ಶಿವಮೊಗ್ಗ, CEIR ಪೋರ್ಟಲ್ ಬಳಸಿ ಕಳೆದು ಹೋದಮೊಬೈಲ್ ಫೋನ್ ಗಳನ್ನ ಪೊಲೀಸರು ಪತ್ತೆ ಮಾಡಿದ್ದಾರೆ. ಒಟ್ಟು ಪೋರ್ಟಲ್ ಗಳಲ್ಲಿ 1 ಸಾವಿರ ಮೊಬೈಲ್ ಕಳವು ಪ್ರಕರಣ ಪೋರ್ಟಲ್ ನಲ್ಲಿ ದಾಖಲಾಗಿದ್ದು ಅದರಲ್ಲಿ 110 ಮೊಬೈಲ್ ಗಳನ್ನ ಇಲಾಖೆ ಹುಡುಕಿಕೊಡುವುದರಲ್ಲಿ ಯಶಸ್ವಿಯಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದರು.

ಎಸ್ಪಿ ಮಿಥುನ್ ಕುಮಾರ್, ಅಡಿಷನಲ್ ಎಸ್ಪಿಗಳಾದ ಅನಿಲ್ ಕುಮಾರ್ ಭೂಮರೆಡ್ಡಿ, ಕಾರಿಯಪ್ಪ, ಇವರ ಮಾರ್ಗದರ್ಶನದಲ್ಲಿ CEN ಠಾಣೆಯ ಡಿವೈಎಸ್ಪಿ ಕೃಷ್ಣಮೂರ್ತಿ ನೇತೃತ್ವದಲ್ಲಿ, ಪಿಐ ಮಂಜುನಾಥ್ ಮತ್ತು ಸಿಬ್ಬಂದಿಗಳನ್ನ ಒಳಗೊಂಡ ತಂಡವನ್ನ ರಚಿಸಲಾಗಿತ್ತು.ಕಳೆದ ಮೂರು ತಿಂಗಳಲ್ಲಿ 16,35,000/- ಒಟ್ಟು 110 ಮೊಬೈಲ್ ಗಳನ್ನ ಪತ್ತೆ ಮಾಡಲಾಗಿದೆ.
ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಗಳು ಕಳೆದು ಹೋದರೆ ಠಾಣೆಗೆ ಭೇಟಿ ನೀಡದೆ ಸ್ವತಹ ತಾವೇ ಕೆಎಸ್ಪಿ ಅಪ್ಲಿಕೇಶನ್ ನ ಈ ಲಾಸ್ಟ್ ಆಪ್ ಮೂಲಕ ದೂರು ದಾಖಲಿಸಿ ಸ್ವೀಕೃತಿಯನ್ನು ಪಡೆದು https://www.ceir.gov.in ವೆಬ್ ಪೋರ್ಟಲ್ ಭೇಟಿ ನೀಡಿ block stolen/Lost Mobile ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ಫಾರಂನಲ್ಲಿ ಕಳೆದು ಹೋದ ಮೊಬೈಲ್ ಫೋನಿನ IMEI ನಂಬರ್ ಮೊಬೈಲ್ ನಂಬರ್ ಮತ್ತು ಅಗತ್ಯ ವಿವರಗಳನ್ನು ಭರ್ತಿ ಮಾಡಿ ಸಬ್ಮಿಟ್ ಮಾಡುವ ಮೂಲಕ ದೂರನ್ನು ದಾಖಲಿಸಬಹುದಾಗಿದೆ.ದೂರು ದಾಖಲಾದ 24 ಗಂಟೆಯ ಒಳಗಾಗಿ ಕಳೆದುಹೋದ ಮೊಬೈಲ್ ಫೋನ್ ಬ್ಲಾಕ್ ಆಗುತ್ತದೆ ಇದರಿಂದಾಗಿ ನಿಮ್ಮ ಮೊಬೈಲ್ ಫೋನ್ ದುರ್ಬಳಕೆಯಾಗದಂತೆ ತಡೆಯಬಹುದಾಗಿದೆ ತಮ್ಮ ಮೊಬೈಲ್ ಫೋನನ್ನು ಯಾರಾದರೂ ಬಳಕೆ ಮಾಡಲು ಪ್ರಯತ್ನಿಸಿದ್ದಲ್ಲಿ ಅವರ ವಿವರವೂ ದೊರಕುತ್ತದೆ ಇದರಿಂದ ಸುಲಭವಾಗಿ ತಮ್ಮ ಕಳೆದು ಹೋದ ಮೊಬೈಲ್ ಫೋನ್ ಗಳನ್ನು ಪತ್ತೆ ಮಾಡಲು ಸಾಧ್ಯವಾಗಿದೆ ಎಂದರು.

ಆದ್ದರಿಂದ ಎಲ್ಲಾ ಸಾರ್ವಜನಿಕರು ಪೋರ್ಟಲ್ ನ್ನು ಉಪಯೋಗವನ್ನು ಪಡೆದುಕೊಳ್ಳುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.