ಶಿವಮೊಗ್ಗ | ಮಹಿಳೆಯರು, ದುರ್ಬಲರನ್ನು ಯುಜಿಸಿ ಶಿಕ್ಷಣದಿಂದ ವಂಚಿಸುತ್ತಿದೆ: ಪ್ರೊ. ಎಚ್ ರಾಜಾಸಾಬ್

Date:

Advertisements

ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ವು ದುರ್ಬಲರು, ಹಿಂದುಳಿದವರು, ಮಹಿಳೆಯರು ಹಾಗೂ ಗ್ರಾಮೀಣ ಪ್ರದೇಶದವರನ್ನು ಶಿಕ್ಷಣದಿಂದ ವಂಚಿಸುತ್ತಿದೆ ಎಂದು ಪ್ರೊ. ಎ ಎಚ್ ರಾಜಾಸಾಬ್ ಅಭಿಪ್ರಾಯಪಟ್ಟರು.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ನೇತೃತ್ವದಲ್ಲಿ ಶಿವಮೊಗ್ಗದ ಮಾಜಿ ಉಪಕುಲಪತಿಗಳ ಸಭಾಂಗಣದಲ್ಲಿ ಆಯೋಜಿಸಿದ್ದ ಶಿಕ್ಷಣ ತಜ್ಞರ ಸಭೆಯಲ್ಲಿ ಮಾತನಾಡಿದ ಅವರು, “ಉದ್ದೇಶಿತ ಯುಜಿಸಿಯ ನಿಯಮಗಳು ದುರ್ಬಲವರ್ಗದವರನ್ನು ಶಿಕ್ಷಣದಿಂದ ವಂಚಿತರನ್ನಾಗಿಸುತ್ತದೆ. ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ತನ್ನ ಕಪಿಮುಷ್ಟಿಗೆ ತಗೆದುಕೊಳ್ಳುವ ಹುನ್ನಾರವನ್ನು ಕೇಂದ್ರ ಸರ್ಕಾರ ಪ್ರಸಕ್ತ ಯುಜಿಸಿಯ ನಿಯಮಾವಳಿಗಳ ಮೂಲಕ ಮಾಡುತ್ತಿದೆ” ಎಂದರು.

“ವಿವಿಗಳ ಕುಲಪತಿಯ ನೇಮಕದಲ್ಲಿ ಪ್ರಭಾವಿ ಕುಟುಂಬಗಳೆ ಒಂದೊಂದು ವಿವಿಯ ಆಡಳಿತ ಮಂಡಳಿಯಾಗುವ ಸಾಧ್ಯತೆ ಇರುತ್ತದೆ. ಶಿಕ್ಷಣ ಕ್ಷೇತ್ರದ ಗಂಧಗಾಳಿ ಗೊತ್ತಿರದ ಕೈಗಾರಿಕೋದ್ಯಮಿಗಳ ಕೈಗೆ ಶಿಕ್ಷಣ ಸೇರುತ್ತದೆ. ಯುಜಿಸಿ ನಿಯಮಾವಳಿಯಲ್ಲಿ ಸಾಮಾಜಿಕ ನ್ಯಾಯ ಮತ್ತು ಸಂವಿಧಾನಿಕ ಮೌಲ್ಯಗಳು ಇಲ್ಲ. ಎನ್‌ಇಪಿ ಒಪ್ಪದ ಕರ್ನಾಟಕ, ಪ.ಬಂಗಾಲ, ತಮಿಳು ನಾಡುಗಳಂಥ ರಾಜ್ಯಗಳ ಮೇಲೆ ಒತ್ತಡ ಹೇರುವ ಹುನ್ನಾರವೂ ಆಗಿದೆ. ಹೊಸ ನೀತಿಗಳಿಂದಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗ ಎರಡೂ ಲಭ್ಯವಾಗುವುದಿಲ್ಲ. ವಿದ್ಯಾರ್ಥಿಗಳು, ಉಪನ್ಯಾಸಕರು, ಮತ್ತಿತರ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದವರ ಅಭಿಪ್ರಾಯ ಪಡೆದು ಹೊಸ ನೀತಿ ನಿಯಮಗಳನ್ನು ರೂಪಿಸಬೇಕು. ಆದರೆ ಈ ಯಾವ ಪ್ರಜಾತಾಂತ್ರಿಕ ಪ್ರಕ್ರಿಯೆಯನ್ನೂ ಪಾಲಿಸದೆ, ಯುಜಿಸಿ ಕರಡು ರೂಪಿಸಿದೆ” ಎಂದು ಆರೋಪಿಸಿದರು.

Advertisements

ಕರ್ನಾಟಕ ಮಾಜಿ ಉಪಕುಲಪತಿಗಳ ವೇದಿಕೆಯ ಅಧ್ಯಕ್ಷರಾದ ಡಾ. ಎಸ್ ಚಂದ್ರಶೇಖರ ಶೆಟ್ಟಿ ಮಾತನಾಡಿ, “ಇಂತಹ ಸಭೆಗಳಲ್ಲಿ ಅಭಿವ್ಯಕ್ತವಾಗುವ ಶಿಕ್ಷಣ ಕ್ಷೇತ್ರದ ಅಭ್ಯುದಯಕ್ಕೆ ಕಾರಣವಾಗುವ ಅಂಶಗಳನ್ನು ಸರ್ಕಾರದ ಗಮನಕ್ಕೆ ತರಬೇಕು. ಪ್ರತಿ ವಿಶ್ವ ವಿದ್ಯಾಲಯಗಳಲ್ಲಿ ಆಯಾ ರಾಜ್ಯಗಳ ಪ್ರತಿನಿಧಿಗಳಿರಬೇಕು” ಎಂದರು.

ಎಐಎಸ್‌ಇಸಿಯ ರಾಜ್ಯಾಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, “ಯುಜಿಸಿಯು ಉಪನ್ಯಾಸಕರ ನೇಮಕಾತಿಯ ಬಗ್ಗೆ ಮಾತನಾಡುತ್ತಿಲ್ಲ. ಆರ್ಥಿಕ ಧನ ಸಹಾಯದ ಕೊರತೆಯಿಂದ ಅತಿಥಿ ಉಪನ್ಯಾಸಕರು ಸಂಬಳ ಪಡೆಯಲಾಗುತ್ತಿಲ್ಲ. ಇದರ ಬಗ್ಗೆಯೂ ಮಾತನಾಡುತ್ತಿಲ್ಲ. ಬದಲಾಗಿ ರಾಜ್ಯಗಳ ಮೇಲೆ ತನ್ನ ಅಭಿಪ್ರಾಯವನ್ನು ಒತ್ತಾಯಪೂರ್ವಕವಾಗಿ ಹೇರಲು ಪ್ರಯತ್ನಿಸುತ್ತಿದೆ” ಎಂದರು.

ಎಐಎಸ್‌ಇಸಿಯಯ ರಾಜ್ಯ ಉಪಾಧ್ಯಕ್ಷ ವಿ ಎನ್ ರಾಜಶೇಖರ ಮಾತನಾಡುತ್ತಾ, “ಯುಜಿಸಿಯ ಕರಡು ನಿಯಮಾವಳಿಗಳು ವಿಶ್ವ ವಿದ್ಯಾಲಯಗಳನ್ನು ಸ್ಥಾಪಿಸುವ ಮೂಲ ಕಲ್ಪನೆ ಮತ್ತು ಉದ್ದೇಶಗಳಿಗೆ ವಿರುದ್ಧವಾಗಿದೆ. ಇದರಿಂದಾಗಿ ವಿಶ್ವ ವಿದ್ಯಾನಿಲಯಗಳ ಸ್ವಾಯತ್ತತೆ ಸಂಪೂರ್ಣ ನಾಶವಾಗುತ್ತದೆ. ಇದು ಶೈಕ್ಷಣಿಕ ಮತ್ತು ಆಡಳಿತದ ಅಧಿಕಾರ ಶಾಹಿ ಕೇಂದ್ರೀಕರಣಕ್ಕೆ ಎಡೆ ಮಾಡಿಕೊಡುತ್ತದೆ. ಇದು ನಮ್ಮ ದೇಶದಲ್ಲಿನ ಜ್ಞಾನದ ಮತ್ತು ಮುಕ್ತ ಚಿಂತನೆಯ ವಿಕಸನಕ್ಕೆ ಅಡ್ಡಿಯುಂಟುಮಾಡುತ್ತದೆ. ಜೊತೆಗೆ ಸಂಶೋಧನೆ ಮತ್ತು ಅಭಿವೃದ್ಧಿಯನ್ನೂ ಕುಂಠಿತಗೊಳಿಸುತ್ತದೆ ಎಂದರು. ಶೈಕ್ಷಣಿಕ ನೀತಿಗಳನ್ನು ಶಿಕ್ಷಣ ತಜ್ಞರು ರೂಪಿಸಬೇಕೇ ಹೊರತು ಸರ್ಕಾರಗಳಲ್ಲ. ಉಪಕುಲಪತಿಗಳ ನೇಮಕಾತಿಯಲ್ಲೂ ವಿವಿ ಮತ್ತು ಸರ್ಕಾರ ಒಮ್ಮತದಲ್ಲಿ ಆಯ್ಕೆ ಮಾಡಬೇಕು” ಎಂದು ತಿಳಿಸಿದರು.

ಲೇಖಕಿ ಹಾಗೂ ಪ್ರಾಧ್ಯಾಪಕಿ ಡಾ. ಎಮ್ ಎಸ್ ಆಶಾದೇವಿಯವರು ಮಾತನಾಡಿ, “ಯುಜಿಸಿಯ ಕರಡು ಉನ್ನತ ಶಿಕ್ಷಣದ ಶವಪೆಟ್ಟಿಗೆಗೆ ಹೊಡೆಯುವ ಕೊನೆಯ ಮೊಳೆಯಂತೆ ಭಾಸವಾಗುತ್ತಿದೆ. ಈ ಪ್ರಸ್ತಾವನೆಗಳಲ್ಲಿ ಕನ್ನಡದಂತಹ ಭಾಷೆಗಳ ಏಳ್ಗೆಯ ಬಗ್ಗೆ ಸ್ಪಷ್ಟತೆ ಇಲ್ಲ. ಪ್ರಾಂತೀಯ ಭಾಷೆಗಳಿಗೆ ಪ್ರಾಧಾನ್ಯತೆ ನೀಡುವುದಿಲ್ಲ. ಈ ರೀತಿಯ ಕರಡು ಸಿದ್ಧಪಡಿಸಿ ಹಲವು ವರ್ಗಗಳನ್ನು ಶಿಕ್ಷಣದಿಂದ ದೂರವಿಡಲು ಹುನ್ನಾರ ರೂಪಿಸಲಾಗುತ್ತಿದೆ” ಎಂದರು.

ಸೇಂಟ್ ಜೋಸೆಫ್ ವಿವಿಯ ಉಪಕುಲಪತಿ ಡಾ. ವಿಕ್ಟರ್ ಲೋಬೋ ಮಾತನಾಡಿ, “ಯುಜಿಸಿಯು ಸಂವಿಧಾನಕ್ಕಿಂತಲೂ, ಶಾಸನ ಸಭೆಗಳಿಗಿಂತಲೂ ತಾನೇ ಮೇಲು ಎಂದು ಭಾವಿಸದಂತಿದೆ. ಇದು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ. ಸಮವರ್ತಿ ಪಟ್ಟಿಯಲ್ಲಿ ಬರುವ ಶಿಕ್ಷಣವನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರ ಕಿತ್ತುಕೊಳ್ಳುತ್ತಿದೆ. ಯುಜಿಸಿಯ ಎಷ್ಟೋ ನಿಯಮಗಳು ಸಂವಿಧಾನ ಬಾಹಿರವಾದವುಗಳಾಗಿವೆ. ಅಲ್ಲದೆ ಜನತೆಯಿಂದ ಆಯ್ಕೆಯಾದ ರಾಜ್ಯ ಸರಕಾರಗಳ ಪಾತ್ರ ಗೌಣಗೊಳಿಸುವ ಮೂಲಕ ರಾಜ್ಯದ ಜನತೆಯ ಅಭಿಪ್ರಾಯವನ್ನೆ ಅಲ್ಲಗಳೆಯುತ್ತಿವೆ” ಎಂದು ಕಳವಳ ವ್ಯಕ್ತಪಡಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಪ್ರೊ. ಎ ಮುರಿಗೆಪ್ಪಾ ಮಾತನಾಡಿ, “ಈ ಯುಜಿಸಿಯ ಕರಡು ಪೂರ್ವಾನ್ವಯವಾಗುತ್ತಿದ್ದು, ಇದು ಶಿಕ್ಷಣ ಕ್ಷೇತ್ರಕ್ಕೆ ತುಂಬಾ ಅಪಾಯಕಾರಿಯಾಗಿದೆ. ನಮ್ಮ ಸಮಾಜ ಜಾಗೃತವಾಗಿ ಇಂಥ ನೀತಿಗಳ ಬಗ್ಗೆ ಚರ್ಚಿಸಿ ಕಾರ್ಯಪ್ರವೃತ್ತರಾಗಬೇಕು” ಎಂದರು. ಬಳಿಕ ಸಭೆಯ ಎಲ್ಲಾ ತೀರ್ಮಾನಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು ಎಂಬ ಗೊತ್ತುವಳಿ ಮಂಡಿಸಲಾಯಿತು.

ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ಆಟೋ ಮೀಟರ್ ದರ ಪಟ್ಟಿ ಬಿಡುಗಡೆ

ಸಭೆಯಲ್ಲಿ ರಾಜೇಶ್ ಭಟ್, ಗೋಪಾಲ ಕೃಷ್ಣನ್, ನಿವೃತ್ತ ಶಿಕ್ಷಕ ಕೆ ವಿ ಭಟ್, ಪ್ರೊ. ನಾಗರಾಜರೆಡ್ಡಿ, ಸುನಿತಾ ಎಸ್, ಸೋಮಶೇಖರ ಗೌಡ, ನಾಗರತ್ನ, ತಿಪ್ಪೆಸ್ವಾಮಿ, ಐಶ್ವರ್ಯ ಸಿ ಎಮ್ ಸೇರಿದಂತೆ ಮುಂತಾದವರು ಇದ್ದರು.

raghavendra 1
+ posts

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ರಾಘವೇಂದ್ರ
ರಾಘವೇಂದ್ರ
ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X