2021ರಲ್ಲಿ ತುಂಗಾ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಾಂಜಾ ಪೆಡ್ಲರ್ ಟ್ವಿಸ್ಟ್ ಕೊಲೆ ಪ್ರಕರಣದ ಎಂಟು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಗಾಂಜಾ ಮಾಹಿತಿಯನ್ನು ಪೊಲೀಸರಿಗೆ ನೀಡುತ್ತಾನೆಂಬ ಕಾರಣಕ್ಕೆ 2021ರ ಸಮಯದಲ್ಲಿ ಟ್ವಿಸ್ಟ್ ಇರ್ಫಾನ್ ಎಂಬಾತನನ್ನು ಕೊಲೆ ಮಾಡಲಾಗಿತ್ತು. ಶಿವಮೊಗ್ಗದ ತುಂಗಾನಗರ ಠಾಣೆಯ ಇನ್ಸ್‌ಪೆಕ್ಟರ್ ದೀಪಕ್ ಹೆಗ್ಡೆಯವರು ಈ ಪ್ರಕರಣದ ತನಿಖೆಗೆ ಕೈಗೊಂಡು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಹೆಚ್ಚುವರಿ 2ನೇ ಜಿಲ್ಲಾ ನ್ಯಾಯಾಲಯ ಎಂಟು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಆರೋಪಿಗಳ ಪೈಕಿ ಒಬ್ಬಾತ ಕೊಲೆಯಾಗಿದ್ದು, ಈ ಕೊಲೆ ಪ್ರಕರಣವನ್ನೂ ಕೂಡಾ ಶಿವಮೊಗ್ಗದ ತುಂಗಾ ನಗರ ಇನ್ಸ್‌ಪೆಕ್ಟರ್ ದೀಪಕ್ ಹೆಗಡೆ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದರು. ಎರಡನೇ ಹೆಚ್ಚುವರಿ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶೆ ಪಲ್ಲವಿ ಅವರು ತೀರು ನೀಡಿ ಅದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕರಾಗಿ ಪುಷ್ಪಾರವರು ಸಾಕ್ಷಿಗಳ ವಿಚಾರಣೆ ನಡೆಸಿ ವಾದ ಮಂಡಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಕುಂದಗೋಳ ತಾಲೂಕಿನಲ್ಲಿ ಸಮಸ್ಯೆಗಳದ್ದೇ ಕಾರುಬಾರು; ಕ್ಯಾರೇ ಎನ್ನದ ಅಧಿಕಾರಿಗಳು!
ಆರೋಪಿಗಳಾದ ಲತೀಫ್, ಪರ್ವೇಜ್, ಸಯಾದ್ ಜಿಲಾನ್ ,ಜಾಫರ್ ಸಾಧಿಕ್, ಸೈಯದ್, ರಾಜೇಶ್, ಮಹಮದ್ ಶಬಾಜ್, ಶಾಬೀರ್, ಮಹಮದ್ ಯೂಸುಫ್ ತಂಡ ಇರ್ಫಾನನ್ನು ಮರಾಕಾಸ್ತ್ರದಿಂದ ಕೊಲೆ ಮಾಡಿದ್ದರು. ತುಂಗಾ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದೀಪಕ್ ಹೆಗಡೆಯವರು ತುಂಗಾನಗರ ಠಾಣೆಯಲ್ಲಿ ಸೇವೆ ಸಲ್ಲಿಸಿದಾಗ ವಿವಿಧ ಕೊಲೆ ಪ್ರಕರಣ ಸೇರಿದಂತೆ ತನಿಖೆ ನಡೆಸಿದ ಮೂರು ಪ್ರಕರಣಗಳಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗಿದ್ದು, ಸದರಿ ಟ್ವಿಸ್ಟ್ ಇರ್ಫಾನ್ ಪ್ರಕರಣದಲ್ಲಿ ಎಂಟು ಮಂದಿಗೆ, ಉಳಿದ ಎರಡು ಪ್ರಕರಣದಲ್ಲಿ ತಲಾ ನಾಲ್ಕು ಮತ್ತು ಇನ್ನೆರೆಡು ಕೊಲೆ ಆರೋಪಿಗಳಿಗೂ ಜೀವಾವಧಿ ಶಿಕ್ಷೆಯಾಗಿದೆ ಎನ್ನಲಾಗಿದೆ.
ವರದಿ : ಲಿಯೋ ಅರೋಜ, ಪತ್ರಕರ್ತರು ತೀರ್ಥಹಳ್ಳಿ