ಹನಿಟ್ರ್ಯಾಪ್ ಎಂದು ಕರೆದುಕೊಂಡ ಪ್ರಕರಣದ ಬೆನ್ನಲ್ಲೇ ಮತ್ತೊಂದು ಪ್ರಕರಣವೊಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಹದಿಹರೆಯದವರಿಬ್ಬರ ನಡುವೆ ಬೆಳೆದ ಪ್ರೀತಿ ಸಧ್ಯಕ್ಕೆ ಠಾಣೆ ಮೆಟ್ಟಿಲೇರಿದೆ.
ರಾಮನಗರದ ಯುವಕನೊಂದಿಗೆ ತೀರ್ಥಹಳ್ಳಿಯ ಯುವತಿಗೆ ಮೂರುವರ್ಷದ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಶುರುವಾದ ಪರಿಚಯ ಪ್ರೀತಿಯಾಗಿ ಪರಿವರ್ತನೆಗೊಂಡಿತ್ತು. ಯಾವಾಗ ಅವರಿಬ್ಬರ ಪ್ರೀತಿ ಬಗ್ಗೆ ಮನೆಯವರಿಗೆ ಗೊತ್ತಾಗುತ್ತದೆಯೋ ಆಗ ಯುವತಿಯ ಮನೆಯವರು ಅಕ್ಷೇಪಿಸಿದ್ದಾರೆ.
ಮನೆಯವರ ಅಕ್ಷೆಪಣೆಯಿಂದ ಹಿಂದೆ ಸರಿದ ಯುವತಿಯನ್ನು ಸಂಪರ್ಕಿಸಲು ಯುವಕ ಅನೇಕ ಬಾರಿ ಯತ್ನಿಸಿದ್ದಾನೆ. ಯುವತಿ ಹಿಂದೆ ಸರಿದ ಪರಿಣಾಮ ಯುವಕ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾನೆ. ಯುವತಿ ಸಲುಗೆಯಿಂದ ಇದ್ದಾಗ ತೆಗೆದ ಫೊಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾನೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಾಲುವೆಗೆ ಬಿದ್ದ ಗೂಡ್ಸ್ ಆಟೋ: ಮಹಿಳಾ ಕೂಲಿಕಾರರನ್ನು ನಡು ನೀರಲ್ಲಿ ಬಿಟ್ಟು ಚಾಲಕ ಪರಾರಿ!
ಅಷ್ಟಕ್ಕೂ ನಿಲ್ಲದ ಆತನ ಆಕ್ರೋಶ, ಆಕೆಯ ಬೆತ್ತಲೆ ಫೋಟೊಗಳನ್ನೂ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ ಒಡ್ಡಿದ್ದಾನೆ. ಯುವಕನಿಗೆ ಬುದ್ದಿವಾದ ಹೇಳಲು ಬಂದ ಯುವತಿಯ ಕುಟುಂಬಸ್ಥರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಬಳಿಕ ಕೊಲೆ ಬೆದರಿಕೆ ಹಾಕಿರುವುದಾಗಿ ಯುವತಿ ಆತನ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.