ಶಿವಮೊಗ್ಗ ಮಹಾನಗರ ಪಾಲಿಕೆಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದು, ಗುತ್ತಿಗೆದಾರರೊಬ್ಬರಿಂದ ₹10,000 ಲಂಚ ಪಡೆಯುತ್ತಿದ್ದ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ನಗರ ಪಾಲಿಕೆಯಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಲೆಕ್ಕ ವಿಭಾಗ(ಅಕೌಂಟ್ ಸೆಕ್ಷನ್)ದಲ್ಲಿರುವ ಸಿದ್ದೇಶ್ ಎಂಬ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.

ಈ ಸುದ್ದಿ ಓದಿದ್ದೀರ ? ಧಾರವಾಡ | ಜಾನಪದ ಸಂರಕ್ಷಣೆ ಯುವಕರ ಹೊಣೆಯಾಗಿದೆ: ಡಾ. ಎಸ್ ಬಾಲಾಜಿ
ಲೋಕಾಯುಕ್ತ ಎಸ್ ಪಿ ಮಂಜುನಾಥ್ ಚೌದರಿ ತಂಡದ ಇನ್‌ಸ್ಪೆಕ್ಟರ್ ಪ್ರಕಾಶ್, ಸುರೇಶ್ ಹಾಗೂ ಇತರರನ್ನು ಒಳಗೊಂಡ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿದ್ದು, ಇನ್‌ಸ್ಪೆಕ್ಟರ್ ಪ್ರಕಾಶ್ ಪ್ರಕರಣದ ತನಿಖೆಯನ್ನು ನಡೆಸಲಿದ್ದಾರೆ.