ಶಿವಮೊಗ್ಗ | 40 ವರ್ಷ ದುಡಿದರೂ ಗಜಾನನ ಸಂಸ್ಥೆ ಕಾರ್ಮಿಕರ ಬದುಕಿಗಿಲ್ಲ ಭದ್ರತೆ!

Date:

ಮಲೆನಾಡಿನ ಸಾರಿಗೆ ಕ್ಷೇತ್ರದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿದ್ದ ಸಾಗರ ತಾಲೂಕಿನ ಹೆಸರಾಂತ ಗಜಾನನ ಬಸ್ ಸಂಸ್ಥೆ ಒಂದು ಕಾಲದಲ್ಲಿ ಸುಮಾರು 150ಕ್ಕೂ ಹೆಚ್ಚು ಬಸ್‌ಗಳ ಮೂಲಕ ಜನಪ್ರಿಯತೆ ಗಳಿಸಿತ್ತು. ಸಂಸ್ಥೆಯ ಬೆಳವಣಿಗೆಯಲ್ಲಿ ಚಾಲಕರು, ನಿರ್ವಾಹಕರು, ಕ್ಲರ್ಕ್‌ಗಳು, ಮೆಕ್ಯಾನಿಕ್‌ಗಳು ಸೇರಿದಂತೆ ನೂರಾರು ಕಾರ್ಮಿಕರ ಪರಿಶ್ರಮವೂ ಅಡಗಿತ್ತು. ಅಂದು ಸಂಸ್ಥೆಯ ಆಡಳಿತ ವ್ಯವಸ್ಥೆ ಮತ್ತು ಕಾರ್ಮಿಕರ ನಡುವಿನ ಸಂಬಂಧ ಉತ್ತಮವಾಗಿತ್ತು. ಕಾರ್ಮಿಕರು ಸಂಸ್ಥೆಯ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದರು.

ಆದರೆ ಇಂದು ಅದೇ ಸಂಸ್ಥೆಯಲ್ಲಿ ವರ್ಷಾನುಗಟ್ಟಲೆ ಸೇವೆ ಸಲ್ಲಿಸಿದ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಕಾಲದಲ್ಲಿ ಮಲೆನಾಡಿನ ಪ್ರಮುಖ ಸಾರಿಗೆ ಸಂಸ್ಥೆಗಳಲ್ಲಿ ಒಂದಾಗಿದ್ದ ಗಜಾನನ ಸಂಸ್ಥೆ ಕೋವಿಡ್ ಸಂದರ್ಭದಲ್ಲಿ ಆರ್ಥಿಕ ನಷ್ಟ ಅನುಭವಿಸಿತು ಎನ್ನಲಾಗಿದ್ದು, ನಂತರ ದುರ್ಗಾಂಬ ಸಂಸ್ಥೆ (ಗಿರಿಜಾ ಗ್ರೂಪ್) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಸಂಸ್ಥೆಯ ಆಡಳಿತಾತ್ಮಕ ಬದಲಾವಣೆಗಳ ನಡುವೆ ಕಾರ್ಮಿಕರ ಭವಿಷ್ಯ ಮಾತ್ರ ಅನಿಶ್ಚಿತತೆಗೆ ಸಿಲುಕಿದೆ ಎಂಬುದು ಕಾರ್ಮಿಕರ ಅಳಲು.

- Advertisement -

ಇಂದು ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಹಾಗೂ ಸೇವೆಯಿಂದ ನಿವೃತ್ತರಾದ ಅನೇಕ ಕಾರ್ಮಿಕರು ತಮ್ಮ ಬದುಕಿನ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿದ್ದಾರೆ. ನಿವೃತ್ತಿ ಹೊಂದಿದವರಿಗೆ ಗ್ರಾಚ್ಯುಟಿ ಹಣ ಪಾವತಿಯಾಗಿಲ್ಲ, ವೇತನದಿಂದ ಕಡಿತ ಮಾಡಲಾದ PF ಮತ್ತು ESI ಹಣ ಜಮೆಯಾಗಿಲ್ಲ, ಕೋವಿಡ್ ಸಂದರ್ಭದಲ್ಲಿ ಏಕಾಏಕಿ ಕೆಲಸದಿಂದ ತೆಗೆದುಹಾಕಲಾಗಿದೆ ಎಂಬ ಆರೋಪಗಳು ಕಾರ್ಮಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ರಾಜಕೀಯ ಪಕ್ಷಗಳಿಗೆ ಪ್ರವೇಶವಿಲ್ಲ: ಚುನಾವಣೆ ಬಹಿಷ್ಕರಿಸಿದ ಹೊನ್ನಗುಂಡಿ ಗ್ರಾಮಸ್ಥರು!

ಅದೆಷ್ಟೋ ಚುನಾವಣೆ ನಡೆದು ಹೋದವು, ಆದರೆ ನಮ್ಮೂರಿಗೆ ಮೂಲಭೂತ ಸೌಕರ್ಯಗಳಿಲ್ಲ. ಕನಿಷ್ಠ ಸೌಲಭ್ಯವಾದ ಡಾಂಬರ್ ರಸ್ತೆ ಕಾಣದೆ ಅದೆಷ್ಟೋ ವರ್ಷ ಕಳೆದಿದೆ. ನಮ್ಮ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ ಯಾವ ರಾಜಕೀಯ ಪಕ್ಷಗಳು...

ಪ.ಬಂಗಾಳ- SIR ಮೇಲ್ಮನವಿ | 19 ನ್ಯಾಯಾಧಿಕರಣಗಳ ದುರ್ಗತಿ-...

ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ (ಎಸ್‌ಐಆರ್‌) ಮೇಲ್ಮನವಿಗಳ ಇತ್ಯರ್ಥಕ್ಕೆ ಸ್ಥಾಪಿಸಲಾದ 19 ನ್ಯಾಯಾಧಿಕರಣಗಳು ಸಾಲುಸಾಲು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿವೆ. ಕಾರ್ಯಭಾರ, ಕೆಂಪುಪಟ್ಟಿ ಆಡಳಿತದಿಂದ ನಿವೃತ್ತ ನ್ಯಾಯಮೂರ್ತಿಗಳ ರಾಜೀನಾಮೆ, ಸಿಬ್ಬಂದಿಯ ವೇತನ ವಿಳಂಬದ...

ಕೃಷಿಮೇಳ | ‘ಪ್ರಕೃತಿ ಕೊಡಾದೆಲ್ಲ ಒಳ್ಳೀದೆ ಇರ್ತೈತಿ, ಮನ್ಷಾನೇ...

"ಪ್ರಕೃತಿ ಮನುಷ್ಯನಿಗೆ ಕೊಡುವುದೆಲ್ಲವೂ ಒಳ್ಳೆಯದೇ ಇರುತ್ತದೆ, ಆದರೆ ಮನುಷ್ಯ ಪ್ರಕೃತಿಯನ್ನು ಮರೆತು ಏನೇನೋ ಹುಡುಕಿಕೊಂಡು ಹೊರಟಿದ್ದಾನೆ" ಇದು ತಲೆಮಾರುಗಳಿಂದ ಕಂಬಳಿ ನೇಯ್ದು ಬದುಕು ಕಟ್ಟಿಕೊಂಡಿರುವ ಕಂಬಳಿ ನೇಕಾರರ ಮನದಾಳ. ಅಜ್ಜ-ಮುತ್ತಜ್ಜರ ಕಾಲದಿಂದಲೂ ನಡೆದುಕೊಂಡು...

ಸಂಸ್ಥೆಯನ್ನು ಬೆಳೆಸಿದವರ ಬದುಕೇ ಇಂದು ಬೀದಿಗೆ?

ಯಾವುದೇ ಒಂದು ಸಾರಿಗೆ ಸಂಸ್ಥೆ ಬೆಳೆಯಬೇಕಾದರೆ ಅದರ ಹಿಂದೆ ಚಾಲಕರು, ನಿರ್ವಾಹಕರು, ಮೆಕ್ಯಾನಿಕ್‌ಗಳು, ಕ್ಲರ್ಕ್‌ಗಳು ಹಾಗೂ ಇತರ ಸಿಬ್ಬಂದಿಯ ಶ್ರಮ ಬಹಳ ಮುಖ್ಯ. ಬಿಸಿಲು, ಮಳೆ ಎನ್ನದೆ ರಸ್ತೆಯಲ್ಲಿ ಬಸ್ ಚಲಾಯಿಸುವ ಚಾಲಕರು, ಪ್ರಯಾಣಿಕರ ಸುರಕ್ಷತೆ ನೋಡಿಕೊಳ್ಳುವ ನಿರ್ವಾಹಕರು, ವಾಹನಗಳ ನಿರ್ವಹಣೆಯಲ್ಲಿ ತೊಡಗಿರುವ ಮೆಕ್ಯಾನಿಕ್‌ಗಳು ಹೀಗೆ ಪ್ರತಿಯೊಬ್ಬ ಕಾರ್ಮಿಕನ ಪರಿಶ್ರಮದಿಂದಲೇ ಸಂಸ್ಥೆ ಮುನ್ನಡೆಯುತ್ತದೆ. ಆದರೆ ಇಂದು ಗಜಾನನ ಬಸ್ ಸಂಸ್ಥೆಯಲ್ಲಿ ದುಡಿದ ಕಾರ್ಮಿಕರು ತಮ್ಮ ಬದುಕಿನ ಭದ್ರತೆಗಾಗಿ ಪರದಾಡುತ್ತಿರುವ ಆರೋಪ ಕೇಳಿಬರುತ್ತಿದೆ.

298dee8e 9a72 4df3 ac96 119b7613858f
ಪಾಂಡುರಂಗ

ಕಳೆದ 5ರಿಂದ 6 ವರ್ಷಗಳಿಂದ ನಿವೃತ್ತರಾದ ಕೆಲವು ಕಾರ್ಮಿಕರಿಗೆ ಗ್ರಾಚ್ಯುಟಿ ಹಣ ಪಾವತಿಯಾಗಿಲ್ಲ ಎನ್ನಲಾಗಿದೆ. ನಿವೃತ್ತಿಯ ನಂತರ ಜೀವನ ನಿರ್ವಹಣೆಗೆ ಆಧಾರವಾಗಬೇಕಿದ್ದ ಹಣವೇ ಸಿಗದಿದ್ದರೆ ಆ ಕಾರ್ಮಿಕರ ಪರಿಸ್ಥಿತಿ ಹೇಗಿರಬಹುದು? ವರ್ಷಾನುಗಟ್ಟಲೆ ದುಡಿದು ವಯಸ್ಸಾದ ನಂತರ ನಿವೃತ್ತ ಜೀವನ ನಡೆಸಬೇಕಾದವರು ತಮ್ಮ ಹಕ್ಕಿನ ಹಣಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆಯಬೇಕಾದ ಪರಿಸ್ಥಿತಿ ಎದುರಾಗಿರುವುದು ನೋವಿನ ಸಂಗತಿ.

40 ವರ್ಷಗಳ ಸೇವೆ ಸಲ್ಲಿಸಿದ ಗೋಪಾಲ್ ಅವರ ಕಣ್ಣೀರಿನ ಕಥೆ!

ಜೀವನದ ಬಹುಪಾಲು ಸಮಯವನ್ನು ಒಂದೇ ಸಂಸ್ಥೆಯ ಅಭಿವೃದ್ಧಿಗಾಗಿ ಮೀಸಲಿಟ್ಟ ಅವರು ಇಂದು ನಿವೃತ್ತ ಜೀವನದ ಹಂತದಲ್ಲಿದ್ದಾರೆ. ನಾಲ್ಕು ದಶಕಗಳ ಕಾಲ ಸಂಸ್ಥೆಯೊಂದಿಗೆ ಗುರುತಿಸಿಕೊಂಡು ದುಡಿದ ವ್ಯಕ್ತಿಗೆ ನಿವೃತ್ತಿಯ ನಂತರ ನೆಮ್ಮದಿಯಿಂದ ಬದುಕುವ ಭರವಸೆ ಇರಬೇಕಲ್ಲವೇ? ಆದರೆ, ತಮ್ಮ ನಿವೃತ್ತಿ ಸೌಲಭ್ಯಗಳ ವಿಚಾರದಲ್ಲಿ ಎದುರಾಗಿರುವ ಸಮಸ್ಯೆಗಳ ಬಗ್ಗೆ ಅವರು ನಮ್ಮ ಈ ದಿನ.ಕಾಮ್‌ ಜೊತೆಗೆ ಮಾತನಾಡಿ ನೋವು ತೋಡಿಕೊಂಡಿದ್ದು, ನಮಗೆ ನ್ಯಾಯ ಒದಗಿಸಿ ಎಂದು ಮನವಿ ಮಾಡಿದ್ದಾರೆ.

564446fb 1d3c 49fa b566 01aec91fe04a
ಎಂ. ಗೋಪಾಲ್

ಕೋವಿಡ್ ನೆಪದಲ್ಲಿ ಕಾರ್ಮಿಕರ ಉದ್ಯೋಗಕ್ಕೆ ಕತ್ತರಿ?

ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ದೇಶದ ಅನೇಕ ಉದ್ಯಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದವು. ಸಾರಿಗೆ ಕ್ಷೇತ್ರವೂ ಇದರಿಂದ ಹೊರತಾಗಿರಲಿಲ್ಲ. ಬಸ್ ಸಂಚಾರ ಸ್ಥಗಿತಗೊಂಡ ಪರಿಣಾಮ ಅನೇಕ ಸಂಸ್ಥೆಗಳು ನಷ್ಟ ಅನುಭವಿಸಿದವು ಎಂಬುದು ವಾಸ್ತವ. ಕೋವಿಡ್ ಸಂದರ್ಭದಲ್ಲಿ ಏಕಾಏಕಿ ಹಲವು ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂಬ ಆರೋಪವಿದೆ. ಜೊತೆಗೆ ನಂತರದ ಅವಧಿಯಲ್ಲಿ ಖಾಯಂ ಸ್ವರೂಪದ ಕೆಲಸ ನಿರ್ವಹಿಸುತ್ತಿದ್ದವರನ್ನು ದಿನಗೂಲಿ ಕಾರ್ಮಿಕರಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಕಾರ್ಮಿಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ವೇತನದಿಂದ ಕಡಿತವಾದ PF ಮತ್ತು ESI ಹಣ ಎಲ್ಲಿ?

ಕಾರ್ಮಿಕರ ವೇತನದಿಂದ ಕಡಿತ ಮಾಡಲಾದ PF ಮತ್ತು ESI ಹಣವನ್ನು ಸಂಬಂಧಪಟ್ಟ ಸರ್ಕಾರಿ ವ್ಯವಸ್ಥೆಗಳಿಗೆ ಜಮೆ ಮಾಡಿಲ್ಲ ಎಂಬ ಆರೋಪವಿದ್ದು. ಸಾಮಾನ್ಯವಾಗಿ ಕಾರ್ಮಿಕರ ವೇತನದಲ್ಲಿ PF ಮತ್ತು ESI ಮೊತ್ತ ಕಡಿತವಾಗುವುದು ಭವಿಷ್ಯದ ಆರ್ಥಿಕ ಭದ್ರತೆ, ವೈದ್ಯಕೀಯ ಸೌಲಭ್ಯಗಳಿಗಾಗಿ. ವೇತನದಿಂದ ಹಣ ಕಡಿತವಾಗಿದ್ದರೂ ಸಂಬಂಧಪಟ್ಟ ಖಾತೆಗೆ ಜಮೆಯಾಗಿಲ್ಲ. ಸಂಬಂಧಪಟ್ಟ ಸಂಸ್ಥೆಗಳ ಮೂಲಕ ಕಾರ್ಮಿಕರ PF ಪಾಸ್‌ಬುಕ್, ESI ದಾಖಲೆಗಳು, ವೇತನ ಚೀಟಿಗಳು ಹಾಗೂ ಪಾವತಿ ವಿವರಗಳನ್ನು ಪರಿಶೀಲಿಸಿ ನಿಜಾಂಶವನ್ನು ಹೊರತರಬೇಕಿದೆ.

ಕಾರ್ಮಿಕ ಇಲಾಖೆಯ ವಿರುದ್ಧ ತೀ.ನಾ. ಶ್ರೀನಿವಾಸ್ ಕಿಡಿ

ಈ ವಿಚಾರವಾಗಿ ಮಲೆನಾಡು ರೈತ ಹೋರಾಟ ಸಮಿತಿಯ ತೀ.ನಾ. ಶ್ರೀನಿವಾಸ್ ಅವರು ನಮ್ಮ ಈದಿನ.ಕಾಮ್‌ ಜೊತೆಗೆ ಮಾತನಾಡಿ ಕಾರ್ಮಿಕರ ಸಮಸ್ಯೆಗಳ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಕಾರ್ಮಿಕರು ವರ್ಷಾನುಗಟ್ಟಲೆ ದುಡಿದು ತಮ್ಮ ಜೀವನವನ್ನು ಸಂಸ್ಥೆಗೆ ಮೀಸಲಿಟ್ಟಿದ್ದಾರೆ. ಅಂತಹ ಕಾರ್ಮಿಕರಿಗೆ ಅವರ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡುವ ಪರಿಸ್ಥಿತಿ ಬಂದಿರುವುದು ವಿಷಾದನೀಯ. ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಬೇಕಾದ ಇಲಾಖೆಯ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.ಕಾರ್ಮಿಕ ವರ್ಗಕ್ಕೆ ಒಂದು ನ್ಯಾಯ, ಮಾಲೀಕರಿಗೆ ಮತ್ತೊಂದು ನ್ಯಾಯ ಎಂಬ ರೀತಿಯ ವ್ಯವಸ್ಥೆ ಇರಬಾರದು. ಕಾನೂನು ಎಲ್ಲರಿಗೂ ಸಮಾನವಾಗಿರಬೇಕು. ಕಾರ್ಮಿಕರ ಶ್ರಮದಿಂದ ಸಂಸ್ಥೆಗಳು ಬೆಳೆಯುತ್ತವೆ ಎಂಬುದನ್ನು ಆಡಳಿತ ಮಂಡಳಿಗಳು ಮರೆಯಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸೀನಿಯರ್ ಕ್ಲರ್ಕ್ ಪುಷ್ಪರಾಜ್ ಅವರ ಗಂಭೀರ ಆರೋಪಗಳೇನು?

ಗಜಾನನ ಬಸ್ ಸಂಸ್ಥೆಯ ಸೀನಿಯರ್ ಕ್ಲರ್ಕ್ ಹಾಗೂ ಗಜಾನನ ಬಸ್ ಕಾರ್ಮಿಕ ಸಂಘದ ಉಪಾಧ್ಯಕ್ಷ ಪುಷ್ಪರಾಜ್ ಮಾತನಾಡಿ, “ಸಂಸ್ಥೆಯ ಕಾರ್ಮಿಕರಿಗೆ ವಿವಿಧ ರೀತಿಯ ಅನ್ಯಾಯವಾಗಿದೆ. ಇದರ ಜೊತೆಗೆ ದುರ್ಗಾಂಬ ಸಂಸ್ಥೆಯ ಬಸ್ ಸಂಚಾರಕ್ಕೆ ಸಂಬಂಧಿಸಿದಂತೆ MTW ಕಾಯ್ದೆಯಡಿ ಅಗತ್ಯ ಪರವಾನಗಿ ಪಡೆಯದೆ ಸಂಚಾರ ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ.ಈ ವಿಚಾರದಲ್ಲಿ ಸಾರಿಗೆ ಇಲಾಖೆ ಸಮಗ್ರ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಸಾರಿಗೆ ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಒತ್ತಾಯಿಸಿದ್ದಾರೆ.

1f5dec26 8828 4a42 80a0 770544a8c12e
ಪುಷ್ಪರಾಜ್ ಸೀನಿಯರ್ ಕ್ಲರ್ಕ್ ಗಜಾನನ ಬಸ್

ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿದರೂ ನ್ಯಾಯ ಸಿಗಲಿಲ್ಲವೇ?

“ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಈಗಾಗಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತಮ್ಮ ಅಹವಾಲುಗಳನ್ನು ಸಲ್ಲಿಸಿದ್ದೇವೆ. ನಮ್ಮ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದರೂ ಇದುವರೆಗೆ ನಿರೀಕ್ಷಿತ ನ್ಯಾಯ ದೊರೆತಿಲ್ಲ” ಎಂದು ಪುಷ್ಪರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.

ಸಚಿವರು ಹಾಗೂ ಶಾಸಕರು ಮಧ್ಯಪ್ರವೇಶಿಸಲಿ: ಕಾರ್ಮಿಕರ ಮನವಿ

“ಕಾರ್ಮಿಕ ಸಚಿವರು, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಹಾಗೂ ಸಾಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣ ಅವರು ತಕ್ಷಣ ಮಧ್ಯಪ್ರವೇಶಿಸಬೇಕು. ಕಾರ್ಮಿಕರು ತಮ್ಮ ಜೀವನದ ಅಮೂಲ್ಯ ವರ್ಷಗಳನ್ನು ಸಂಸ್ಥೆಗಾಗಿ ಮೀಸಲಿಟ್ಟಿದ್ದಾರೆ. ಇಂದು ನಿವೃತ್ತಿಯ ಹಂತದಲ್ಲಿ ಅಥವಾ ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವವರ ಸಮಸ್ಯೆಗಳನ್ನು ಪರಿಹರಿಸುವುದು ಜನಪ್ರತಿನಿಧಿಗಳ ಹಾಗೂ ಸಂಬಂಧಪಟ್ಟ ಇಲಾಖೆಗಳ ಜವಾಬ್ದಾರಿಯಾಗಿದೆ. ಕಾರ್ಮಿಕರ ಬೇಡಿಕೆಗಳನ್ನು ಆಲಿಸಿ ಸಂಸ್ಥೆಯ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಬೇಕು. ನಿವೃತ್ತಿ ಸೌಲಭ್ಯಗಳು, ವೇತನ ಬಾಕಿ, PF ಮತ್ತು ESI ಸೇರಿದಂತೆ ಪ್ರತಿಯೊಂದು ವಿಚಾರವನ್ನೂ ಪರಿಶೀಲಿಸಿ ಕಾನೂನುಬದ್ಧವಾಗಿ ದೊರೆಯಬೇಕಾದ ಹಕ್ಕುಗಳನ್ನು ಒದಗಿಸಬೇಕು” ಎಂದು ಕಾರ್ಮಿಕ ಸಂಘದ ಉಪಾಧ್ಯಕ್ಷ ಪುಷ್ಪರಾಜ್ ಮನವಿ ಮಾಡಿದ್ದಾರೆ.

ಕಾರ್ಮಿಕ ಇಲಾಖೆಯ ಸ್ಪಷ್ಟನೆ:

ಈ ದಿನ.ಕಾಮ್‌ ಈ ಕುರಿತು ಶಿವಮೊಗ್ಗ ಮತ್ತು ಸಾಗರದ ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಶಿವಮೊಗ್ಗದ ಕಾರ್ಮಿಕ ನಿರೀಕ್ಷಕರು “ಕಾರ್ಮಿಕರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುವುದು” ಎಂದು ಪ್ರತಿಕ್ರಿಯಿಸಿದ್ದಾರೆ.

ಸಾಗರದ ಕಾರ್ಮಿಕ ನಿರೀಕ್ಷಕರಾದ ಶಿಲ್ಪಾ ಮಾತನಾಡಿ, “ಈ ಸಂಬಂಧ ಸಂಸ್ಥೆಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಅಲ್ಲದೆ, ಪ್ರಕರಣವು ಜಿಲ್ಲಾ ಕಾರ್ಮಿಕ ನ್ಯಾಯಾಲಯದಲ್ಲಿ ದಾಖಲಾಗಿದೆ. ನ್ಯಾಯಾಲಯದ ಪ್ರಕ್ರಿಯೆಯ ಮೂಲಕ ಹಂತ ಹಂತವಾಗಿ ಸಮಸ್ಯೆಗಳು ಬಗೆಹರಿಯಲಿವೆ” ಎಂದು ತಿಳಿಸಿದ್ದಾರೆ.

“PF ಮತ್ತು ESI ಸಂಬಂಧಿತ ವಿಚಾರಗಳು ತಮ್ಮ ಇಲಾಖೆಯ ನೇರ ವ್ಯಾಪ್ತಿಗೆ ಬರುವುದಿಲ್ಲ. ಆದರೂ ಕಾರ್ಮಿಕರ ಹಿತದೃಷ್ಟಿಯಿಂದ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.ಅಧಿಕಾರಿಗಳ ಈ ಪ್ರತಿಕ್ರಿಯೆಯ ನಡುವೆ ಕಾರ್ಮಿಕರು ಮಾತ್ರ ತಮ್ಮ ಸಮಸ್ಯೆಗಳಿಗೆ ತಕ್ಷಣ ಪರಿಹಾರ ದೊರೆಯಬೇಕು” ಎಂದು ಆಗ್ರಹಿಸುತ್ತಿದ್ದಾರೆ.

ಡಿಸೆಂಬರ್ 14ರಂದು ಬೃಹತ್ ಪ್ರತಿಭಟನೆ:

ಪಕ್ಷಾತೀತ ಬೆಂಬಲಕ್ಕೆ ಮನವಿವರ್ಷಾನುಗಟ್ಟಲೆ ಸೇವೆ ಸಲ್ಲಿಸಿದ ಕಾರ್ಮಿಕರ ಸಮಸ್ಯೆಗಳಿಗೆ ಇನ್ನೂ ಪರಿಹಾರ ದೊರೆಯದ ಹಿನ್ನೆಲೆಯಲ್ಲಿ ಡಿಸೆಂಬರ್ 14ರಂದು ಬೃಹತ್ ಪ್ರತಿಭಟನೆ ನಡೆಸಲು ಗಜಾನನ ಬಸ್ ಕಾರ್ಮಿಕರು ನಿರ್ಧರಿಸಿದ್ದಾರೆ. ಈ ಪ್ರತಿಭಟನೆ ಯಾವುದೇ ಒಂದು ರಾಜಕೀಯ ಪಕ್ಷದ ವಿರುದ್ಧದ ಹೋರಾಟವಲ್ಲ. ಕಾರ್ಮಿಕರಿಗೆ ಆಗಿರುವ ಅನ್ಯಾಯವನ್ನು ಪ್ರಶ್ನಿಸಿ ಅವರ ಕಾನೂನುಬದ್ಧ ಹಕ್ಕುಗಳನ್ನು ಪಡೆಯುವ ಉದ್ದೇಶದ ಹೋರಾಟವಾಗಿದೆ ಎಂದು ಸಂಘದ ಉಪಾಧ್ಯಕ್ಷ ಪುಷ್ಪರಾಜ್ ತಿಳಿಸಿದ್ದಾರೆ. ಹೀಗಾಗಿ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು, ವಿವಿಧ ಸಾಮಾಜಿಕ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಪಕ್ಷಭೇದ ಮರೆತು ಪ್ರತಿಭಟನೆಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ.ಕಾರ್ಮಿಕರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಬಾರದು. ಅವರ ಕುಟುಂಬಗಳ ಬದುಕು ಅತಂತ್ರವಾಗದಂತೆ ಸರ್ಕಾರ ಹಾಗೂ ಆಡಳಿತ ವ್ಯವಸ್ಥೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬುದು ಅವರ ಒತ್ತಾಯವಾಗಿದೆ.

ಕೊನೆಯ ಪ್ರಶ್ನೆ: ಕಾರ್ಮಿಕರ ಬೆವರಿನ ಬೆಲೆಗೆ ನ್ಯಾಯ ಯಾವಾಗ?

ಗಜಾನನ ಬಸ್ ಸಂಸ್ಥೆಯ ಇತಿಹಾಸವನ್ನು ಗಮನಿಸಿದಾಗ ಅದರ ಬೆಳವಣಿಗೆಯಲ್ಲಿ ಕಾರ್ಮಿಕರ ಕೊಡುಗೆ ಮಹತ್ವದ್ದಾಗಿದೆ. ಒಂದು ಕಾಲದಲ್ಲಿ ಸುಮಾರು 150 ಬಸ್‌ಗಳನ್ನು ಹೊಂದಿದ್ದ ಸಂಸ್ಥೆಯ ಹಿಂದೆ ಸಾವಿರಾರು ದಿನಗಳ ಪರಿಶ್ರಮ, ಸೇವೆ ಹಾಗೂ ಕಾರ್ಮಿಕರ ತ್ಯಾಗ ಅಡಗಿದೆ.

ವೇತನದಿಂದ ಕಡಿತವಾದ PF ಮತ್ತು ESI ಹಣದ ಲೆಕ್ಕವೇನು? ನಿವೃತ್ತರಾದವರಿಗೆ ಗ್ರಾಚ್ಯುಟಿ ಪಾವತಿಯಾಗದಿರುವುದಕ್ಕೆ ಕಾರಣವೇನು? ಕೋವಿಡ್ ಸಂದರ್ಭದಲ್ಲಿ ಕೆಲಸ ಕಳೆದುಕೊಂಡ ಕಾರ್ಮಿಕರ ಸಮಸ್ಯೆಗೆ ಪರಿಹಾರವೇನು? ಈ ಎಲ್ಲ ಪ್ರಶ್ನೆಗಳಿಗೆ ಸಂಬಂಧಪಟ್ಟ ಆಡಳಿತ ಮಂಡಳಿ ಹಾಗೂ ಇಲಾಖೆಗಳು ಸ್ಪಷ್ಟ ಉತ್ತರ ನೀಡಬೇಕಿದೆ. ಸಂಸ್ಥೆಯ ಆಡಳಿತ ಮಂಡಳಿಗೂ ತನ್ನ ನಿಲುವು ಹಾಗೂ ಆರೋಪಗಳ ಕುರಿತ ಸ್ಪಷ್ಟನೆ ನೀಡುವ ಅವಕಾಶವಿದೆ. ಅದೇ ರೀತಿ ಕಾರ್ಮಿಕ ಇಲಾಖೆಯ ತನಿಖೆ ಹಾಗೂ ನ್ಯಾಯಾಲಯದ ಪ್ರಕ್ರಿಯೆಯೂ ಪಾರದರ್ಶಕವಾಗಿ ಮುಂದುವರಿಯಬೇಕಿದೆ.

ಕಾರ್ಮಿಕರು ಸಂಸ್ಥೆಯ ಶತ್ರುಗಳಲ್ಲ; ಸಂಸ್ಥೆಯ ಬೆಳವಣಿಗೆಯ ಹಿಂದಿನ ಶಕ್ತಿಗಳು. ಕಾರ್ಮಿಕರ ಶ್ರಮದಿಂದ ಸಂಸ್ಥೆಗಳು ಬೆಳೆಯುತ್ತವೆ. ಆದರೆ ಅದೇ ಕಾರ್ಮಿಕರ ನಿವೃತ್ತಿ ಬದುಕು ಅತಂತ್ರವಾಗಬಾರದು.

ನ್ಯಾಯದ ಮುಂದೆ ಕಾರ್ಮಿಕರೂ ಮಾಲೀಕರೂ ಸಮಾನರು. ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶ ಕೇವಲ ಭಾಷಣಕ್ಕೆ ಸೀಮಿತವಾಗದೆ ಕಾರ್ಯರೂಪಕ್ಕೆ ಬರಬೇಕಿದೆ.

ಡಿಸೆಂಬರ್ 14ರ ಪ್ರತಿಭಟನೆಗೂ ಮುನ್ನವೇ ಸಂಬಂಧಪಟ್ಟ ಸಚಿವರು, ಶಾಸಕರು ಮತ್ತು ಸಂಬಂಧಿತ ಇಲಾಖೆಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸುತ್ತಾರೆಯೇ? ಅಥವಾ ಕಾರ್ಮಿಕರು ತಮ್ಮ ಹಕ್ಕಿಗಾಗಿ ಬೀದಿಗಿಳಿಯಬೇಕೇ? ಎಂಬುದನ್ನು ಕಾದು ನೋಡಬೇಕಿದೆ.

WhatsApp Image 2025 11 17 at 5.17.05 PM
ರಾಘವೇಂದ್ರ, ಶಿವಮೊಗ್ಗ
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಹೋ, ಅದು ನಿಮ್ಮ ಮಡಿಲೇ?’ — ಅದಾನಿ ಸಮೂಹದ ಲೀಗಲ್ ನೋಟಿಸ್‌ಗೆ ವ್ಯಂಗ್ಯವಾಗಿ ಮೊಯಿತ್ರಾ ತಿರುಗೇಟು

ಸಾಮಾಜಿಕ ಜಾಲತಾಣ 'ಎಕ್ಸ್' (ಹಿಂದಿನ ಟ್ವಿಟರ್) ನಲ್ಲಿ ಹಂಚಿಕೊಂಡ ವ್ಯಂಗ್ಯಚಿತ್ರವೊಂದಕ್ಕೆ ಸಂಬಂಧಿಸಿದಂತೆ...

ಮಹಿಳೆಯ ವೇಷದಲ್ಲಿ ನೆರವಿನ ನಾಟಕ: ದೆಹಲಿಯಲ್ಲಿ ವಿಚಿತ್ರ ದರೋಡೆ ಜಾಲ ಭೇದಿಸಿದ ಪೊಲೀಸರು

ನಸುಕಿನ ವೇಳೆ ನಿರ್ಜನ ರಸ್ತೆಗಳಲ್ಲಿ ಮಹಿಳೆಯ ವೇಷ ಧರಿಸಿ ನೆರವಿಗಾಗಿ ಕೈಬೀಸಿ...

ತಳ ಸಮುದಾಯಗಳ ಹೋರಾಟಕ್ಕೆ ಅಹಿಂದ ಒಂದೇ ವೇದಿಕೆಯಾಗಲಿ: ಡಾ. ಭೀಮಣ್ಣ ಮೇಟಿ

ಸಮಾಜದಲ್ಲಿ ಶತಮಾನಗಳಿಂದ ಶೋಷಣೆ ಮತ್ತು ಅಸಮಾನತೆಯನ್ನು ಎದುರಿಸುತ್ತಿರುವ ಸಮುದಾಯಗಳಿಗೆ ರಾಜಕೀಯ, ಸಾಮಾಜಿಕ...

ಮಂಗಳೂರು | ಸಹಕಾರ ಸಂಘಗಳ ಸಭೆಗಳಲ್ಲಿ ಕನಿಷ್ಠ ಹಾಜರಾತಿ, ವಹಿವಾಟು ಕಡ್ಡಾಯ: ಸಚಿವ ಸವದಿ ಸಲಹೆ

ಸಹಕಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಅಸ್ತಿತ್ವ ಕಳೆದುಕೊಳ್ಳಬಾರದು. ಈ ಕ್ಷೇತ್ರದಲ್ಲಿ...