ಸೈಬರ್ ಕ್ರೈಂ ಹಾಗೂ ಹಣದ ವಿಷಯಗಳಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಸೈಬರ್ ಕ್ರೈಂ ಅಪರಾಧಗಳು ಹೆಚ್ಚಾಗುತ್ತಿರುವ ಕಾರಣ ಮಹಿಳೆಯರಿಗೆ ಹಲವಾರು ರಕ್ಷಣೆ, ಸುರಕ್ಷತೆ ವ್ಯವಸ್ಥೆಗಳಿವೆ. ಅದನ್ನು ಬಳಸಿಕೊಳ್ಳುವ ಮುಖಾಂತರ ಎಚ್ಚರದಿಂದ ಇರಬೇಕು ಎಂದು ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆ ಪಿಎಸ್‌ಐ ಭಾರತಿ ಸಲಹೆ ನೀಡಿದರು.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಚುಂಚದ್ರಿ ಮಹಿಳಾ ವೇದಿಕೆಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಕೀಲೆ ಶೋಭಾ ಮಾತನಾಡಿ, “ಮಹಿಳೆಯರಿಗೆ ಕಾನೂನಿನಲ್ಲಿ ಆಸ್ತಿ ಹಕ್ಕು ಕುರಿತು ಕಾನೂನಿನ ಉಚಿತ ವ್ಯವಸ್ಥೆಗಳಿವೆ. ಇದರ ಕುರಿತು ಮಹಿಳೆಯರು ಮಾಹಿತಿಗಳನ್ನು ಪಡೆದುಕೊಳ್ಳಬೇಕು” ಎಂದರು.
ಅನುರಾಧ ಪಟೇಲ್ ಮಾತನಾಡಿ, ಹಬ್ಬಗಳ ಆಚರಣೆ ಕುರಿತು ಯಾಕೆ ಹಬ್ಬಗಳನ್ನು ಮಾಡುತ್ತಾರೆ, ಅದರ ವೈಶಿಷ್ಟ್ಯತೆ ಕುರಿತು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಅಕ್ರಮ; ಸೂಕ್ತ ಕ್ರಮಕ್ಕೆ ರಘುಪತಿ ಭಟ್ ಆಗ್ರಹ
ಕಾರ್ಯಕ್ರಮದ ಅಧ್ಯಕ್ಷೆ ಸುಧಾಮಣಿ ಮಾತನಾಡಿ, “ನಿತ್ಯವೂ ಕನ್ನಡ ಭಾಷೆ ಬಳಸಬೇಕು. ಒಂದು ದಿನಕ್ಕೆ ಕನ್ನಡ ರಾಜ್ಯೋತ್ಸವ ಸೀಮಿತವಾಗಬಾರದು. ಕನ್ನಡ ಭಾಷೆ ಕಾರ್ಯಕ್ರಮಗಳನ್ನು ರಾಷ್ಟ್ರವ್ಯಾಪಿ ತಲುಪಿಸುವ ಮೂಲಕ ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ಮಾಡಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರತಿಭಾ, ಶೀಲಾ ಸೇರಿದಂತೆ ಬಹುತೇಕರು ಇದ್ದರು.