ಶಿವಮೊಗ್ಗ | ಸರ್ಕಾರಿ ಶಾಲೆಯಲ್ಲಿ ನೀರಿಗೆ ಹಾಹಾಕಾರ; ಮನವಿಗೂ ಸ್ಪಂದಿಸದ ಶಿಕ್ಷಣ ಇಲಾಖೆ, ಅಧಿಕಾರಿಗಳು

Date:

Advertisements

300ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಕುಡಿಯಲು, ಶೌಚಾಲಯಕ್ಕೆ ನೀರಿಲ್ಲ. ನೀರಿಗೆ ಹಾಹಾಕಾರ ಉಂಟಾಗಿರುವುದು ಶಿವಮೊಗ್ಗ ನಗರದಲ್ಲಿರುವ ಶಾಲೆಗಳ ದುಃಸ್ಥಿತಿ.

ಶಿವಮೊಗ್ಗ ನಗರದ ನ್ಯೂಮಂಡ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಉರ್ದು ಶಾಲೆಯೂ ಇದೆ. ಇಲ್ಲಿ ಪ್ರಸ್ತುತ ವರ್ಷದಲ್ಲಿ ಎಲ್‌ಕೆಜಿಯಿಂದ ಎಂಟನೇ ತರಗತಿವರೆಗೆ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, 160ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಕನ್ನಡ ಶಾಲೆಯಲ್ಲಿ 200ಕ್ಕೂ ಅಧಿಕ ಮಕ್ಕಳ ದಾಖಲಾತಿಯಿದೆ.

ಶಾಲೆಯಲ್ಲಿ ಶಿಕ್ಷಕರ ವ್ಯವಸ್ಥೆಯೂ ಚೆನ್ನಾಗಿದ್ದು ಸರಿಸುಮಾರು ಕನ್ನಡ ಶಾಲೆ ಮತ್ತೆ ಉರ್ದು ಶಾಲೆ ಸೇರಿ ಒಟ್ಟು 300ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶಿಕ್ಷಣ ಸಿಗುತ್ತಿದೆ. ಆದರೆ ಶಾಲೆಗೆ ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲದಾಗಿದೆ.

Advertisements

ಇದಕ್ಕೆ ಸಂಬಂಧಪಟ್ಟಂತೆ ಕ್ಷೇತ್ರ ಶಿಕ್ಷಣಾಧಿಕಾರಿ, ನೀರಾವರಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಸಂಬಂಧಪಟ್ಟ ಎಲ್ಲರ ಗಮನಕ್ಕೆ ತಂದು ಪತ್ರದ ಮೂಲಕ ಮನವಿ ನೀಡಿದರೂ ಕೂಡ ಯಾವುದೇ ಪ್ರಯೋಜನ ಆಗುತ್ತಿಲ್ಲ.

ಶಾಲೆಯ ವಿದ್ಯಾರ್ಥಿಗಳಿಗೆ ಕುಡಿಯಲು ನೀರಿಲ್ಲ, ಶೌಚಾಲಯಕ್ಕೂ ನೀರಿಲ್ಲ. ಉರ್ದು ಶಾಲೆ ಸಿಬ್ಬಂದಿಗಳು(ಶಿಕ್ಷಕರು) ನಿತ್ಯವೂ ದೂರದಿಂದ 50 ಕೊಡಪಾನ ನೀರು ತಂದು ಶೌಚಾಲಯಕ್ಕೆ ಹಾಗೂ ಕುಡಿಯೋದಕ್ಕೆ ಬಳಸುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸಲು ಹಲವು ಬಾರಿ ತಿಳಿಸಿದರೂ ಸರಿಪಡಿಸಿಕೊಡುತ್ತಿಲ್ಲವೆಂದು ಆರೋಪಿಸುತ್ತಿದ್ದಾರೆ.

ರಿಯಾಜ್ ಅಹಮದ್ ಎಸ್ ಡಿ ಎಂ ಸಿ ಅಧ್ಯಕ್ಷರು ಉರ್ದು ಶಾಲೆ 1

ಉರ್ದು ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ರಿಯಾಜ್ ಅಹಮದ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಶಿವಮೊಗ್ಗ ನಗರದಲ್ಲಿ ಮಹಾನಗರ ಪಾಲಿಕೆ ಅಡಿಯಲ್ಲಿ ಬರುವ ಈ ವಾರ್ಡ್‌ನಲ್ಲಿ ಶಾಲೆಗೆ ವಾರದ 24 ಗಂಟಯೂ ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡಿಲ್ಲ. ಕೊನೆಪಕ್ಷ ಶಾಲೆಗೆ ಒಂದು ಬೋರ್ ಕೂಡ ಹಾಕಿಸಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು” ಎಂದು ತಿಳಿಸಿದ್ದಾರೆ.

ಕನ್ನಡ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಸತೀಶ್ ಮಾತನಾಡಿ, “ಶೌಚಾಲಯಕ್ಕೆ ನೀರು ಇಲ್ಲದೆ ಗಬ್ಬು ವಾಸನೆ ಬರುತ್ತಿದೆ. ನಾವು ಪದೇಪದೆ ಕ್ಲೀನ್ ಮಾಡಿಸುತ್ತಲೇ ಇದ್ದೀವಿ. ಸ್ವಂತ ಹಣದಲ್ಲಿ ಎಷ್ಟು ಅಂತ ಸರಿ ಮಾಡೋಕಾಗುತ್ತೆ. ಮಕ್ಕಳಿಗಂತೂ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಕೂಟಾ ಯಾರೂ ಸಮಸ್ಯೆ ಬಗೆಹರಿಸಿಕೊಡುತ್ತಿಲ್ಲ. ವಾರಕ್ಕೊಮ್ಮೆ ಕುಡಿಯುವ ನೀರನ್ನು ಟ್ಯಾಂಕರ್‌ನಿಂದ ತರಿಸುತ್ತಿದ್ದೇವೆ. ಇದು 300ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಾಕಾಗುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ಸತೀಸ್‌ ಎಸ್‌ಡಿಎಂಸಿ

ಸಾಮಾಜಿಕ ಹೋರಾಟಗಾರ ಸಿಬ್ಗತ್ಉಲ್ಲಾ ಮಾತನಾಡಿ, “ಈ ಸಂಬಂಧ ಅಧಿಕಾರಿಗಳಿಗೆ ಕರೆಮಾಡಿ ತಿಳಿಸಿದರೂ ಕೂಡಾ ವ್ಯವಸ್ಥೆ ಮಾಡಿಕೊಡಲಿಲ್ಲ. ಈಗ ಬರುತ್ತೆ ನಾಳೆ ಬರುತ್ತೆ ಅಂತ ಕಾಲಹರಣ ಮಾಡಿದರು. ನಂತರ ನಾನೇ ಟ್ಯಾಂಕರ್‌ಗೆ ತಿಳಿಸಿ ಕುಡಿಯುವ ನೀರು ತರಿಸಿಕೊಟ್ಟೆ. ನಂತರ ಒಂದೆರಡು ಬಾರಿ ಕುಡಿಯುವ ನೀರಿನ ಟ್ಯಾಂಕರ್‌ನಿಂದ ನೀರಿನ ವ್ಯವಸ್ಥೆ ಒದಗಿಸಿಕೊಟ್ಟಿದ್ದೇನೆ. ಶಾಲೆ ಪ್ರಾರಂಭವಾಗಿ 3 ರಿಂದ 4 ತಿಂಗಳು ಕಳೆದರೂ ಕೂಡಾ ಯಾರೂ ಇದರ ಕುರಿತು ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ. ಬರಿ ಇದೊಂದು ಶಾಲೆ ಅಷ್ಟೇ ಅಲ್ಲ, ಇಲ್ಲೇ ಹತ್ತಿರದಲ್ಲಿರುವ ಅರಕೆರೆ ಗ್ರಾಮದ ಸರ್ಕಾರಿ ಶಾಲೆಯದ್ದೂ ಕೂಡ ಇದೇ ಪರಿಸ್ಥಿತಿಯಾಗಿದೆ” ಎಂದು ತಿಳಿಸಿದರು.

ಸಾಮಾಜಿಕ ಹೋರಾಟಗಾರ ಸಿಬ್ಗತ್‌ಉಲ್ಲಾ

ವಾಟರ್ ಬೋರ್ಡ್‌ನ ಎ ಇ ಸಂತೋಷ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ರಸ್ತೆ ಕಾಮಗಾರಿ ಮಾಡುವಾಗ ನೀರಿನ ಪೈಪ್ ಲೈನ್ ಒಡೆದುಹೋಗಿದೆ. ಇದುನ್ನು ಯಾರೂ ಕೂಡ ಸರಿಪಡಿಸಿಲ್ಲ. ಶಾಲೆಯ ಹೊಸಕಟ್ಟಡ ಕಟ್ಟುವಾಗ ನೀರಿನ ಪೈಪ್ ಲೈನ್ ಶಾಲೆ ಕಟ್ಟಡದ ಕೆಳಗೆ ಹೋಗಿದೆ. ಹಾಗಾಗಿ ಈಗ ಇದುನ್ನು ಸರಿಪಡಿಸಿಕೊಡುವುದು ಕಷ್ಟ. ಹಾಗಾಗಿ ಶಾಲೆಯವರೇ ಹೊಸ ಪೈಪ್‌ಲೈನ್ ವ್ಯವಸ್ಥೆ ಮಾಡಿಸಿಕೊಳ್ಳಬೇಕು. ನಾವು ಯಾವುದೇ ಕಚೇರಿ, ಶಾಲೆ, ಮನೆಗಳಿಗೆ ಸಂಬಂಧಿಸಿದಂತೆ ತೊಂದರೆಯಾದರೆ ಅವರವರೇ ಪೈಪ್‌ಲೈನ್ ಹಾಕಿಸಿಕೊಳ್ಳಬೇಕು. ಶಾಲೆ ಒಳಗಿರುವ ಸಂಪ್‌ಗೆ ಶಾಲೆ ಸಿಬ್ಬಂದಿಗಳೇ ಪೈಪ್‌ಲೈನ್ ವ್ಯವಸ್ಥೆ ಮಾಡಿಕೊಳ್ಳಬೇಕು. ನಾವು ಮಾಡುವುದಿಲ್ಲ. ಶಾಲೆಗೆ ಬೇಕಾಗಿರುವ ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ಶಿಕ್ಷಣ ಇಲಾಖೆಯವರು ಕ್ರಮ ವಹಿಸಬೇಕು” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಮಂಡ್ಯ | ಗಣಂಗೂರು ಟೋಲ್ ಬಳಿ ಹಾಳಾಗಿರುವ ಸರ್ವೀಸ್ ರಸ್ತೆ; ಅಧಿಕಾರಿಗಳ ನಿರ್ಲಕ್ಷ್ಯ

“ರಸ್ತೆ ಕಾಮಗಾರಿ ನಡೆಯುವಾಗ ಪೈಪ್‌ಲೈನ್ ಹಾಳಾಗಿದೆಯೆಂದು ತಿಳಿದಮೇಲೂ ಸರಿಪಡಿಸಿಕೊಡಲಿಲ್ಲ. ಹಳೆ ಪೈಪ್‌ಲೈನ್ ಎಲ್ಲಿದೆ ಎಂಬುದನ್ನು ಹುಡುಕಿ ಕೆಲಸ ಮಾಡುವುದು ಕಷ್ಟ. ಶಾಲೆಯವರು ಹೊಸ ಕನೆಕ್ಷನ್ ಮಾಡಿಸಿಕೊಳ್ಳಲಿ. ಈಗಲೂ ನಾನು ವಾರಕ್ಕೊಮ್ಮೆ ಒಂದು ಟ್ಯಾಂಕರ್ ನೀರು ಕೊಡಿಸುತ್ತಿದ್ದೇನೆ. ಶಿವಮೊಗ್ಗ ನಗರಕ್ಕೆ ಇರುವುದೇ ಎರಡು ಟ್ಯಾಂಕರ್, ಜೊತೆಗೆ ಹಬ್ಬ ಎಲ್ಲ ಇದ್ದಿದ್ದಕ್ಕೆ ಒಂದುವಾರ ನೀರು ಕಳಿಸುವುದಕ್ಕೆ ಆಗಿಲ್ಲ. ಇದರಿಂದ ಸಮಸ್ಯೆಯಾಗಿದೆ. ಮುಂದೆ ಹೀಗಾಗದಂತೆ ಮಾಡುತ್ತೇನೆ. ಜೊತೆಗೆ ಶಾಲೆಯವರು ಈ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಹೊಸ ಪೈಪ್‌ಲೈನ್ ಹಾಕಿಸಿಕೊಳ್ಳಬೇಕು” ಎಂದರು.

ಇದೆಲ್ಲದರ ನಡುವೆ ಕ್ಷೇತ್ರಶಿಕ್ಷಣಾಧಿಕಾರಿಗಳು ಶಿಕ್ಷಕರನ್ನು ಬೆದರಿಸುತ್ತಿದ್ದಾರೆಂಬ ಮಾಹಿತಿ ಈ ದಿನ.ಕಾಮ್‌ಗೆ ಲಭ್ಯವಾಗಿದ್ದು, “ಶಿಕ್ಷಕರು, ಪೋಷಕರು, ಸಾರ್ವಜನಿಕರು ಯಾರೇ ಮಾಧ್ಯಮದವರಿಗೆ ಶಾಲೆಯ ಅನಾನುಕೂಲಗಳ ವಿಷಯ ತಿಳಿಸಕೂಡದು. ಮಾಧ್ಯಮಗಳಿಗೆ ಯಾಕೆ ಮಾಹಿತಿ ನೀಡುತ್ತೀರಾ?” ಎಂದು ಶಿಕ್ಷಕರಿಗೆ ಬೆದರಿಕೆ ಒಡ್ಡಿರುವುದು ತಿಳಿದುಬಂದಿದೆ.

ಶಾಲೆಗೆ ಬೇಕಾಗಿರುವ ಕುಡಿಯುವ ನೀರಿನ ಕುರಿತು ಮಾತನಾಡಲು ಈ ದಿ.ಕಾಮ್‌ ಬಿಇಒ ಅವರನ್ನು ಸಂಪರ್ಕಿಸಿದಾಗ ಮಾತನಾಡಿ, ಎಲ್ಲ ಶಾಲೆಯಲ್ಲಿಯೂ ಸಮಸ್ಯೆಗಳಿವೆ. ಅವೆಲ್ಲವನ್ನೂ ಒಮ್ಮೆಲೆ ಸರಿಪಡಿಸಲು ಆಗುವುದಿಲ್ಲ. ಹಂತ ಹಂತವಾಗಿ ಸರಿಪಡಿಸುತ್ತೇವೆ” ಎಂದು ಹಾರಿಕೆ ಉತ್ತರ ನೀಡಿದ್ದಾರೆ.

ಶಿಕ್ಷರಿಗೆ ಬೆದರಿಕೆ ಒಡ್ಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, “ನಿಮಗೆ ಈ ಬಗ್ಗೆ ಯಾರು ಮಾಹಿತಿ ನೀಡಿದ್ದಾರೆ ಅವರನ್ನು ನನ್ನ ಮುಂದೆ ಕರೆತನ್ನಿ. ಈ ಆರೋಪ ಸುಳ್ಳು” ಎಂದು ತಳ್ಳಿಹಾಕಿದ್ದಾರೆ.

ಭಾರದ್ವಾಜ್
ರಾಘವೇಂದ್ರ, ಶಿವಮೊಗ್ಗ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X