ಬಸ್ ಚಲಾಯಿಸುತ್ತಿದ್ದ ವೇಳೆ ಮೊಬೈಲ್ ಬಳಸುತ್ತಿದ್ದ ಚಾಲಕನಿಗೆ ಪ್ರಯಾಣಿಕರೋರ್ವರ ದೂರಿನ ಮೇರೆಗೆ ಟ್ರಾಫಿಕ್ ಪೊಲೀಸರು ಐದು ಸಾವಿರ ದಂಡ ವಿಧಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ- ತೀರ್ಥಹಳ್ಳಿ- ಉಡುಪಿ- ಮಂಗಳೂರಿಗೆ ದಿನ ನಿತ್ಯ ತೆರಳುವ ನವದುರ್ಗಾ ಪ್ರಸಾದ್(ಕೆ ಎ 18
ಸಿ 4794 ನಂಬರ್) ಖಾಸಗಿ ಬಸ್‌ನ ಚಾಲಕ ರಾಜೇಶ್ ಎಂಬುವವರು, ಪ್ರತಿನಿತ್ಯ ಪ್ರಯಾಣಿಕರನ್ನು ಕರೆದುಕೊಂಡು ತೆರಳುವಾಗ ಮೊಬೈಲ್ ಬಳಕೆ ಮಾಡುತ್ತಿದ್ದರು. ಅಲ್ಲದೇ, ತೀಕ್ಷ್ಣ ತಿರುವು ಇರುವ ರಸ್ತೆಯಲ್ಲಿ ಸಹ ಪ್ರಯಾಣಿಕರು ರಕ್ಷಣೆ ಸುರಕ್ಷತೆ ಲೆಕ್ಕಿಸದೆ ಮೊಬೈಲ್ ಬಳಸುತ್ತಿದ್ದರು. ಮೊಬೈಲ್‌ನಲ್ಲಿ ಮಾತಾಡುತ್ತ ವಾಹನ ಚಲಾಯಿಸುತ್ತಿದ್ದನ್ನು ಗಮನಿಸಿದ ಪ್ರಯಾಣಿಕರೋರ್ವರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಸೆರೆ ಹಿಡಿದಿದ್ದರು. ಬಳಿಕ ಈ ವಿಡಿಯೋವನ್ನು ಶಿವಮೊಗ್ಗ ಟ್ರಾಫಿಕ್ ಪೊಲೀಸರಿಗೆ ಕಳುಹಿಸಿ, ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದರು.
ಈ ವಿಡಿಯೋ ದೂರನ್ನು ಆಧರಿಸಿ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಸಂತೋಷ್ ಅವರು ನವದುರ್ಗಾ ಪ್ರಸಾದ್ ಖಾಸಗಿ ಬಸ್‌ನ ಚಾಲಕನಿಗೆ 5000₹ ದಂಡ ವಿಧಿಸಿದ್ದಾರೆ. ಅಲ್ಲದೇ, ದೂರು ನೀಡಿದ್ದ ಪ್ರಯಾಣಿಕನಿಗೂ ದಂಡ ವಿಧಿಸಿದ ಬಿಲ್‌ನ ಪ್ರತಿಯನ್ನು ಪೊಲೀಸರು ಕಳುಹಿಸಿದ್ದಾರೆ.
ಇದನ್ನು ಓದಿದ್ದೀರಾ? ‘ಅಮ್ಮ’ ಅಧ್ಯಕ್ಷ ಸ್ಥಾನಕ್ಕೆ ಮೋಹನ್ ಲಾಲ್ ರಾಜೀನಾಮೆ, ಸಂಪೂರ್ಣ ಸಮಿತಿ ವಿಸರ್ಜನೆ
ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಆಗದಂತೆ ಎಚ್ಚರ ವಹಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಇತರೆ ಚಾಲಕರಿಗೆ ಎಚ್ಚರಿಕೆ ಆಗಿರಲಿ ಎಂಬ ಸಂದೇಶವನ್ನು ಪೊಲೀಸರು ರವಾನಿಸಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Coŕrect decision which saves his life and dependent family with regular travelling bus passengers but fine is heavy price.
He is the experienced driver from past 20 years his dad is in critical condition….. he is from poor family background he is the only earning for his family….while driving he called his father whenever he speak in phone his concentration will be in driving n he have never done it regularly as mentioned in the news… media should understand About his condition before posting something about him.. I’m the regular passenger for this bus from past 3 years I have never heard any black remarks among his driving….
ನಾನು ಆ ಡ್ರೈವರ್ ಜೊತೆಗೆ ಕೆಲಸ ಮಾಡೋ ಕಂಡಕ್ಟರ್..ಅವರ ಡ್ರೈವಿಂಗ್ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ..ಯಾರು ಮಾಡದೆ ಇರೋ ತಪ್ಪು ಅವರೇನು ಮಾಡಿಲ್ಲ..ಬಸ್ ಗೆ ಬರೋ ರೆಗ್ಯುಲರ್ ಪ್ಯಾಸೆಂಜರ್ ಗೆ ಅವರ ಬಗ್ಗೆ ನಂಬಿಕೆ ನು ಇದೆ ಅವರ ಡ್ರೈವಿಂಗ್ ಹೇಗಿದೆ ಅಂತನು ಗೊತ್ತಿದೆ..
ಯಾರೋ ಒಬ್ಬ ಮೂರು ಕಾಸಿನವನು ವಿಡಿಯೋ ಮಾಡಿ ವೈರಲ್ ಮಾಡಿದ್ದಾನೆ..ಮುಂದಿನ ದಿನದಲ್ಲಿ ಅವರ ಸಂಸಾರದ ವಿಡಿಯೋ ಕೂಡ ಹೀಗೇನೇ ಮಾಡಿ ವೈರಲ್ ಮಾಡ್ತಾನೆ ಅನ್ಸುತ್ತೆ..
ಹೊಟ್ಟೆ ಪಾಡಿಗೆ ಅಂತ ಡ್ರೈವರ್ ಆಗಿ ದುಡಿತ ಇರೋದು..ಪ್ಯಾಸೆಂಜರ್ ನ ಸೇಫ್ ಆಗಿ ಕರ್ಕೊಂಡು ಹೋಗಿ ಬರ್ತಾರೆ ಆದ್ರೆ ಒಂದಿನ ಕೂಡ ಒಳ್ಳೆ ಮಾತು ಬರೋದಿಲ್ಲ..ಇಂಥ ನೀಚ ಕೆಲಸ ಮಾಡೋ ವ್ಯಕ್ತಿಗೆ ಖಂಡಿತ ಒಳ್ಳೇದಗೋದಿಲ್ಲ..