ಮನೆ ಸಮೀಪ ಒಣಗಲು ಹಾಕಿದ್ದ ಕ್ವಿಂಟಲ್‌ಗಟ್ಟಲೆ ಅಡಕೆಯನ್ನು ಕದ್ದೊಯ್ದಿದ್ದ ಇಬ್ಬರು ಆರೋಪಿಗಳನ್ನು ರಿಪ್ಪನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಹೊಸನಗರದ ಹರತಾಳು ಗ್ರಾಮದ ರಾಘವೇಂದ್ರ (28) ಮತ್ತು ನಂಜವಳ್ಳಿ ಗ್ರಾಮದ ಶ್ರೀಧರ್ (52) ಬಂಧಿತರು.
ಹರತಾಳು ಮಜಿರೆ ಕ್ವಾಡ್ರಿಗೆ ಗ್ರಾಮದ ಬಾಲರಾಜ್ ಎಂಬುವವರ ಮನೆ ಪಕ್ಕದಲ್ಲಿ ನವೆಂಬರ್ 16ರಂದು ಒಣಗಿಸಲು ಹಾಕಿದ್ದ ಸುಮಾರು 1 ಲಕ್ಷ ರೂ. ಮೌಲ್ಯದ ಅಡಕೆ ಕಳ್ಳತನವಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಒಂದು ಕ್ವಿಂಟಲ್ 85 ಕೆಜಿ ಅಡಕೆ, ಕೃತ್ಯಕ್ಕೆ ಬಳಸಿದ್ದ ಲಗೇಜ್ ಆಟೋ ವಶಪಡಿಸಿಕೊಂಡಿದ್ದಾರೆ. ಇನ್ನು, ರಿಪ್ಪನ್‌ಪೇಟೆ ಸುತ್ತಮುತ್ತ ಕಳುವಾಗಿದ್ದ 300 ರಬ್ಬರ್ ಶೀಟ್‌ಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.
ಈ ಸುದ್ದಿ ಓದಿದ್ದೀರಾ? ‘ಬುಡಕಟ್ಟು ಸಂಶೋಧನಾ ಸಂಸ್ಥೆ’ಯ ನಿರ್ದೇಶಕನ ಬಿಡುಗಡೆ ಒತ್ತಾಯ
ತೀರ್ಥಹಳ್ಳಿ ಡಿವೈಎಸ್‌ಪಿ ಗಜಾನನ ವಾಮನ ಸುತಾರ, ಹೊಸನಗರ ಇನ್ಸ್‌ಪೆಕ್ಟರ್ ಗುರಣ್ಣ ಹೆಬ್ಬಾಳ್ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್, ಸಿಬ್ಬಂದಿ ಶಿವಕುಮಾರ್ ನಾಯ್ಕ, ಉಮೇಶ್ ಮತ್ತು ಸಂತೋಷ್ ತಂಡದಲ್ಲಿದ್ದರು.