ಶಿವಮೊಗ್ಗ | ಜನಪದ ಶ್ರೀ ಪ್ರಶಸ್ತಿ ಪುರಸ್ಕೃತ ಜಿ ಸಿ ಮಂಜಪ್ಪಗೆ ಸಿಗುವುದೇ ರಾಜ್ಯೋತ್ಸವ ಪ್ರಶಸ್ತಿ?

Date:

ಜನಪದ ಶ್ರೀ ಪ್ರಶಸ್ತಿ ಪಡೆದ ಜಿ ಸಿ ಮಂಜಪ್ಪಗೆ, ಈ ಬಾರಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಾ?
ಯಾರಿವರು ಜಿ ಸಿ ಮಂಜಪ್ಪ? ಅಂದರೆ ಅವರೇ ರಾಜ್ಯದಲ್ಲೊಬ್ಬ ಅಪರೂಪದ ‘ಡೊಳ್ಳು ಕಲಾವಿದ’

- Advertisement -

ಈ ಹಿಂದೆ ಜನಪದ ಶ್ರೀ ಪ್ರಶಸ್ತಿ ಪುರಸ್ಕೃತ ಕಲಾವಿದರಿಗೆ ರಾಜ್ಯ ಸರ್ಕಾರ ತಾನಾಗಿಯೇ ಗುರುತಿಸಿ ಅದರೊಟ್ಟಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಸತತ ಐದು ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ್ದರೂ ಸರ್ಕಾರ ಮಾತ್ರ ಯಾಕೋ ಕೃಪೆ ತೋರಿದಂತಿಲ್ಲ. ಈಗ ಮತ್ತೆ ಅರ್ಜಿ ಹಾಕಿದ್ದಾರೆ. ಇದು ನನ್ನ ಕೊನೆಯ ಪ್ರಯತ್ನ. ಮತ್ತೆ ಅರ್ಜಿ ಹಾಕುವುದಿಲ್ಲ ಎಂಬುದು ಜಿ ಸಿ ಮಂಜಪ್ಪ ಮಾತು. ಈ ಅತ್ಯದ್ಭುತ ಡೊಳ್ಳಿನ ಕಲಾವಿದನಿಗೆ ಈ ಬಾರಿಯಾದರೂ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಾ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಇಂದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ 2024-25ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಉನ್ನತ ಮಟ್ಟದ ಆಯ್ಕೆ ಸಮಿತಿ ಸಭೆ

ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕೃಷ್ಣಾದಲ್ಲಿ ಇಂದು ಸಂಜೆ 6 ಗಂಟೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ 2024-25ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಉನ್ನತ ಮಟ್ಟದ ಆಯ್ಕೆ ಸಮಿತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆ, ತಾಲೂಕುಗಳಿಂದ ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದವರು ಸಲ್ಲಿಸಿರುವಂತಹ ಅರ್ಜಿಯ ಬಗ್ಗೆ ಪರಿಶೀಲನೆ ನಡೆಯಲಿದೆ.

ಸಿಎಂ ಸಿದ್ಧರಾಮಯ್ಯ ನೇತೃತ್ವದ ಇಂದಿನ ಸಭೆಯಲ್ಲಿ ರಾಜ್ಯದ ಸಾಂಸ್ಕೃತಿಕ ಸೊಬಗಿನ ಡೊಳ್ಳು ಕುಣಿತವನ್ನು ವಿದೇಶಗಳಲ್ಲೂ ಸಾರಿದಂತಹ ಜಿ ಸಿ ಮಂಜಪ್ಪ ಅವರ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಅತ್ಯುನ್ನತ ಸೇವೆಯನ್ನು ಡೊಳ್ಳು ಕಲಾ ಪ್ರದರ್ಶನದಲ್ಲಿ ನೀಡಿರುವಂತಹ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಣ್ಣೂರಿನ ಜಿ ಸಿ ಮಂಜಪ್ಪ ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆಯೂ ಸಮಿತಿಯವರ ಶಿಫಾರಸು ಪರಿಗಣಿಸಿ, ಒಪ್ಪಿಗೆ ಸೂಚಿಸಲಿದ್ದಾರಾ?

ಕರುನಾಡಿನ ಕೀರ್ತಿಯನ್ನು ವಿದೇಶದಲ್ಲಿ ಮೊಳಗಿಸಿ, ಕನ್ನಡಮ್ಮನ ಸಂಸ್ಕೃತಿಯನ್ನು ಹೊರ ರಾಜ್ಯದವರು, ಪ್ರಪಂಚದ ಜನರೇ ಬೆರಗುಗೊಳಿಸುವಂತೆ ಡೊಳ್ಳಿನ ಮೂಲಕ ಪ್ರದರ್ಶನ ನೀಡಿದ ಅಪರೂಪದ ಕಲಾವಿದ ಅಂದ್ರೆ ಅದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಣ್ಣೂರು ಗ್ರಾಮದ ಜಿ ಸಿ ಮಂಜಪ್ಪ. ಡೊಳ್ಳೆಂದರೇ ಇವರು, ಇವರೆಂದರೇ ಡೊಳ್ಳು ಎನ್ನುವಷ್ಟು ಹೊಂದಿಕೊಂಡು, ಅದರಲ್ಲೇ ಪಳಗಿ, ತನ್ನ ಕಲಾ ಸಿರಿವಂತಿಕೆಯನ್ನು ಮೆರೆದ ಮೇರು ಕಲಾವಿದ ಜಿ ಸಿ ಮಂಜಪ್ಪ.

ಡೊಳ್ಳು ಕಲಾವಿದ

ಸಾಗರ ತಾಲೂಕಿನ ಕಣ್ಣೂರು ಗ್ರಾಮದಲ್ಲಿ 1957ರ ಜೂನ್‌ 04ರಲ್ಲಿ ಜಿ ಸಿ ಮಂಜಪ್ಪ ಜನನ. ತಂದೆ ಘಟ್ಟದ ಚನ್ನಪ್ಪ, ತಾಯಿ ಸೀತಮ್ಮರ ಪುತ್ರರಾಗಿ ಜನಿಸಿದಂತ ಇವರು, ದ್ವಿತೀಯ ಪಿಯುಸಿ ಮುಗಿಸಿ, ತಮ್ಮ ತಂದೆಯ ಜೊತೆಗೂಡಿ ವ್ಯವಸಾಯವನ್ನು ಮೈಗೂಡಿಸಿಕೊಂಡವರು. ಇವರು, ಮೂಲತಃ ದಕ್ಷಿಣ ಕನ್ನಡದವರು. ಚಿಕ್ಕಂದಿನಿಂದಲೂ ಡೊಳ್ಳು ಕುಣಿತ ಕಲೆಯ ಬಗ್ಗೆ ಎಲ್ಲಿಲ್ಲದ ಆಸಕ್ತಿ ಹೊಂದಿದ್ದಂತಹ ಇವರು, ಈ ಕಲೆಗೆ ಆಕರ್ಷಿತನಾಗಿ 1971ರಲ್ಲಿ ಗುರುಗಳಾದ ವಡ್ಡರ ರಂಗಪ್ಪ ಇವರಲ್ಲಿ ತರಬೇತಿ ಪಡೆಯುತ್ತಾರೆ. ಆ ಬಳಿಕ 1974 ರಲ್ಲಿ ತಮ್ಮೂರಿನ 15 ಜನ ಯುವಕರನ್ನು ಕಟ್ಟಿ, ತಾವೇ ಸ್ವತಃ ಡೊಳ್ಳನ್ನು ತಯಾರಿಸಿ ಕೊಟ್ಟು ಹಾಗೂ ಅವರಿಗೆ ತರಬೇತಿ ನೀಡಿ, ಆ ಕಲಾ ತಂಡದ ಮೂಲಕ, ಕಲಾ ಸೇವೆಗೈದ ಕಲಾಸ್ನೇಹ ಜೀವಿ.

1982, 1986 ಮತ್ತು 1996ರಲ್ಲಿ ರಾಜ್ಯಮಟ್ಟದ ಯುವಜನಮೇಳದ ಡೊಳ್ಳಿನ ಸ್ಪರ್ಧೆಯಲ್ಲಿ ಭಾಗಿಯಾದಂತಹ ಈ ತಂಡಕ್ಕೆ 3 ಬಾರಿ ಪ್ರಥಮ ಸ್ಥಾನ ಸಂದಿದೆ. 1986ರಿಂದ ಆಕಾಶವಾಣಿ ಭದ್ರಾವತಿ ಕೇಂದ್ರದಲ್ಲಿ ಡೊಳ್ಳಿನ ಪದದ ಮುಖ್ಯ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ.

ಡೊಳ್ಳು ಕಲಾವಿದ ಜೆ ಸಿ ಮಂಜಪ್ಪ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “300ಕ್ಕೂ ಹೆಚ್ಚಿನ ಯುವಕರಿಗೆ ಉಚಿತ ಡೊಳ್ಳಿನ ತರಬೇತಿ ನೀಡಿದ್ದು, 1998ರಿಂದ ಜಿಲ್ಲಾ ಯುವಜನ ಮೇಳ ಹಾಗೂ ತಾಲೂಕು ಯುವಜನ ಮೇಳದಲ್ಲಿ ಡೊಳ್ಳಿನ ಸ್ಪರ್ಧೆಗೆ ತೀರ್ಪುಗಾರನಾಗಿ ಕಾರ್ಯನಿರ್ವಹಿಸಿದ್ದೇನೆ. ಮೂರು ಬಾರಿ ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಮಟ್ಟದ ಜನಪದ ಸಮ್ಮೇಳನದಲ್ಲಿ ಹಾಗೂ ಒಂದು ಬಾರಿ ತಾಲೂಕು ಮಟ್ಟದ ಜನಪದ ಸಮ್ಮೇಳನದಲ್ಲಿ ಕಲಾ ಸೇವೆಗೆ ಸನ್ಮಾನ ಹಾಗೂ ಪ್ರಶಸ್ತಿಗೆ ಭಾಜನನಾಗಿದ್ದೆ” ಎಂದರು ಹೇಳಿದರು.

“ಶಿವಮೊಗ್ಗ ಜಿಲ್ಲೆಯ 6 ತಾಲೂಕಿನ ಸಂಬಂಧಪಟ್ಟ ಇಲಾಖೆಯವರು ಹಾಗೂ 40ಕ್ಕೂ ಹೆಚ್ಚಿನ ಸಂಘ ಸಂಸ್ಥೆಗಳು ಸನ್ಮಾನ ಮಾಡಿ ಕಲಾರತ್ನ ಎಂಬ ಬಿರುದು ಹಾಗೂ ಜನಪದ ಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಿ ಪ್ರೋತ್ಸಾಹಿಸಿದ್ದಾರೆ. 2021ರ ಮಾರ್ಚ್‌ 20ರಂದು ಆನಂದಪುರದಲ್ಲಿ ನಡೆದ ಸಾಗರ ತಾಲೂಕು ಮಟ್ಟದ 2ನೇ ಜಾನಪದ ಸಮ್ಮೇಳನದ ಅಧ್ಯಕ್ಷನಾಗಿದ್ದೆ. 2022ರ ಮೇ 8ರಂದು ನಡೆದ ಭದ್ರಾವತಿ ತಾಲೂಕು ಗೋಣಿಬೀಡುವಿನಲ್ಲಿ ನಡೆದಂತಹ ಜಿಲ್ಲಾ ಮಟ್ಟದ ಸಮ್ಮೇಳನದ ಅಧ್ಯಕ್ಷನಾಗಿಯೂ ಕಾರ್ಯನಿರ್ವಹಿಸಿದ್ದೇನೆ. 2019ನೇ ಸಾಲಿನ ವಾರ್ಷಿಕ ಜಾನಪದ ಅಕಾಡೆಮಿ ಪ್ರಶಸ್ತಿಯನ್ನು ಬೆಂಗಳೂರು ಜಾನಪದ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡಲಾಗಿದೆ” ಎಂದರು.

ಡೊಳ್ಳು ಕುಣಿತದ ಪ್ರದರ್ಶನ ಕಂಡು ಬೆರಗಾದ ದೇಶ, ವಿದೇಶಿಗರು

“1987ರಲ್ಲಿ ರಷ್ಯಾದಲ್ಲಿ ನಡೆದ ಭಾರತೋತ್ಸವ ಕಾರ್ಯಕ್ರಮದಲ್ಲಿ 3 ತಿಂಗಳುಗಳ ಕಾಲ 250ಕ್ಕೂ ಹೆಚ್ಚು ಕಾರ್ಯಕ್ರಮ ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಪ್ರಥಮ ವಿಶ್ವಕನ್ನಡ ಸಮ್ಮೇಳನ, ಕರ್ನಾಟಕೋತ್ಸವ ದೆಹಲಿ ಹಾಗೂ ಭುವನೇಶ್ವರದಲ್ಲಿ 1988ರಲ್ಲಿ ಕಾರ್ಯಕ್ರಮ ನೀಡಿದ್ದು, ಐದು ಬಾರಿ ಅಖಿಲ ಭಾರತ ಜನಪದ ಸಮ್ಮೇಳನ, 2 ಬಾರಿ ರಾಜ್ಯ ಮಟ್ಟದ ಜಾನಪದ ಕಲಾಮೇಳದಲ್ಲಿ ಕಾರ್ಯಕ್ರಮ ನೀಡಿದ್ದೇನೆ” ಎಂದರು.

ಹೊರ ರಾಜ್ಯದಲ್ಲಿ ಡೊಳ್ಳು ಕಟ್ಟಿ ಕುಣಿದ ಕಲಾಜೀವಿ ಜಿ ಸಿ ಮಂಜಪ್ಪ

ದೆಹಲಿಯಲ್ಲಿ 6 ಬಾರಿ, ನಾಗಪುರದಲ್ಲಿ 2 ಬಾರಿ, ಮಧ್ಯಪ್ರದೇಶದಲ್ಲಿ 7 ಬಾರಿ, ಗುಜರಾತಿನಲ್ಲಿ 2 ಬಾರಿ, ಒರಿಸ್ಸಾದಲ್ಲಿ 1 ಬಾರಿ, ಕಲ್ಕತ್ತಾದಲ್ಲಿ 2 ಬಾರಿ, ಉದಯಪುರದಲ್ಲಿ 2 ಬಾರಿ, ಮುಂಬೈನಲ್ಲಿ 1 ಬಾರಿ, ಮದ್ರಾಸ್‌ನಲ್ಲಿ 1 ಬಾರಿ, ಮೈಸೂರು ದಸರಾ ಮೆರವಣಿಗೆಯಲ್ಲಿ 5 ಬಾರಿ, ಹಂಪಿ ಉತ್ಸವದಲ್ಲಿ 3 ಬಾರಿ ಡೊಳ್ಳು ಕುಣಿತದ ಕಾರ್ಯಕ್ರಮ ನೀಡಿದ್ದಾರೆ. 1997ರ ದಸರಾ ಮೆರವಣಿಗೆಯಲ್ಲಿ ಇವರ ಡೊಳ್ಳಿನ ತಂಡಕ್ಕೆ ಪ್ರಥಮ ಸ್ಥಾನ ಬಂದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗದ ಜತೆಗೆ ಕೈಜೋಡಿಸಿಯೂ ತಮ್ಮ ಡೊಳ್ಳು ಪ್ರದರ್ಶನ ನೀಡಿದ್ದಾರೆ.

ಸಿಎಂ ಸಿದ್ಧರಾಮಯ್ಯ, ಸಚಿವ ಶಿವರಾಜ ತಂಗಡಗಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರು, ಸದಸ್ಯರು ಈ ಎಲೆ ಮರೆ ಕಾಯಿಯಂತಿರುವ ಪ್ರತಿಭೆಯನ್ನು ಗುರುತಿಸಲಿ. 2024ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಖ್ಯಾತ ಡೊಳ್ಳು ಕಲಾವಿದ ಜಿ ಸಿ ಮಂಜಪ್ಪ ಅವರಿಗೆ ಸರ್ಕಾರ ನೀಡಲಿ ಎಂಬುದು ಅಭಿಮಾನಿಗಳ ಆಶಯ.

WhatsApp Image 2025 11 17 at 5.17.05 PM
ರಾಘವೇಂದ್ರ, ಶಿವಮೊಗ್ಗ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಾರ್ಮಿಕರು ಹಕ್ಕು ಮತ್ತು ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ. ಶಾಹಿದ್ ತೆಕ್ಕಿಲ್

ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವುದರೊಂದಿಗೆ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ...

ಬಾಗೇಪಲ್ಲಿಯಲ್ಲಿ ರಸ್ತೆ ಅಪಘಾತ:ರೈತ ನಂಜಪ್ಪ ಸಾವು

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿ ಹೊಲಕ್ಕೆ ತೆರಳುತ್ತಿದ್ದ ನಡಂಪಲ್ಲಿ...

ಮಂಗಳೂರು | ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣ: ಆರೋಪಿಗಳ ಜಾಮೀನು ರದ್ದುಪಡಿಸಿದ ಸುಪ್ರೀಂ ಕೋರ್ಟ್

ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಇತ್ತೀಚೆಗೆ ನ್ಯಾಯಾಲಯ ಜಾಮೀನು ನೀಡಿತ್ತು....

ಕೋಲಾರ | ಚೈನಾ ಶಾಂಘೈನಲ್ಲಿ ಕನ್ನಡದ ಮೊದಲ ಜಾನಪದ ಕಾರ್ಯಕ್ರಮ: ಗೋ.ನಾ. ಸ್ವಾಮಿ ಭಾಗಿ

ಚೈನಾ ದೇಶದ ಶಾಂಘೈನಲ್ಲಿ ಕನ್ನಡಿಗರ ಸಂಘದ ವತಿಯಿಂದ ಆಯೋಜಿಸಿದ್ದ ಕನ್ನಡದ ಮೊದಲ...