ಬೆಂಗಳೂರಿಗೆ ಶರಾವತಿ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಕಾಂಗ್ರೆಸ್ ಸರ್ಕಾರದ ಮನಸ್ಸಿನಲ್ಲಿತ್ತು. ಅದಕ್ಕಾಗಿ ಒಂದಷ್ಟು ಪ್ರಕ್ರಿಯೆಗಳು ನಡೆದಿದ್ದವು ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣರವರು ಶಿವಮೊಗ್ಗದಲ್ಲಿ ಮಾತನಾಡಿರು.
“ಶರಾವತಿ ನೀರು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಯೋಜನೆ ಬಹಳ ಸುದ್ದಿಯಾಗಿದೆ. ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗುವ ಯೋಜನೆ ಉದ್ದೇಶ ಸರ್ಕಾರದ ಮುಂದೆ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
“ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಪ್ರಸ್ತಾವನೆ ಮಾಡಿದ್ದು, ಬಸವರಾಜ ಬೊಮ್ಮಾಯಿ ಅವರ ಸರ್ಕಾರ. ನಮ್ಮ ಸರ್ಕಾರ ಬಂದ ಮೇಲೆ ಯೋಜನೆಗೆ ₹20 ಸಾವಿರ ಕೋಟಿ ಅಂದಾಜು ವೆಚ್ಚ ಮಾಡಲಾಗಿದೆ. ಪ್ರಸ್ತಾವನೆ ಬಿಟ್ಟು ಬೇರೆ ಏನೂ ನಮ್ಮ ಸರ್ಕಾರದಲ್ಲಿ ಆಗಿಲ್ಲ. ಸಿಎಂ, ಡಿಸಿಎಂ ಈ ಬಗ್ಗೆ ನನಗೆ ಅಭಿಪ್ರಾಯ ಕೇಳಿದ್ದಾರೆ. ಶರಾವತಿ ನದಿಯಿಂದ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗುವ ಯೋಜನೆಯ ಪ್ರಸ್ತಾವನೆ ಇಲ್ಲ” ಎಂದು ಬೇಳೂರು ಸ್ಪಷ್ಟಪಡಿಸಿದ್ದಾರೆ.
“ಕುಮಾರಸ್ವಾಮಿಯವರು ಬಿಜೆಪಿಯಲ್ಲಿ ನನಗೆ ಶತ್ರು ಇದ್ದಾರೆ ಅಂದಿದ್ದಾರೆ. ಬಿಜೆಪಿ ಜೆಡಿಎಸ್‌ನಲ್ಲಿ ಈಗ ಗೊಂದಲ ಶುರುವಾಗಿದೆ. ಯತ್ನಾಳ್ ಮತ್ತು ಈಶ್ವರಪ್ಪ ತಂಡ ಕಟ್ಟಿಕೊಂಡು ವಿಜಯೇಂದ್ರ ಇಳಿಸಲು ಹೊರಟಿದೆ. ಇದನ್ನು ಮುಚ್ಚಿಕೊಳ್ಳೋಕೆ ಈ ಮುಡಾ ಪ್ರಕರಣ ಮುನ್ನಲೆಗೆ ತಂದಿದ್ದಾರೆಂದು ಬೇಳೂರು ಆರೋಪಿಸಿದ್ದಾರೆ. ಛಲವಾದಿ ನಾರಾಯಸ್ವಾಮಿ ಬಂದು ಸಿದ್ದರಾಮಯ್ಯ ಕಳ್ಳ ಎಂದಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಕೆಳಗಿಸಲು ಇವರು ಪ್ಲಾನ್ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ರಾಜೀನಾಮೆ ನೀಡಲ್ಲ. ಅವರ ಜೊತೆ ನಾವಿದ್ದೇವೆ” ಎಂದಿದ್ದಾರೆ.
“ಯಡಿಯೂರಪ್ಪನವರನ್ನು ಜೈಲಿಗೆ ಕಳಿಸಿದ್ದು ಯಾರು? ಹಾಗಾದರೆ ಯಡಿಯೂರಪ್ಪ ಕಳ್ಳರಾ ಅದನ್ನು ಹೇಳಬೇಕು ಅಲ್ವೆ. ಶರಾವತಿ ಸಂತ್ರಸ್ತ್ರರ ಪರವಾಗಿ ಸಂಸದ ರಾಘವೇಂದ್ರ ಕೇಂದ್ರದಲ್ಲಿ ಒಂದು ಮಾತಾಡಿಲ್ಲ. ರೈತರ ಧ್ವನಿಯಾಗಿ ರಾಘವೇಂದ್ರ ಕೆಲಸ ಮಾಡಿಲ್ಲ. ರೈತರಪರ ಧ್ವನಿ ಎತ್ತದೆ ಹೋದರೆ ಇವರು ಯಾಕೆ ಬೇಕು. ರಾಘವೇಂದ್ರ ತಮ್ಮ ಕಾಲೇಜು ಜಾಗ ಉಳಿಸಲು ಹೋರಾಟ ಮಾಡುತ್ತಿದ್ದಾರೆ ಅಷ್ಟೆ. ಮಲೆನಾಡಿನ ಪಾಪಿಗಳು ಅಂದರೆ ರಾಘವೇಂದ್ರ, ಹಾಲಪ್ಪ, ಆರಗ ಜ್ಞಾನೇಂದ್ರ, ಬೊಮ್ಮಾಯಿ ಅವರು. ನಮ್ಮ ಸರ್ಕಾರ ಶರಾವತಿ ಸಂತ್ರಸ್ತ್ರರ ಪರವಾಗಿದೆ” ಎಂದು ಬೇಳೂರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಯುದ್ಧ ಬೇಡ, ಬುದ್ಧ ಬೇಕು; ನೇರಳೆ ಗ್ರಾಮದಲ್ಲಿ ‘ಧಮ್ಮ ಪಯಣ’
“ಬೈ ಎಲೆಕ್ಷನ್ ಬಂದಿದೆ. ಬಿಜೆಪಿಯಲ್ಲಿ ಅವರ ಮಕ್ಕಳನ್ನೇ ನಿಲ್ಲಿಸುತ್ತಾರೆ ಅನಿಸುತ್ತೆ. ಪ್ರಧಾನಿಗಳು ಹೇಳಿದ್ದಾರೆ. ಮಕ್ಕಳನ್ನು ನಿಲ್ಲಿಸಬಾರದು. ಆದರೆ ಇವರು ಅವರನ್ನೇ ನಿಲ್ಲಿಸುತ್ತಾರೆ. ಉಪ ಚುನಾವಣೆ ನಡೆಯುತ್ತಿರುವ ಮೂರು ಕ್ಷೇತ್ರಗಳಲ್ಲಿಯೂ ನಾವು ಗೆಲ್ಲುತ್ತೇವೆ. ಮೂರು ಸ್ಥಾನ ಗೆದ್ದು ಕಾಂಗ್ರೆಸ್ ಸರ್ಕಾರ ಗಟ್ಟಿಯಾಗಿದೆ ಅಂತ ತೋರಿಸುತ್ತೇವೆ” ಎಂದು ಬೇಳೂರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.