ಶಿವಮೊಗ್ಗ | ಪಾಸ್‌ಪೋರ್ಟ್‌ ಅರ್ಜಿ ತಿರಸ್ಕಾರ; ವಾಸ್ತುಶಿಲ್ಪಿ ಕೆ ಜಿ ಶ್ರೀಧರ್ ಏಕಾಂಗಿ ಧರಣಿ

Date:

ಪಾಸ್‌ಪೋರ್ಟ್‌ ನೀಡುವ ವಿಚಾರವಾಗಿ ಏರ್‌ಪೋರ್ಟ್‌ ವಿಭಾಗದ ಅಧಿಕಾರಿಗಳು ಅನಗತ್ಯ ಗೊಂದಲ ಮಾಡುತ್ತಿದ್ದು, ತಮಗೆ ಪಾಸ್‌ಪೋರ್ಟ್‌ ನೀಡಲು ನಿರಾಕರಿಸಿದ್ದಾರೆ ಎಂದು ಆರೋಪಿಸಿ ತೀರ್ಥಹಳ್ಳಿಯ ಪ್ರಖ್ಯಾತ ವಾಸ್ತುಶಿಲ್ಪಿ ಕೆ ಜಿ ಶ್ರೀಧರ್ ಏಕಾಂಗಿ ಧರಣಿ ನಡೆಸುತ್ತಿದ್ದಾರೆ.

- Advertisement -

ಶಿವಮೊಗ್ಗ ನಗರದ ಪೋಸ್ಟ್‌ ಆಫೀಸ್‌ ಕಚೇರಿ ಆವರಣದಲ್ಲಿನ ಪಾಸ್‌ಪೋರ್ಟ್‌ ಕಚೇರಿ ಮುಂದೆ ಶ್ರೀಧರ್‌ ಧರಣಿ ಕುಳಿತಿದ್ದಾರೆ. ಕೈಯಲ್ಲಿ “ನಾನು ಸಲ್ಲಿಸಿದ ಪಾಸ್‌ಪೋರ್ಟ್‌ ಅರ್ಜಿಯನ್ನು ನಿರಾಕರಿಸುವಾಗ ಹೆಸರು ಬದಲಾವಣೆಯ ಪ್ರಕಟಣೆಯನ್ನು ಇಂಗ್ಲೀಷ್‌ ಪತ್ರಿಕೆಯಲ್ಲಿ ಪ್ರಕಟಿಸಿದ್ದೇನೆ ಎಂಬಂತಹ ನಿಯಮ ಇರುವುದನ್ನು ಏರ್‌ಪೋರ್ಟ್‌ ವಿಭಾಗದ ಅಧಿಕಾರಿಗಳು ನನಗೆ ಬರೆದುಕೊಡಬೇಕು” ಎಂದು ಆಗ್ರಹಿಸಿ ಪೋಸ್ಟರ್‌ವೊಂದನ್ನು ಹಿಡಿದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

​ಮೋದಿ-ಶಾ ಅಸಲಿ ಮುಖ ಅನಾವರಣ: ಅಂಕಿತಾ ಭಂಡಾರಿ ಕೊಲೆ...

ವೇದಿಕೆಗಳಲ್ಲಿ ‘ಬೇಟಿ ಬಚಾವೋ’ ಎಂದು ಭಾಷಣ ಬಿಗಿಯುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು, ಹಾಡಹಗಲೇ ಕೊಲೆಯಾದ ಬಡ ಯುವತಿಯ ಸಾವಿನ ಸುತ್ತ ಕಳಂಕದ ಹುತ್ತ ಹೊತ್ತಿರುವ...

ನಿದ್ರೆಯಲ್ಲೂ ಮಿದುಳಿಗೆ ಮಸಾಜ್‌! ಮಾತ್ರೆಯಿಲ್ಲದೆ ಗಾಢ ನಿದ್ರೆ ತರಬಲ್ಲದೇ...

ಒತ್ತಡದ ಬದುಕಿನಲ್ಲಿ ನೆಮ್ಮದಿಯ ನಿದ್ರೆ ಎನ್ನುವುದೇ ಹಲವರ ಕನಸು. ನಿದ್ರೆಗಾಗಿ ಮಾತ್ರೆಗಳ ಮೊರೆ ಹೋಗುವವರ ಸಂಖ್ಯೆಯೂ ಕಡಿಮೆಯಿಲ್ಲ. ಇಂತಹವರ ಸಮಸ್ಯೆಗೆ ಪರ್ಯಾಯವೊಂದು ಸಿಕ್ಕರೆ ಹೇಗಿರಬಹುದು? ಮೆದುಳಿಗೆ ಅಲ್ಟ್ರಾಸೌಂಡ್‌ ತರಂಗಗಳ ಮೂಲಕ ಪ್ರಚೋದನೆ ನೀಡಿ...

ಸಾರ್ವಜನಿಕ ಸಭ್ಯತೆ ಮತ್ತು ಹೆಣ್ಣುಮಕ್ಕಳು ಮಾಡಿಕೊಳ್ಳುವ ಲೆಕ್ಕಾಚಾರಗಳು

ಫೀಲ್ಡ್‌ಗೆ ಇಳಿದು ಕೆಲಸ ಮಾಡುವಾಗ ಮಹಿಳಾ ಪತ್ರಕರ್ತೆಯರು ಎದುರಿಸುವ ರಿಸ್ಕ್ ಮತ್ತು ವರದಿ ಮಾಡುವ ಜವಾಬ್ದಾರಿ- ಇವೆರಡನ್ನೂ ನಿಭಾಯಿಸಬೇಕಾದಾಗ ಮಾಡಿಕೊಳ್ಳುವ ಲೆಕ್ಕಾಚಾರಗಳ ಬಗೆಗಿನ ಒಂದು ಸ್ವಾನುಭವ. ಕಳೆದ ಕೆಲವು ವಾರಗಳಿಂದ ಭಾರತದಲ್ಲಿ ಹೆಣ್ಣುಮಕ್ಕಳ ಮೇಲೆ...

ಧರಣಿ ಕುಳಿತ ಶ್ರೀಧರ್‌ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಪಾಸ್‌ ಪೋರ್ಟ್‌ ಮತ್ತು ಆಧಾರ್‌ ಕಾರ್ಡ್‌ನಲ್ಲಿ ಹೆಸರು ಬದಲಾಗಿದೆಯೆಂದು ಪಾಸ್‌ಪೋರ್ಟ್‌ ತಿರಸ್ಕರಿಸಿದ್ದರು. ಹಾಗಾಗಿ ನಾನು ಹೊಸ ಪಾಸ್‌ಪೋರ್ಟ್‌ ಮಾಡಿಸುವ ಸಲುವಾಗಿ ನನ್ನ ಹೆಸರನ್ನು ಲಾಯರ್‌ ಅಫಿಡವಿಟ್‌ ಮಾಡಿ ಆಧಾರ್‌ನಲ್ಲಿರುವಂತೆಯೇ ಹೆಸರು ಸರಿಪಡಿಸಿಕೊಂಡಿದ್ದೇನೆ. ಈಗ ಬಂದು ಕೇಳಿದರೆ, ಹೆಸರು ಬದಲಾವಣೆಯ ಪ್ರಕಟಣೆಯನ್ನು ಇಂಗ್ಲೀಷ್‌ ಪತ್ರಿಕೆಯಲ್ಲಿ ಪ್ರಕಟಿಸಿರಬೇಕೆಂದು ಹೇಳುತ್ತಿದ್ದಾರೆ” ಎಂದು ಆರೋಪಿಸಿದರು.

ಪಾಸ್‌ಪೋರ್ಟ್‌ ತಿರಸ್ಕೃತ ಕೆ ಜಿ ಶ್ರೀಧರ್

“ಪ್ರತಿ ಬಾರಿ ಬಂದು ಕೇಳುವಾಗಲೂ ಒಂದೊಂದು ಕಾರಣ ಹೇಳುತ್ತಾರೆ. ಅವರ ಹತ್ತಿರ ಹೋಗಿ, ಇವರ ಹತ್ತಿರ ಹೋಗಿ ಸರಿಮಾಡಿಸಿಕೊಂಡು ಬನ್ನಿ ಅಂತ ಹೇಳುತ್ತಾರೆ. ಯಾರೂ ಮಾಡುವುದಿಲ್ಲ. ಇವರೆಲ್ಲ ಒಂದು ನೆಟ್ವರ್ಕ್‌ ಮಾಡಿಕೊಂಡಿದ್ದಾರೆ ಅನ್ನಿಸುತ್ತಿದೆ. ಗ್ರಾಹಕರ ಸಂಪರ್ಕಕ್ಕೆಂದು ಒಂದು ನಂಬರ್‌ ಹಾಕಿದ್ದಾರೆ. ಅದಕ್ಕೆ ಕಾಲ್‌ ಮಾಡಿದರೆ ನಂಬರ್‌ ಚಾಲ್ತಿಯಲ್ಲಿ ಇಲ್ಲ ಎಂದು ಬರುತ್ತಿದೆ. ಇವರು ಜನಗಳಿಗೆ ತಪ್ಪು ಮಾಹಿತಿ ಕೊಡುತ್ತಿದ್ದಾರೆ” ಎಂದು ದೂರಿದರು.

“ಇವರು ಜನರ ಸೇವೆ ಮಾಡುತ್ತಿಲ್ಲ, ಜನರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು, ಹಣ ಖರ್ಚು ಮಾಡಿ, ಸಮಯ ಮೀಸಲಿಟ್ಟಿರುತ್ತಾರೆಂಬ ಯಾವುದೇ ಗೋಜಿಲ್ಲ. ಅಧಿಕಾರಿಗಳು ತುಂಬಾ ಉದಾಸೀನ ತೋರುತ್ತಾರೆ. ಸುಮ್ಮನೆ ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ ತಿರುಗಿಸುತ್ತಿದ್ದಾರೆ. ಹೆಸರು ಬದಲಾವಣೆ ಕುರಿತು ಇಂಗ್ಲಿಷ್‌ ಪತ್ರಿಕೆಯಲ್ಲಿ ಪ್ರಕಟಿಸಬೇಕೆಂಬುದನ್ನು ನನಗೆ ಅಕ್ಷರಗಳಲ್ಲಿ ಬರೆದು ಕೊಡಬೇಕು, ನನಗೆ ಇವರು ಕ್ಲಾರಿಟಿ ಕೊಡಬೇಕು. ಹಾಗಾಗಿ ನಾನು ಧರಣಿ ಕೂತಿದ್ದೀನಿ” ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ಧಾರವಾಡ | ವಕ್ಫ್ ಆಸ್ತಿ ವಿವಾದ: ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

“ಇದು ಕೇಂದ್ರ ಸರ್ಕಾರದ ಕಾನೂನು ಅಲ್ಲವೇ, ಎಂಪಿಯವರೇ ಬಂದು ಇಲ್ಲಿಯ ವ್ಯವಸ್ಥೆಯನ್ನೊಮ್ಮೆ ಪರಿಶೀಲಿಸಲಿ. ಅವರೇ ನನಗೆ ಈ ಕಾನೂನಿನ ಕುರಿತು ನ್ಯಾಯ ನೀಡಲಿ” ಎಂದು ಕೆ ಜಿ ಶ್ರೀಧರ್ ಪಟ್ಟುಹಿಡಿದಿದ್ದಾರೆ.

ಈ ದಿನ.ಕಾಮ್‌ ಸ್ಥಳದಲ್ಲಿರುವುದನ್ನು ಕಂಡ ಮಹೇಶ್ ಎಂಬ ಅಧಿಕಾರಿಯೊಬ್ಬರು, “ಯಾರು ಸುದ್ದಿ ಮಾಧ್ಯಮದವರು, ಇಲ್ಲಿ ಬರುವಂತಿಲ್ಲ. ನೀವು ಪೊಲೀಸರನ್ನು ಕರೆತಂದು ಸಮಸ್ಯೆ ಬಗೆಹರಿಸಿಕೊಳ್ಳಿ” ಎಂದು ವರದಿಗಾರರ ಮೇಲೆ ದರ್ಪದ ಮಾತುಗಳನ್ನು ಆಡಿದರು.

WhatsApp Image 2025 11 17 at 5.17.05 PM
ರಾಘವೇಂದ್ರ, ಶಿವಮೊಗ್ಗ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹುಬ್ಬಳ್ಳಿ | ಬೆಲೆ ಏರಿಕೆ, ಭ್ರಷ್ಟಾಚಾರ ಮಾತ್ರ ನಿರಂತರ ಜಾರಿಯಲ್ಲಿದೆ: ಸಿ.ಟಿ. ರವಿ ವಾಗ್ದಾಳಿ

"ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿಗಳು ಪಂಚರ್‌ ಆಗಿದ್ದು, ಬೆಲೆ ಏರಿಕೆ ಮತ್ತು...

ಕಾರವಾರ | ನೌಕಾಪಡೆಗೆ ಸ್ವದೇಶಿ ‘ಐಎನ್‌ಎಸ್ ಸಮರ್ಥಕ್’ ಸೇರ್ಪಡೆ

ಕಾರವಾರ: ಭಾರತೀಯ ನೌಕಾಪಡೆಯ ಸ್ವದೇಶಿ ನಿರ್ಮಿತ ಬಹು ಉದ್ದೇಶದ ನೌಕೆ ಐಎನ್‌ಎಸ್...

SIR ರದ್ದುಗೊಳಿಸಿ, ಮುಖ್ಯ ಚುನಾವಣಾ ಆಯುಕ್ತರನ್ನು ವಜಾಗೊಳಿಸಿ: ಆಗ್ರಹ

ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ...

ಎರಡು ದಿನದ ಕಂಬಳಕ್ಕಾಗಿ ಪರಿಸರ ಬಲಿ? ಕೆರೆಯ ಜಾಗ, ಮರಗಳ ತೆರವಿನ ಸುತ್ತ ಗಂಭೀರ ಪ್ರಶ್ನೆಗಳು!

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಕಂಬಳ ಆಯೋಜಿಸುವ ನಿರ್ಧಾರ ಈಗ ಕೇವಲ...