರಬೇಕು. ಇದರಿಂದ ಅವಘಡ ತಪ್ಪಿಸಲು ಸಹಕಾರಿಯಾಗುತ್ತದೆಂದು ತಿಳಿಸಿದರು.
“ಬೆಂಕಿಯನ್ನು ನಂದಿಸಲು ಮೂರು ವಿಧಾನಗಳಿವೆ. ಅವುಗಳೆಂದರೆ ತಣಿಸುವಿಕೆ, ಮುಚ್ಚುವಿಕೆ ಮತ್ತು ಉರಿಯುವ ವಸ್ತು ಬೇರ್ಪಡಿಸುವ ಮೂಲಕ ಬೆಂಕಿ ನಂದಿಸಬಹುದು. ಅಗ್ನಿ ಅವಘಡಗಳನ್ನು ನಾಲ್ಕು ರೀತಿ ವಿಂಗಡನೆ ಮಾಡಬಹುದು *ಎ-ಕ್ಲಾಸ್ ಪೈರ್* : ಉರಿದು ಬೂದಿಯಾಗುವ ವಸ್ತುಗಳು ಉದಾ: ಕಟ್ಟಿಗೆ, ಪೇಪರ್, ಇತರೆ *ಬಿ-ಕ್ಲಾಸ್ ಪೈರ್* ಆಯಿಲ್ ಪದಾರ್ಥಗಳು ಪೆಟ್ರೋಲ್, ಡೀಸೆಲ್, ಆಯಿಲ್, ಇತರೆ *ಸಿ-ಕ್ಲಾಸ್ ಪೈರ್* ದ್ರವಗಳು, ಗ್ಯಾಸ್ ಪೈರ್ *ಡಿ-ಕ್ಲಾಸ್ ಪೈರ್* ಮೆಟಲ್ ಫೈರ್ ಎಲೆಕ್ಟ್ರಿಕಲ್ ಫೇರ್, ಹಾಗೂ ಬೆಂಕಿ ಹತ್ತಿದಾಗ ಯಾವ ಯಾವ ನಂದಕಗಳನ್ನು ಯಾವ ರೀತಿ ಬಳಸುತ್ತೇವೆಂದು ಎಲ್ಲ ಉಪಕರಣಗಳ ಪ್ರದರ್ಶನದ ಮೂಲಕ ಶಾಲಾ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಅಣಕು ಪ್ರದರ್ಶನದ ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಮದ್ಯದಲ್ಲಿ ಆ್ಯಸಿಡ್ ಬೆರೆಸಿ ಕುಡಿದ ವ್ಯಕ್ತಿ ಸಾವು: ಬಿಜೆಪಿ ಮುಖಂಡನ ವಿರುದ್ಧ ಎಫ್ಐಆರ್
ಶಿವಮೊಗ್ಗ ನಗರದ ಬಿಹೆಚ್ ರಸ್ತೆಯ ಕರ್ನಾಟಕ ಸಂಘ ಪಕ್ಕದ “ಮೇನ್ ಮಿಡ್ಲ್ ಸ್ಕೂಲ್” ಸರ್ಕಾರಿ ಪ್ರಧಾನ ಕನ್ನಡ ಮತ್ತು ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿರುವ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಬಾಲಕಿಯರ ಪ್ರೌಢಶಾಲೆ, ಉರ್ದು ಪ್ರೌಢಶಾಲೆ, ತಮಿಳು ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಇದ್ದರು.