ರಾಜ್ಯಾದ್ಯಂತ ಡಿವೈಎಸ್‌ಪಿ, ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆಯಾಗಿದ್ದು, ಶಿವಮೊಗ್ಗ ಜಿಲ್ಲೆಯ ಇಬ್ಬರು ಡಿವೈಎಸ್‌ಪಿ ಮತ್ತು ಇಬ್ಬರು ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆಯಾದರೆ, ಒಬ್ಬರಿಗೆ ಪಿಎಸ್ಐನಿಂದ ಪಿಐಗೆ ಬಡ್ತಿ ದೊರೆತಿದೆ.
ತೀರ್ಥಹಳ್ಳಿಯಲ್ಲಿ ಇಬ್ಬರು ಅಧಿಕಾರಿಗಳು ವರ್ಗಾವಣೆಯಾಗಿದ್ದಾರೆ. ಡಿವೈಎಸ್‌ಪಿ ಗಜಾನನ ಸುತಾರ ಹಾಗೂ ಇನ್‌ಸ್ಪೆಕ್ಟರ್ ಅಶ್ವಥ್ ಗೌಡರನ್ನು ವರ್ಗಾಯಿಸಿ ಆದೇಶಿಸಿದೆ. ಡಿವೈಎಸ್‌ಪಿ ಗಜಾನನ ವಾಮನ ಸುತಾರರನ್ನು ಬಾಗಲಕೋಟೆಗೆ ವರ್ಗಾಯಿಸಲಾಗಿದ್ದರೆ, ಇನ್‌ಸ್ಪೆಕ್ಟರ್ ಅಶ್ವಥ್ ಗೌಡರನ್ನು ಬೆಂಗಳೂರಿನ ಐಜಿ ಕಚೇರಿಗೆ ವರ್ಗಾಯಿಸಲಾಗಿದೆ.
ತೀರ್ಥಹಳ್ಳಿಗೆ ಇನ್ ಸ್ಪೆಕ್ಟರ್ ಆಗಿ ಇಮ್ರಾನ್ ಬೇಗ್ ಎಂಬುವರು ವರ್ಗಾಯಿಸಲಾಗಿದೆ. ಶಿವಮೊಗ್ಗದಲ್ಲಿ ಡಿವೈಎಸ್ಪಿಯಾಗಿರುವ ಸುರೇಶ್ ರವರಿಗೆ ವರ್ಗಾವಣೆಯಾಗಿದೆ. ಇವರ ಜಾಗಕ್ಕೆ ರಾಜ್ಯ ಗುಪ್ತವಾರ್ತೆಯಲ್ಲಿದ್ದ ಸಂಜೀವ್ ಕುಮಾರ್ ತಿರ‌್ಲುಕ ಅವರು ವರ್ಗಾವಣೆಯಾಗಿದ್ದಾರೆ.
ಇನ್ನು ತುಂಗನಗರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಪ್ರಸಾದ್ ಅವರು ಇನ್‌ಸ್ಪೆಕ್ಟರ್ ಆಗಿ ಬಡ್ತಿ ಪಡೆದಿದ್ದಾರೆ. ಲೋಕಾಯುಕ್ತದಲ್ಲಿ ಇನ್‌ಸ್ಪೆಕ್ಟರ್ ಆಗಿ ಬಡ್ತಿಪಡೆದು ವರ್ಗಗೊಂಡಿದ್ದಾರೆ. ಸ್ಥಳ ನಿರೀಕ್ಷೆಯಲ್ಲಿದ್ದ ಪುಲ್ಲಯ್ಯನವರನ್ನು ಸಾಗರ ಪೊಲೀಸ್ ಠಾಣೆಯ ಸಿಪಿಐ ಆಗಿ ವರ್ಗವಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಮೇಲಧಿಕಾರಿಗಳೊಂದಿಗೆ ದುರ್ನಡತೆ; ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯ ಪ್ರಸಾದ್ ಅಮಾನತು
ಶಿವಮೊಗ್ಗದ ಜಯನಗರ, ಗ್ರಾಮಾಂತರದಲ್ಲಿ ಪಿಐ ಆಗಿ ಕರ್ತವ್ಯ ನಿರ್ವಹಿಸಿ ಚಿಕ್ಕಮಗಳೂರಿನ ಡಿಎಸ್‌ಪಿ ಆಗಿ ವರ್ಗವಾಗಿದ್ದ ಅಭಯ್ ಪ್ರಕಾಶ್ ಸೋಮನಾಳ್ ಚಿಕ್ಕಮಗಳೂರಿನ ಟೌನ್ ಠಾಣೆಯ ಪಿಐ ಆಗಿ ವರ್ಗವಾಗಿದ್ದಾರೆ. ಒಟ್ಟು 41 ಪಿಐಗಳು ಮತ್ತು 11 ಜನ ಡಿವೈಎಸ್‌ಪಿಗಳ ವರ್ಗಾವಣೆಯಾಗಿದೆ.