ಶಿವಮೊಗ್ಗ ನಗರದ ಕೋಟೆ ಆಂಜನೇಯ ದೇವಸ್ಥಾನ ಪಕ್ಕದಲ್ಲಿರುವ ಭೀಮೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣಪತಿಗೆ ಎಲ್ಲ ಧರ್ಮದವರೂ ಒಗ್ಗೂಡಿ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದ್ದು, ಸೌಹಾರ್ದತೆ ಮೆರೆದಿದ್ದಾರೆ.
ನಮ್ಮ ನಡಿಗೆ ಶಾಂತಿ ಕಡೆಗೆ ಸೌಹಾರ್ದ ಸಮಿತಿ ಮುಖ್ಯಸ್ಥ ಶ್ರೀಪಾಲ್ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿದ್ದು, “ಶಿವಮೊಗ್ಗ ನಗರದಲ್ಲಿ ಶಾಂತಿ, ಸೌಹಾರ್ದ ನೆಲಸಲಿ. ಎಲ್ಲರೂ ಶಾಂತಿ ನೆಮ್ಮದಿಯಿಂದ ಹಬ್ಬ ಹರಿದಿನಗಳನ್ನು ಆಚರಣೆ ಮಾಡುವಂತಾಗಲಿ” ಎಂದು ಸಮಿತಿಯ ಮುಖಂಡರು ಕೋರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ಸಾಧನೆಯೊಂದಿಗೆ ಜೀವನದಲ್ಲಿ ಮೌಲ್ಯಗಳನ್ನು ಬೆಳೆಸಿಕೊಳ್ಳಿ: ಫರ್ಡಿನಾಂಡ್ ಗೊನ್ಸಾಲ್ವಿಸ್
ಈ ಸಂದರ್ಭದಲ್ಲಿ ಸೌಹಾರ್ದ ಸಮಿತಿಯ ಕಿರಣ್ ಕುಮಾರ್, ಮೊಹಮ್ಮದ್ ಹುಸೈನ್, ಮಸ್ತಾನ್, ಡಾ. ನಾಝಿರ್, ಕಲೀಮ್, ಗೌಸ್ ಹಾಗೂ ಮಾಲತೇಶ್ ಸೇರಿದಂತೆ ಇತರರು ಇದ್ದರು.