ಅಶೋಕ್ ಲೈಲ್ಯಾಂಡ್ ಹಾಗೂ ದ್ವಿಚಕ್ರ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಗೌತಮಪುರ ಗ್ರಾಮದಲ್ಲಿ ನಡೆದಿದೆ.
ಬೆಳಂದೂರು ಗ್ರಾಮದ ವಾಸಪ್ಪ(70) ಹಾಗೂ ಅವರ ಅಳಿಯ ಜಯನಗರ ನಿವಾಸಿ ಸತೀಶ್(40) ಮೃತಪಟ್ಟ ವ್ಯಕ್ತಿಗಳು.
ಅಶೋಕ್ ಲೈಲ್ಯಾಂಡ್ ಆನಂದಪುರದಿಂದ ಶಿಕಾರಿಪುರದ ಕಡೆಗೆ ಚಲಿಸುತ್ತಿದ್ದು, ದ್ವಿಚಕ್ರ ವಾಹನದಲ್ಲಿದ್ದವರು ಬೆಳಂದೂರಿನಿಂದ ಆನಂದಪುರದ ಕಡೆಗೆ ಬರುತ್ತಿದ್ದರು. ಈ ವೇಳೆ ಆನಂದಪುರ ಬಳಿಯ ಗೌತಮಪುರದ ಮಾರಿಕಾಂಬ ದೇವಸ್ಥಾನದ ಮುಂಭಾಗ ರಸ್ತೆಯ ತಿರುವಿನ ಬಳಿ ಎರಡು ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಟಿಪ್ಪರ್ ಡಿಕ್ಕಿ: ರಸ್ತೆ ದಾಟುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವು
ಘಟನಾ ಸ್ಥಳಕ್ಕೆ ಆನಂದಪುರದ 112 ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಸ್ಥಳೀಯ ಸಹಕಾರದೊಂದಿಗೆ ಮೃತದೇಹಗಳನ್ನು ಸಾಗರ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ಮುಂದಿನ ತನಿಖೆ ಮಾಡುತ್ತಿದ್ದಾರೆ.
ವರದಿ : ಅಮಿತ್ ಆರ್, ಆನಂದಪುರ