ಶಿವಮೊಗ್ಗ ನಗರದ ಎಟಿಎನ್‌ಸಿ ಕಾಲೇಜು ಕ್ರೀಡಾಂಗಣದಲ್ಲಿ ಈ ಬಾರಿ ʼಶ್ರೀಕಾಂತಣ್ಣ ಕಪ್ ಸೀಸನ್-2ʼ ಕ್ರಿಕೆಟ್ ಪಂದ್ಯಾವಳಿಯನ್ನು ಇದೇ ಫೆ.22 ಶನಿವಾರ ಹಾಗೂ ಫೆ.23ರ ಭಾನುವಾರದಂದು ಆಯೋಜಿಸಲಾಗಿದೆ.
ಪಂದ್ಯಾವಳಿ ಅಂಗವಾಗಿ ನಗರದ ಬಿ ಎಚ್ ರಸ್ತೆಯ ಮಥುರಾ ಸೆಂಟ್ರಲ್ ಹೋಟೆಲ್‌ನಲ್ಲಿ ಪಂದ್ಯಾವಳಿಯ ಟೀ ಶರ್ಟ್ ಹಾಗೂ ಟ್ರೋಫಿ ಬಿಡುಗಡೆ ಮಾಡಲಾಯಿತು.
ಈ ಪಂದ್ಯಾವಳಿಯು ಶಿವಮೊಗ್ಗದ ಪ್ರತಿಷ್ಠಿತ 12 ಕ್ರಿಕೆಟ್ ತಂಡಗಳ ಲೀಗ್ ಹಂತದ 6 ಓವರ್‌ಗಳದ್ದಾಗಿರುತ್ತದೆ. ಪ್ರಥಮ ಬಹುಮಾನ 30000/- ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ 15000/- ಹಾಗೂ ಆಕರ್ಷಕ ಟ್ರೋಫಿಯನ್ನು ಶ್ರೀಕಾಂತಣ್ಣ ಕಪ್ ಪಂದ್ಯಾವಳಿ ಒಳಗೊಂಡಿದೆ. ಪಂದ್ಯಾವಳಿಯು ʼಗಲ್ಲಿ ಕ್ರಿಕೆಟ್ ಯುಟ್ಯೂಬ್ ಚಾನೆಲ್ʼ ನಲ್ಲಿ ಲೈವ್ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ಯುವಕ-ಯುವತಿಯ ವಿಡಿಯೊ ಚಿತ್ರೀಕರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದವರ ಬಂಧನ
ಈ ವೇಳೆ ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಗಜೇಂದ್ರನಾಥ, ಸೊಸೈಟಿ ಅಧ್ಯಕ್ಷ ಸಂತೋಷ್ ಸಾಕ್ರೆ, ಹಿರಿಯ ಪತ್ರಕರ್ತ ಮೋಹನ್, ಯುವ ಕಾಂಗ್ರೆಸ್ ಮುಖಂಡ ವಿನಯ್ ತಾಂದಲೆ, ಕಾಂಗ್ರೆಸ್ ಮುಖಂಡ ಭಾಸ್ಕರ್, ಅನಿಲ್, ಉಮೇಶ್, ಸಂತೋಷ್, ಗ್ಯಾರಂಟಿ ಯೋಜನೆ ಸದಸ್ಯ ಬಸವರಾಜ್, ಯುವ ಮುಖಂಡ ಆರ್ ಟಿ ಆರ್ ಮಂಜು, ಹಾಲೇಶ್, ಸತ್ಯನಾರಾಯಣ, ವಿನಯ್, ಮೋಹನ್, ಮಂಜು, ಅನಿಲ್, ದರ್ಶನ್ ಹಾಗೂ ಇತರರು ಉಪಸ್ಥಿತರಿದ್ದರು.
