ಶಿವಮೊಗ್ಗ | ಪರಿಹರಿಯದ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ; ಲೋಕಸಭಾ ಚುನಾವಣೆ ಬಹಿಷ್ಕಾರದ ಎಚ್ಚರಿಕೆ 

Date:

Advertisements

ಶರಾವತಿ ಜಲ ವಿದ್ಯುತ್ ಯೋಜನೆಯು ಕರ್ನಾಟಕದ ಒಟ್ಟು ವಿದ್ಯುತ್ ಉತ್ಪಾದನೆಯ ಶೇ.51ರಷ್ಟು ಪೂರೈಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸೋಲಾರ್ ಯೋಜನೆಗಳಿಂದ ಸ್ವಲ್ಪ ಪ್ರಮಾಣ ಕಡಿಮೆ ಆಗಿದೆ. ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹಾರ ಮಾಡಲಿಲ್ಲವಾದಲ್ಲಿ ಈ ಬಾರಿ ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡಲಾಗುವುದೆಂಬ ಮಾತುಗಳು ಕೇಳಿ ಬರುತ್ತಿವೆ.

1959 ರಿಂದ 1960ರ ಪ್ರಾರಂಭದಲ್ಲಿ ಸಾಗರ ಹೊಸನಗರ ತಾಲೂಕಿನ ಸುಮಾರು 1ಲಕ್ಷ ಎಕರೆ ಜಮೀನು ಮುಳುಗಡೆ ಆಗಿದ್ದು, ಭೂಸ್ವಾಧಿನ ಆಗಿದೆ. ಮುಳುಗಡೆ ಆದ ಸಂದರ್ಭದಲ್ಲಿ ಸಾಗರ ಹೊಸನಗರ ತಾಲೂಕಿನ ಹಲವಾರು ರೈತರಿಗೆ ನೋಟಿಸ್ ನೀಡಿರುವುದೂ ಕೂಡ ಕಂಡಬಂದಿದೆ.

ಮಲೆನಾಡ ರೈತ ಹೋರಾಟ ಸಮಿತಿ ಸಂಚಾಲಕ ತಿ ನಾ ಶ್ರೀನಿವಾಸ್ ಈ ದಿ.ಕಾಮ್‌ನೊಂದಿಗೆ ಮಾತನಾಡಿ, ಮುಳುಗಡೆ ಸಂದರ್ಭದಲ್ಲಿ ರೈತರಿಗೆ ನೀಡಿರುವ ನೋಟಿಸ್‌ನಲ್ಲಿ ಏನಿದೆ ಎಂದರೆ ಲಿಂಗನಮಕ್ಕಿ ಡ್ಯಾಂ ಸಿದ್ದವಾಗಿದೆ. ತಕ್ಷಣವೇ ನೀವು ಸ್ಥಳಾಂತರವಾಗಬೇಕು. ರಸ್ತೆಗಳು ಇದ್ದಲ್ಲಿ ನಿಮ್ಮ ಸಗಟು ಸಾಮಾನುಗಳನ್ನು ತೆಗೆದುಕೊಂಡು ಹೋಗಲು ವಾಹನದ ವ್ಯವಸ್ಥೆ ನಾವು ಮಾಡುತ್ತೇವೆ, ರಸ್ತೆಗಳು ಇಲ್ಲದ ಜಾಗದಲ್ಲಿ ನೀವೇ ಸಾಗಿಸಬೇಕೆಂದು ಕೆಪಿಟಿಸಿಎಲ್ ಅಮಾನವೀಯ ನೋಟಿಸ್ ನೀಡಿತ್ತು. ಅದಕ್ಕೆ ತಲೆಬಾಗಿ ಜನರು ತಮ್ಮ ಜಾನುವಾರುಗಳು ಎಲ್ಲವೂ ಸೇರಿದಂತೆ ಬೇರೆಡೆಗೆ ಸ್ಥಳಾಂತರವಾಗುವ ಸಂದರ್ಭ ಉಂಟಾಯಿತು. 1959 ರಿಂದ 64ರ ವರೆಗೂ ಅರಣ್ಯ ಇಲಾಖೆಯಿಂದ ಸುಮಾರು 100 ಸರ್ಕಾರಿ ಆದೇಶಗಳು ಬಂದಿವೆ” ಎಂದು ಹೇಳಿದರು.

Advertisements

“9600 ಎಕರೆ ಭೂಮಿಯನ್ನು ಶರಾವತಿ ಮುಳುಗಡೆ ಸಂತ್ರಸ್ತರಿಗೆ ಕೊಡಬೇಕೆಂದು ಅರಣ್ಯ ಇಲಾಖೆ ಆದೇಶದಲ್ಲಿ ಇತ್ತು. ಆ ಆದೇಶದಲ್ಲಿ ಕೆಳಗಡೆ ಒಂದು ಸಾಲಿನಲ್ಲಿ ಚಿಕ್ಕದಾಗಿ ಬರೆಯಲಾಗಿತ್ತು. ಈ ಆದೇಶದಲ್ಲಿ ಈ ಅರಣ್ಯ ಭೂಮಿ ಸಂತ್ರಸ್ತರಿಗೆ ಕೊಡಲು ಅದನ್ನು ಸಿಸಿಎಫ್‌ಒ ಜಿಲ್ಲೆ ಅರಣ್ಯ ಮುಖ್ಯ ಸಂರಕ್ಷಕರು ಇದನ್ನು ಡಿ ನೋಟಿಫಿಕೇಶನ್‌ ಮಾಡಬೇಕು. ಕಂದಾಯ ಭೂಮಿಯಾಗಿ ಪರಿವರ್ತಿಸಬೇಕೆಂದು ಒಂದು ಸಾಲಿನಲ್ಲಿ ಬರೆದಿತ್ತು. ಆ ಸಾಲನ್ನು ಸುಮಾರು 40 ವರ್ಷ ಕಳೆದರೂ ಶಿವಮೊಗ್ಗ ಜಿಲ್ಲೆಯ ಯಾವ ರಾಜಕೀಯ ಮುತ್ಸದ್ದಿಗಳು, ಜಿಲ್ಲೆ ಅಳುವ ಪ್ರಮುಖರು ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ” ಎಂದರು.

“2014 ರಲ್ಲಿ ಕಾಗೋಡು ತಿಮ್ಮಪ್ಪ ಅವರು ಸ್ಪೀಕರ್‌ ಆದ ಸಮಯದಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಇದನ್ನು ಗಮನಕ್ಕೆ ತಂದು ಅಲ್ಲಿಯ ಜನರ ಸ್ಥಳಾಂತರವಾಯಿತೇ ಹೊರತು ಯಾರಿಗೂ ಹಕ್ಕುಪತ್ರ ಸಾಗುವಳಿ ಚೀಟಿ ಏನನ್ನೂ ನೀಡಿರುವುದಿಲ್ಲ. ಆ ಸಂದರ್ಭದಲ್ಲಿ ಕಾಗೋಡು ತಿಮ್ಮಪ್ಪ ಅವರು ವಿಶೇಷ ಕಾಳಜಿ ವಹಿಸಿ ಅರಣ್ಯ ಇಲಾಖೆ ಸೆಕ್ರೆಟರಿ ಆಗಿದ್ದ ಮದನ್ ಗೋಪಾಲ್ ಅವರಿಂದ ವಿಶೇಷ ಕಾಳಜಿಯಿಂದ ಒಂದು ವರ್ಷದಲ್ಲಿ ಕನಿಷ್ಟ 10ಕ್ಕೂ ಹೆಚ್ಚು ಸಭೆಗಳು ನಡೆದಿವೆ” ಎಂದು ಹೇಳಿದರು.

“ಸುಮಾರು 3500 ಎಕರೆ ಜಮೀನನ್ನು ಹಕ್ಕುಪತ್ರವನ್ನು 1000 ಮಂದಿ ರೈತರಿಗೆ ವಿತರಿಸಿದರು.
ಈ ಹಕ್ಕುಪತ್ರಗಳು ಎಲ್ಲೆಲಿ ನೀಡಿದರೆಂದರೆ ಶಿವಮೊಗ್ಗ ಗ್ರಾಮಾಂತರ ಭಾಗದ ಚೋಡ್ನಾಳ, ಬೆಡ್ನಲ್, ರೆಂಚಿಕೊಪ್ಪ, ಶೆಟ್ಟಿಹಳ್ಳಿ ಮತ್ತು ಕಟ್ಟಿಗೆ ಹಳ್ಳದಲ್ಲಿ ರೈತರಿಗೆ ಭೂಮಿ ನೀಡಿದರು” ಎಂದರು.

“ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಸರ್ಕಾರಿ ಆದೇಶ 1959 ರಿಂದ 64ರವರೆಗೂ ಆದೇಶ ಹೊರಡಿಸಿದ್ದು, ಆದರ ಪ್ರಕಾರ ಡಿ ನೋಟಿಫಿಕೇಶನ್‌ ಮಾಡಿ 9,600 ಎಕರೆ ಭೂಮಿ ಕೊಡಲು ತೀರ್ಮಾನಿಸಿ, ಅರಣ್ಯ ಸಂರಕ್ಷಣೆ ಕಾಯ್ದೆ 1980ರಲ್ಲಿ ಜಾರಿಗೆ ಬಂದಿದ್ದು, ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿಲ್ಲ. ಯಾಕೆಂದರೆ ಅರಣ್ಯ ಕಾಯ್ದೆ ಬರುವ ಮುಂಚೆ ಆದೇಶವಾಗಿರುವುದರಿಂದ ಇದಕ್ಕೆ ಕೇಂದ್ರ ಸರ್ಕಾರದ ಆದೇಶದ ಅಗತ್ಯವಿಲ್ಲವೆಂದು ರಾಜ್ಯ ಸರ್ಕಾರ ಆದೇಶ ಹೋರಡಿಸಿತ್ತು.

ಈ ಆದೇಶದ ವಿರುದ್ಧ ಹೈಕೋರ್ಟ್‌ಗೆ ಒಬ್ಬರು ರಿಟ್ ಅರ್ಜಿ ಸಲ್ಲಿಸಿದಾಗ ಇದಕ್ಕೆ ಹೈಕೋರ್ಟ್ ವಿಚಾರಣೆ ನಡೆಸಿ ಕೇಂದ್ರ ಸರ್ಕಾರ ಅನುಮತಿ ಇಲ್ಲದೆ ರಾಜ್ಯ ಸರ್ಕಾರ ತೀರ್ಮಾನ ಮಾಡುವುದಕ್ಕೆ ಅವಕಾಶವಿಲ್ಲವೆಂದು ಹೈಕೋರ್ಟ್ ತೀರ್ಪು ನೀಡಿದ್ದು, ಈ ಆದೇಶ 2019ರಲ್ಲಿ ಬಂದಿದೆ” ಎಂದರು.

“ಈ ಸಮಸ್ಯೆ ಇದೀಗ ಮತ್ತೆ ನೆನೆಗುದಿಗೆ ಬಿದ್ದಿದ್ದು, ಕೇಂದ್ರ ಸರ್ಕಾರದ ಆದೇಶ ಮುಖ್ಯವೆಂಬ ಆದೇಶವಿರುವುದರಿಂದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಭೆ ನಡೆಸಿ ಅನಂತರ ಬೊಮ್ಮಾಯಿ ಕೂಡ ಸಭೆ ಮಾಡಿ ಕೇವಲ ಸಮಸ್ಯೆ ಬಗೆಹರಿಸಿಕೊಡುತ್ತೇವೆ ಎಲ್ಲ ಸಂತ್ರಸ್ತರು ಮನವಿ ನೀಡಿ ಎಂದಿದ್ದರು. ರಾಜ್ಯದಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದರೂ ಕೂಡ ಹಕ್ಕುಪತ್ರ ಕೊಟ್ಟಿರುವ 3,000 ಮಂದಿ ರೈತರ ಹಕ್ಕುಪತ್ರಗಳನ್ನೂ ವಜಾ ಮಾಡಿದ್ದಾರೆ” ಎಂದು ಬೊಮ್ಮಾಯಿ ಸರ್ಕಾರವನ್ನು ದೂರಿದರು.

“ಕಳೆದ ಚುನಾವಣೆ ಸಂದರ್ಭದಲ್ಲಿ ಮಧು ಬಂಗಾರಪ್ಪನವರು ಆಯನೂರಿನಿಂದ ಶಿವಮೊಗ್ಗದವರೆಗೂ ಪಾದಯಾತ್ರೆ ಮಾಡಿದರು. ಅದೇ ದಿನ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ 10,000 ಮಂದಿ ರೈತರನ್ನು ಉದ್ದೇಶಿಸಿ ಹೈಕೋರ್ಟ್ ಕೂಡ ವಿಫಲವಾಗಿದೆ. ಹಾಗಾಗಿ ನಮ್ಮ ಸರ್ಕಾರ ಬಂದ ಕೂಡಲೇ ಅವರಿಗೆ ನ್ಯಾಯ ಕೊಡಿಸುತ್ತೇವೆಂದು ಡಿ ಕೆ ಶಿವಕುಮಾರ್ ಮಲೆನಾಡ ರೈತರ ಒಂದು ಸಮಿತಿಯನ್ನು ರಚನೆ ಮಾಡಿದ್ದರು. ಇಡೀ ಮಲೆನಾಡಿನ ಸಂತ್ರಸ್ತರು ತಮ್ಮ ಸಮಸ್ಯೆ ಕುರಿತು ಅಂದು ಶಿವಮೊಗ್ಗದ ಎನ್‌ಇಎಸ್ ಮೈದಾನದಲ್ಲಿ ಮನವಿ ಕೊಡಲಾಗಿತ್ತು” ಎಂದು ಹೇಳಿದರು.

“ಈಗ ಸರ್ಕಾರ ಬದಲಾವಣೆ ಆಗಿದ್ದು, ಅಂದು ಬಿ ಎಸ್ ಯಡಿಯೂರಪ್ಪನವರು ಅಂದು ಶಿವಮೊಗ್ಗದ ಈಡಿಗರ ಭವನಕ್ಕೆ ಸಂತ್ರಸ್ತರೆಲ್ಲರೂ ಬರಬೇಕು ಎಂದರು. ನಂತರ ಸಭೆಯಲ್ಲಿ ಕೇವಲ 15 ದಿನದಲ್ಲಿ ಸಮಸ್ಯೆ ಪರಿಹಾರ ಮಾಡಿಸುತ್ತೇವೆಂದು ಅಂದು ಹೇಳಿದ್ದು ಈಗ ಇಷ್ಟು ತಿಂಗಳು ಕಳೆದರೂ ಬಿಜೆಪಿ ಮುಖಂಡರು ಬಾಯಿ ಬಿಡುತ್ತಿಲ್ಲ. ಮುಖ್ಯಮಂತ್ರಿಯಾಗಿದ್ದ ಬೊಮ್ಮಾಯಿ ಕರೆದು ತೀರ್ಥಹಳ್ಳಿಯಲ್ಲಿ ಸಂತ್ರಸ್ತರ ಮನವಿ ಮಾಡಿಕೊಡಬೇಕೆಂದು ಪುನಃ ನಾಟಕ ಆಡಿದರು” ಎಂದರು.

“ಪ್ರಸ್ತುತದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಸಿದ್ದರಾಮಯ್ಯನವರು ನುಡಿದಂತೆ ನಡೆದಿದ್ದೇವೆಂದು ಯುವನಿಧಿ ಕಾರ್ಯಕ್ರಮದಲ್ಲಿ ಹೇಳಿದರು. ಅಧಿಕಾರಿ ಬಂದ ಕೂಡಲೇ ಮಲೆನಾಡಿನ ರೈತರ ಸಮಸ್ಯೆ ಬಗೆಹರಿಸಿ ಕೊಡುತ್ತೇವೆ ಎಂದಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಭೆ ಕರೆದಿದ್ದು, ಈ ಸಭೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮತ್ತು ಕೃಷ್ಣಭೈರೇಗೌಡರು ಕೂಡ ಇದ್ದರು. ಆದರೆ ಈ ಸಭೆಯಲ್ಲಿ ಯಾವುದೇ ಪರಿಹಾರದ ಬಗ್ಗೆ ನಿರ್ಣಯವಾಗಲಿಲ್ಲ. ಅಡ್ವೋಕೇಟ್ ಜನರಲ್ ಬಳಿ ಮಾತನಾಡಿದ್ದೆವೆಂದು ಮಧು ಬಂಗಾರಪ್ಪ ತಿಳಿಸಿದ್ದರು. ಆದರೆ ಇಂದಿಗೂ ಯಾವುದೇ ಪರಿಹಾರ ದೊರಕಿಲ್ಲ. ಹಾಗಾಗಿ ಯುವನಿಧಿ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಬಂದಾಗ ಸಾವಿರಾರು ರೈತರು ಮನವಿ ಮಾಡಿ ಇಷ್ಟು ತಿಂಗಳು ಕಳೆದರೂ ಸಮಸ್ಯೆ ಬಗ್ಗೆ ಹೇಳಿದಾಗ ಏನೂ ಉತ್ತರಿಸಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಕೇರಳ-ಕರ್ನಾಟಕ ರೈಲ್ವೆ ಸಂಪರ್ಕ ಯೋಜನೆಗೆ ತೀವ್ರ ವಿರೋಧ: ‘ಬಂಡೀಪುರ ಉಳಿಸಿ’ ಅಭಿಯಾನ ಆರಂಭ

“ಲೋಕಸಭಾ ಚುನಾವಣೆಯೊಳಗೆ ಸಮಸ್ಯೆ ಬಗೆಹರಿಸಲಿಲ್ಲವಾದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಚುನಾವಣಾ ಬಹಿಷ್ಕಾರ ಹಾಕಬೇಕೆಂದು ನಿರ್ಧಾರ ಮಾಡುತ್ತಿದ್ದೇವೆ. ಹಾಗೆಯೇ
ಶರಾವತಿ ವರಾಹಿ ಸಾವೇಹೈಕ್ಳು ಭದ್ರ ರೈತರ ಸಮಸ್ಯೆಗೆ ಭೂಮಿ ಕೊಟ್ಟಿರುವ ಸಮಸ್ಯೆ ಬಗೆಹರಿಸಿ ಕೊಡಬೇಕು. ರಾಜ್ಯಕ್ಕೆ ಬೆಳಕು ಕೊಟ್ಟವರ ಬದುಕು ಹಸನವಾಗಬೇಕು. ಇಲ್ಲವಾದರೆ ತೀವ್ರ ಹೋರಾಟವಾಗಲಿದೆ” ಎಂದು ಎಚ್ಚರಿಕೆ ನೀಡಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

ಧಾರವಾಡ | ಹಾಳುಬಿದ್ದ ಸಂಶಿ ಎಪಿಎಂಸಿ; ವಾರದ ಸಂತೆ ಸ್ಥಳಾಂತರಿಸಲು ಒತ್ತಾಯ

ಸರ್ಕಾರದ ಮಟ್ಟದಲ್ಲಿ ಆಗುವ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಇತ್ತ...

ಹಾಸನ | ಕ್ಯೂಬಾ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಫಿಡೆಲ್ ಕ್ಯಾಸ್ಟ್ರೋ ಕೊಡುಗೆ ಅಪಾರ: ಬರಹಗಾರ ರವಿಕುಮಾರ್

ಕೃಷಿ ಪ್ರಧಾನವಾಗಿರುವ ಪುಟ್ಟ ಕ್ಯೂಬಾ ದೇಶವನ್ನು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುವಂತೆ...

ಕುಶಾಲನಗರ | ಕೊಡಗು ಪ್ರವೇಶ ನಿರ್ಬಂಧ; ಪುನೀತ್ ಕೆರೆಹಳ್ಳಿಯನ್ನು ಹೊರಹಾಕಿದ ಪೊಲೀಸರು

ಕೊಡಗು ಜಿಲ್ಲೆ, ಕುಶಾಲನಗರಕ್ಕೆ ಆಗಮಿಸಿದ್ದ ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕ ಪುನೀತ್...

Download Eedina App Android / iOS

X