ಮಂಗಳೂರು | ಬೆಂಗ್ರೆ ಭಾಗಕ್ಕೆ ಬಸ್ ಸೇವೆ ಕಲ್ಪಿಸಲು CPIM ಸಮಿತಿಯಿಂದ KSRTCಗೆ ಮನವಿ

Date:

ಮಂಗಳೂರಿನ ಬೆಂಗ್ರೆ ಪ್ರದೇಶಕ್ಕೆ ಸರಕಾರಿ ಬಸ್ ಸಂಚಾರ ವ್ಯವಸ್ಥೆ ಪ್ರಾರಂಭಿಸಲು ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ CPIM ಬೆಂಗ್ರೆ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.

- Advertisement -

ದ.ಕ.ಜಿಲ್ಲೆಯ ಕಸಬಾ ಬೆಂಗ್ರೆ ಪ್ರದೇಶ ನದಿ ಮತ್ತು ಸಮುದ್ರದ ಮಧ್ಯೆ ಇರುವ ಪ್ರದೇಶವಾಗಿದ್ದು, ಇಲ್ಲಿನ ಜನರು ನಗರ ಪ್ರದೇಶಕ್ಕೆ ತಲುಪಲು ಜಾಸ್ತಿಯಾಗಿ ಫೆರಿಬೋಟ್ ಗಳನ್ನೇ ಅವಲಂಬಿಸಬೇಕಾಗುತ್ತದೆ. ಇನ್ನೊಂದು ಭಾಗದಲ್ಲಿ ರಸ್ತೆಯ ಮುಖಾಂತರ ಕುಳೂರು ಪ್ರದೇಶದವರೆಗೆ ನೇರ ರಸ್ತೆಯಿದ್ದು ಮಂಗಳೂರು ನಗರ ಪ್ರದೇಶಗಳಿಗೆ ಹಾಗೆಯೇ ರಾಷ್ಟ್ರೀಯ ಹೆದ್ದಾರಿಗೂ ತಲುಪಬಹುದಾಗಿದೆ. ಸದ್ಯಕ್ಕೆ ಬೆಂಗ್ರೆಯಿಂದ ಬಜಪೆವರೆಗೆ ಕೇವಲ ಒಂದೇ ಖಾಸಗಿ ಬಸ್, ದಿನಕ್ಕೆರಡು ಬಾರಿ ಮಾತ್ರ ಸಂಚಾರ ಮಾಡುತ್ತದೆ. ಈ ಭಾಗದಿಂದ ಕೆಲಸಕ್ಕೆ ಹೋಗುವ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಬೇರೆ ಬೇರೆ ವಲಯದ ದುಡಿಯುವ ಜನರಿಗೆ ಸಮಯಕ್ಕೆ ಸರಿಯಾದ ಸೂಕ್ತ ಬಸ್ ವ್ಯವಸ್ಥೆ ಇರುವುದಿಲ್ಲ. ಕೇವಲ ಒಂದು ಖಾಸಗಿ ಬಸ್ಸಿನ ನಿಗದಿತ ಸೇವೆ ಈ ಭಾಗಕ್ಕೆ ಸಾಕಾಗುವುದಿಲ್ಲ. ಹಾಗಾಗಿ ಸರ್ಕಾರಿ ಬಸ್‌ ವ್ಯವಸ್ಥೆ ಕಲ್ಪಿಸಬೇಕು” ಎಂದು ಸಮಿತಿ ಸದಸ್ಯರು ಮನವಿ ಮಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

“ಈ ನಿಟ್ಟಿನಲ್ಲಿ ಪ್ರಸ್ತುತ ತೋಟ ಬೆಂಗ್ರೆಯಿಂದ ಕಸಬಾ ಬೆಂಗ್ರೆ ಮಾರ್ಗವಾಗಿ ತನ್ನೀರುಬಾವಿ, ಕುಳೂರು, ಕೊಟ್ಟಾರ, ಲಾಲ್ ಭಾಗ್ ಕೊಟ್ಟಾರ, ಕಾರ್ಪೊರೇಷನ್ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ, ಮಂಗಳೂರು ರೈಲ್ವೆ ನಿಲ್ದಾಣ ಜಂಕ್ಷನ್ ವರೆಗೆ ಚಲಿಸಲು ಸರಕಾರಿ ಬಸ್ ವ್ಯವಸ್ಥೆ ಅಗತ್ಯವಿದೆ ಮತ್ತು ಈ ಭಾಗದಿಂದ ಬೇರೆ ಬೇರೆ ಪ್ರದೇಶಗಳಿಗೂ ಸಂಚರಿಸಲು ಸರಕಾರಿ ಬಸ್ ಅಗತ್ಯವಿದೆ. ವಿಶೇಷವಾಗಿ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಸರಕಾರದ ಉಚಿತ ಪ್ರಯಾಣದ ಸೌಲಭ್ಯ ದೊರೆಯಬೇಕು” ಎಂದು CPIM ಬೆಂಗ್ರೆ ನಿಯೋಗ ಆಗ್ರಹಿಸಿದೆ.

ಇದನ್ನೂ ಓದಿ: ಮಂಗಳೂರು | ಮಾದಕ ದ್ರವ್ಯ ಸೇವನೆ; ಮೂವರ ಬಂಧನ

ನಿಯೋಗದಲ್ಲಿ CPIM ಮಂಗಳೂರು ದಕ್ಷಿಣ ನಗರ ಸಮಿತಿ ಸದಸ್ಯ ತೈಯೂಬ್ ಬೆಂಗ್ರೆ, CPIM ಬೆಂಗ್ರೆ ಕಾರ್ಯದರ್ಶಿ ನಾಸಿರ್ ಬಾಸ್, ಬಿಲಾಲ್ ಬೆಂಗ್ರೆ, ಮುಖಂಡರಾದ ಹನೀಫ್ ಬೆಂಗ್ರೆ, ಮುಹಾಝ್, ರಿಝ್ವಾನ್ ಹಾಗೂ ಫಝುಲ್ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಭಾರತದಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ; ಮಾವಳ್ಳಿ ಶಂಕರ್

ಚಿಕ್ಕಮಗಳೂರಿನ ಮಹಾರಾಜ ಗ್ರ್ಯಾಂಡ್ ಹೋಟೆಲ್ ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ...

ಹಾಸನ | ಪ್ರತಿಭಟನೆ ಹತ್ತಿಕ್ಕುವ ಪ್ರಜಾಪ್ರಭುತ್ವ ವಿರೋಧಿ ಕ್ರಮ ಖಂಡಿಸಿ ಜನಪರ ಒಕ್ಕೂಟ ಪ್ರತಿಭಟನೆ 

ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಜಾಪ್ರಭುತ್ವ ವಿರೋಧಿ ಕ್ರಮವನ್ನು ಖಂಡಿಸಿ ಹಾಸನದ ಹೇಮಾವತಿ ಪ್ರತಿಮೆಯ...

ಚಿಕ್ಕಮಗಳೂರು | SIR ವಿರೋಧ: ಫಾರಂ – 7ರಲ್ಲಿ ತಪ್ಪು ಮಾಹಿತಿ ನೀಡಿ, ಮತವಂಚಿಸಲಾಗಿದೆ; ಎದ್ದೇಳು ಕರ್ನಾಟಕ 

SIR ವಿರೋಧಿಸಿ, ಚುನಾವಣಾ ಆಯುಕ್ತರಾದ ಜ್ಞಾನೇಶ್‌ಕುಮಾರ್‌ರವರನ್ನು ವಜಾಗೊಳಿಸಲು ಮತ್ತು ಫಾರಂ ನಂ.7...

ಗದಗ | ಮಾಜಿ ಗ್ರಾ. ಪಂ ಸದಸ್ಯನ ಬರ್ಬರ ಹತ್ಯೆ

ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರೊಬ್ಬರನ್ನು ಬರ್ಬರವಾಗಿ ಹತ್ಯೆ...