ಶಿವಮೊಗ್ಗ | ಕೆಎಸ್‌ಆರ್‌ಟಿಸಿ ಬಸ್‌ಗಾಗಿ ಜನರ ಪರದಾಟ; ಚಾಲಕ, ನಿರ್ವಾಹಕರ ನೋವೂ ಬಹಿರಂಗ

Date:

Advertisements

ಕೊರೊನಾದ ಬಳಿಕ ಸರ್ಕಾರದಿಂದ ಟೆಂಡರ್ ಪ್ರಕ್ರಿಯೆ ಆಗಿಲ್ಲ ಹಾಗೂ ಹೊಸ ಬಸ್‌ಗಳಿಗೆ ಪ್ರಸ್ತಾವನೆ ಇಟ್ಟಿದ್ದು, 3 ತಿಂಗಳಲ್ಲಿ ಹೊಸ ಬಸ್ ಬರುವ ನಿರೀಕ್ಷೆಯಿದೆ

ಶಿವಮೊಗ್ಗದಲ್ಲಿ ಸರ್ಕಾರಿ ಬಸ್‌ಗಾಗಿ ಜನರು ಪರದಾಡುತ್ತಿದ್ದು, ಉಚಿತ ಬಸ್‌ ಇರಲಿ, ಸದ್ಯ ಬಸ್‌ ಬಂದರೆ ಸಾಕಪ್ಪ ಎನ್ನುತ್ತಿದ್ದಾರೆ. ದಿನ ನಿತ್ಯ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದೆ ಸರ್ವಜನಿಕರು ಹೈರಾಣಾಗುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಈ ದಿನ.ಕಾಮ್‌ ನವೆಂಬರ್‌ 27ರಂದು ʼಶಿವಮೊಗ್ಗ | ʼಬಸ್‌ ಬಂದರೆ ಸಾಕಪ್ಪʼ: ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ಸಾರ್ವಜನಿಕರ ಗೋಳು!ʼ ಎಂಬ ಶೀರ್ಷಿಕೆಯಡಿ ವರದಿ ಮಾಡಿತ್ತು. ವರದಿಗೆ ಸಂಬಂಧಿಸಿದಂತೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಕೆಲವು ಸಿಬ್ಬಂದಿಗಳು ಈ ದಿನ.ಕಾಮ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

Advertisements

ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯ್ ಕುಮಾರ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಪ್ರಸ್ತುತ ಶಿವಮೊಗ್ಗ ಡಿಪೋ ಇಂದ 300 ರೂಟ್ 333 ಬಸ್‌ಗಳ ವ್ಯವಸ್ಥೆ ಮಾಡಿದ್ದು, ನಿತ್ಯವೂ ಶಿವಮೊಗ್ಗದಿಂದ ಭದ್ರಾವತಿಗೆ 30 ಬಸ್‌ಗಳ ವ್ಯವಸ್ಥೆಯಿದೆ ಇದೆ. ಹಾಗೂ ವಾರಾತ್ಯದಲ್ಲಿ ಹೆಚ್ಚುವರಿ ಬಸ್ ವ್ಯವಸ್ಥೆಯನ್ನೂ ಮಾಡುತ್ತಿದ್ದೇವೆ. ಆದರೂ ಸಮಸ್ಯೆ ಇದೆ” ಎಂದು ಹೇಳಿದರು.

“ಕೊರೊನಾದ ಬಳಿಕ ಸರ್ಕಾರದಿಂದ ಟೆಂಡರ್ ಪ್ರಕ್ರಿಯೆ ಆಗಿಲ್ಲ ಹಾಗೂ ಹೊಸ ಬಸ್‌ಗಳಿಗೆ ಪ್ರಸ್ತಾವನೆ ಇಟ್ಟಿದ್ದು, 3 ತಿಂಗಳಲ್ಲಿ ಹೊಸ ಬಸ್ ಬರುವ ನಿರೀಕ್ಷೆಯಿದೆ” ಎಂದರು.

ಬಸ್‌ಗಾಗಿ ಕಾಯುತ್ತಿರುವುದು

“ಆಫೀಸ್, ಶಾಲೆ ಕಾಲೇಜು ಸಮಯದಲ್ಲಿ ಕಡಿಮೆ ಬಸ್‌ಗಳಿವೆ. ಹಾಗಾಗಿ ಅತಿ ಹೆಚ್ಚು ನೂಕು ನುಗ್ಗುಲು ಉಂಟಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ ಎಂದಿದ್ದಕ್ಕೆ ಪ್ರತಿಕ್ರಿಯಿಸಿದ ಅವರು “ರಸ್ತೆ ಕಾಮಗಾರಿ ನಡೆಯುತ್ತಿರುವ ಕಾರಣ ರಸ್ತೆಗಳು ಬ್ಲಾಕ್ ಆಗುತ್ತಿವೆ. ಹಾಗಾಗಿ ಒಂದೇ ಬಾರಿಗೆ ಹೆಚ್ಚಾಗಿ ಬಸ್‌ಗಳು ಬರುತ್ತವೆ. ಆದರೆ, ಸಮಯಕ್ಕೆ ಸರಿಯಾಗಿ ಬಸ್ ಬರಲು ಸಮಸ್ಯೆ ಆಗುತ್ತಿದೆ” ಎಂದರು.

“ಸಮಸ್ಯೆಗಳು ಇದೆ ಎಂಬುದು ನಮಗೂ ತಿಳಿದಿರುವ ವಿಚಾರವೇ. ಆದರೆ ಸದ್ಯಕ್ಕೆ ಇರೋ ಬಸ್‌ಗಳನ್ನೇ ಹೆಚ್ಚಾಗಿ ಓಡಿಸಲು ಪ್ರಯತ್ನಿಸುತ್ತಿದ್ದೇವೆ. ನಿತ್ಯ ಚಾಲಕರು ನಿರ್ವಾಹಕರಿಗೆ 8 ಗಂಟೆ ಕಾಲ ಶಿಫ್ಟ್ ನೀಡುತ್ತಿದ್ದು, ಎಲ್ಲವನ್ನೂ ಗಮನಿಸುತ್ತಿದ್ದೇವೆ” ಎಂದು ಹೇಳಿದರು.

ಬಸ್‌ಗೆ ಕಾಯುತ್ತಿರುವುದು

“ಶಾಲೆ ಕಾಲೇಜು ಸಮಯದಲ್ಲಿ ಸ್ವತಃ ನಾನೇ ಪ್ರಯಾಣಿಸಿದ್ದೇನೆ. ಕಾಲೇಜು ಬಂದಾಗ ಬಸ್ ಖಾಲಿಯಾಗುತ್ತದೆ. ಇವೆಲ್ಲ ಸಮಸ್ಯೆಗಳನ್ನೂ ಗಮನಿಸಿದ್ದೇನೆ. ಬಸ್‌ಗಳು ಭರ್ತಿಯಾಗುತ್ತಿರುವ ಕಾರಣ ಶಾಲೆ ಕಾಲೇಜು ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲು ಕೆಲವು ಕ್ರಮಗಳನ್ನು ಕೈಗೊಳ್ಳಲು ಯೋಚಿಸುತ್ತಿದ್ದೇವೆ” ಎಂದರು.

ಹೆಸರು ಹೇಳಲು ಇಚ್ಚಿಸದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, 8 ಗಂಟೆಗಳ ಕಾಲ ಕೆಲಸದ ಅವಧಿ ಮುಗಿಯುವ ಕಾರಣ ಚಾಲಕರು ನಿರ್ವಾಹಕರು ಊಟಕ್ಕೆ ತೆರಳುತ್ತಾರೆ. ಬೇರೆ ಚಾಲಕರು ನಿರ್ವಾಹಕರು ಬರುವವರೆಗೂ ಬಸ್ ಡಿಪೋಯಿಂದ ಹೊರಬರುತ್ತಿಲ್ಲ. ಹಾಗಾಗಿ ಶಾಲೆ ಕಾಲೇಜು ಆಫೀಸ್ ವೇಳೆಯಲ್ಲಿ, ಅಂದರೆ ಬೆಳಿಗ್ಗೆ ಅಥವಾ ಸಂಜೆ 4 ಗಂಟೆಗೆ ಶಿಫ್ಟ್ ಮುಗಿಸಿ ಊಟಕ್ಕೆ ತೆರಳುವುದರಿಂದ ಬಸ್ ವ್ಯವಸ್ಥೆ ಇಲ್ಲ. ಇದನ್ನು ಸರಿಪಡಿಸಬೇಕಾಗಿದೆ” ಎಂದರು.

“ಚಾಲಕರು, ನಿರ್ವಾಹಕರ ಗೋಳು ಕೇಳದಂತಾಗಿದೆ. ನಿರ್ವಾಹಕರಿಗೆ ಆದೇಶ ನೀಡಿದ್ದು ಬಸ್ ಸೀಟ್ ಇರುವಷ್ಟು ಮಾತ್ರ ಜನ ಹತ್ತಿಸಿ ಸ್ಟ್ಯಾಂಡಿಂಗ್ ಕರೆದುಕೊಂಡು ಹೋದರೆ ನಿರ್ವಾಹಕರನ್ನು ಅಮಾನತು ಮಾಡಲಾಗುತ್ತಿದೆ. ಉದಾಹರಣೆಗೆ 52 ಸೀಟುಗಳು ಇದ್ದರೆ ಒಂದು ಬಸ್‌ನಲ್ಲಿ 100 ಜನ ಆಗುತ್ತಿದ್ದಾರೆ. ಜಾಸ್ತಿ ಬಸ್‌ಗಳನ್ನೂ ಬಿಡುತ್ತಿಲ್ಲ. ಮತ್ತೆ ಇರುವ ಬಸ್‌ಗಳ ಕಂಡೀಶನ್ ಸರಿ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ಶಿವಮೊಗ್ಗದಲ್ಲಿ ಬಸ್‌ಗೆ ಪರದಾಟ

“ಕಲೆಕ್ಷನ್ ಟಾರ್ಗೆಟ್ ಕೊಡಲಾಗುತ್ತಿದೆ. ಟಾರ್ಗೆಟ್ ಆಗದಿದ್ದರೆ ಫೈನ್ ಕೂಡ ಹಾಕಲಾಗುತ್ತಿದೆ. ಬಸ್‌ನಲ್ಲಿ ಕೆಲವರು ಟಿಕೆಟ್ ಪಡೆಯದೇ ಪ್ರಯಾಣಿಸುತ್ತಾರೆ. ಬಸ್ ರಶ್ ಇರುವ ಕಾರಣ ಇದರ ಲಾಭ ಪಡೆಯುತ್ತಿದ್ದು, ಮತ್ತೆ ಕೆಲವರು ಕೆಲವೊಮ್ಮೆ ಟಿಕೆಟ್ ಕಳೆದುಕೊಂಡಿರುತ್ತಾರೆ. ಆಗ ಚೆಕಿಂಗ್ ಇನ್ಸ್‌ಪೆಕ್ಟರ್‌ ನಿರ್ವಾಹಕರಿಗೆ ಫೈನ್ ಹಾಕುತ್ತಾರೆ. ಇಲ್ಲದಿದ್ದರೆ ಅಮಾನತು ಮಾಡುತ್ತಾರೆ” ಎಂದರು.

“ಚಾಲಕರು, ನಿರ್ವಾಹಕರು ಅವರ ರಜೆ ಪಡೆಯಲೂ ಕೂಡ ಲಂಚ ಕೊಡಬೇಕಾಗಿದೆ. ಒಂದಿನ ರಜೆ ತಗೆದುಕೊಳ್ಳುವುದಕ್ಕೂ ₹500 ಲಂಚ ನೀಡಬೇಕಾಗಿದೆ. ನಿಗಿದಿತ ಅಥವಾ ಸಮಾನವೇತನ ನೀಡುತ್ತಿಲ್ಲ. ಯೂನಿಯನ್ ಚುನಾವಣೆಯನ್ನೂ ನಡೆಸುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.‌

ಬಸ್‌ ರಶ್

“ಬಸ್‌ಗಳು ಕೆಟ್ಟು ಹೋಗುತ್ತಿರುವ ಕಾರಣ ಬಸ್ ಡಿಪೋಯಿಂದ ಬರುವವರೆಗೂ ಚಾಲಕರು, ನಿರ್ವಾಹಕರಿಗೆ ಡ್ಯೂಟಿ ಇಲ್ಲ. ಬಸ್ ಸರಿಪಡಿಸಲು ಅಗಿಲಿಲ್ಲವಾದಲ್ಲಿ ಆ ಸಮಯದಲ್ಲಿ ಬೇರೆ ಯಾವ ಯಾವುದೋ ಊರಿಗೆ ರೂಟ್ ನೀಡಲಾಗುತ್ತಿದೆ. ಹೊಸ ರೂಟ್ ನೀಡುವುದರಿಂದಲೂ ಚಾಲಕರಿಗೆ ಸಮಸ್ಯೆ ಆಗುತ್ತಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಹಾಸನ | ದಲಿತ ಕುಟುಂಬ ಬೆಳೆದಿದ್ದ ಕಾಫಿ, ಬಾಳೆ ಗಿಡ ನಾಶ – ಜಾತಿ ನಿಂದನೆ; ಸಂತ್ರಸ್ಥರ ಆರೋಪ

“ಹೀಗೆ ನೂರಾರು ಸಮಸ್ಯೆಗಳು ನಮಗೂ ಇವೆ. ನಿಮ್ಮ ಮಾಧ್ಯಮ ಮೂಲಕವಾದರೂ ನಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಹಾಗೆ ಮಾಡಿಕೊಡಿ” ಎಂದು ಚಾಲಕರು ನಿರ್ವಾಹಕರು ಅಗ್ರಹಿಸಿದರು.

ಒಂದು ಕಡೆ ಸಾಕಷ್ಟು ಬಸ್‌ಗಳು ಇಲ್ಲದೆ ಜನರಿಗೆ ತೊಂದರೆಯಾಗುತ್ತಿದ್ದರೆ, ಇನ್ನೊಂದು ಕಡೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎನ್ನುವಂತೆ ಚಾಲಕರು ನಿರ್ವಾಹಕರಿಗೂ ತೊಂದರೆಯಾಗುತ್ತಿರುವುದು ಕಂಡುಬರುತ್ತಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X