ಶಿವಮೊಗ್ಗ ನಗರ ಸಂಚಾರ ಪೊಲೀಸ್, ಆಟೋ ಮೀಟರ್ ದರ ಪಟ್ಟಿ ನಿಗದಿ ಮಾಡಿದೆ. ಅದರಂತೆ ಕನಿಷ್ಠ ದರ (ಒಂದೂವರೆ ಕಿ.ಮೀಗೆ ₹40 (3 ಜನ ಪ್ರಯಾಣಿಕರಂತೆ) ಹಾಗೂ ನಂತರದ ಪ್ರತಿ ಕಿ.ಮೀ ಗೆ ₹20 (3 ಜನ ಪ್ರಯಾಣಿಕರಂತೆ)ಗಳನ್ನು ನಿಗದಿಗೊಳಿಸಲಾಗಿದೆ.
ಇನ್ನು ಕಾಯ್ದಿರಿಸುವ (Waiting Charge) ಶುಲ್ಕ ಮೊದಲ 15 ನಿಮಿಷ ಉಚಿತ ನಂತರ 15 ನಿಮಿಷಗಳಿಗೆ ₹5. ಪ್ರತಿ ಪ್ರಯಾಣಿಕರ ಲಗೇಜ್ ಅಥವಾ ಸರಕಿಗೆ ಪ್ರತಿ 20 ಕೆ.ಜಿಗಳಿಗೆ ಉಚಿತ ಮತ್ತು ನಂತರ ₹5 ರಂತೆ ಹಾಗೂ ಉಳಿದ ಭಾಗದಂತೆ ಎಂಬುದಾಗಿ ದರ ನಿಗದಿ ಮಾಡಲಾಗಿದೆ.

ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಬೀದಿಬದಿ ವ್ಯಾಪಾರಸ್ಥರ ಸಭೆ; ಸ್ಥಳೀಯ ವ್ಯಾಪಾರಿಗಳ ರಕ್ಷಣೆಗೆ ಆಗ್ರಹ
ರಾತ್ರಿ 10 ಗಂಟೆಯಿಂದ ಬೆಳಿಗಿನಜಾವ 5 ಗಂಟೆವರೆಗೆ ಈ ಮೇಲಿನ ದರದ ಒಂದೂವರೆ ಪಟ್ಟು ದರವನ್ನು ಮಾತ್ರ ಪ್ರಯಾಣಿಕರಿಂದ ಪಡೆಯಲು ಅವಕಾಶವಿದೆ ಎಂದು ಸಂಚಾರ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

ಇದು ನಿಜಾನಾ ನಂಬಬಹುದಾ, ಹೀಗದಲ್ಲಿ ಜನಸಾಮಾನ್ಯರು ಹಬ್ಬವನ್ನೇ ಆಚರಿಸುತ್ತಾರೆ