ಶಿವಮೊಗ್ಗ | ಶಿಕಾರಿಪುರದ ಒಂದು ಪ್ರಕರಣದಿಂದ 16 ಪ್ರಕರಣ ಬೆಳಕಿಗೆ

Date:

Advertisements

ಬೈಕ್ ಕಳುವು ಪ್ರಕರಣ ಬೇಧಿಸಲು ಹೊರಟ ಶಿಕಾರಿಪುರದ ಪೊಲೀಸರಿಗೆ ಅಧ್ಬುತ ಭೇಟೆ ಸಿಕ್ಕಿದೆ.‌ ಒಂದು ಕಳುವು ಪ್ರಕರಣದಿಂದ 16 ಪ್ರಕರಣಗಳು ಬೆಳಕಿಗೆ ಬಂದಿದೆ.

ಏ.25 ರಂದು ಶಿಕಾರಿಪುರ ಟೌನ್ ಪೊಲೀಸ್‌ ಠಾಣಾ ವ್ಯಾಪ್ತಿಯ ಸುಬೇದಾರ್ ಕೇರಿಯ ವಾಸಿ ಫೈಜಾನ್ ಭಾಷಾ 38 ವರ್ಷ ರವರ ಬಜಾಜ್ ಪಲ್ಸರ್ ಬೈಕ್ ಅನ್ನು ಕಳವು ಪ್ರಕರಣ ದಾಖಲಾಗಿತ್ತು.ಪ್ರಕರಣದಲ್ಲಿ ಕಳುವಾದ ಬೈಕ್ ಹಾಗೂ ಆರೋಪಿತರ ಪತ್ತೆಗಾಗಿ ಮಿಥುನ್ ಕುಮಾ‌ರ್ ಜಿ. ಕೆ. ಐಪಿಎಸ್ ಮಾನ್ಯ ಪೊಲೀಸ್‌ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಅನಿಲ್ ಕುಮಾ‌ರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 1, ಶಿವಮೊಗ್ಗ ಜಿಲ್ಲೆ ಮತ್ತು ಕಾರಿಯಪ್ಪ ಎ. ಜಿ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಕೇಶವ್ ಪೊಲೀಸ್‌ ಉಪಾಧೀಕ್ಷಕರು, ಶಿಕಾರಿಪುರ ಉಪ ವಿಭಾಗ ಮತ್ತು ಸಂತೋಷ್ ಪಾಟೀಲ್‌, ಪೊಲೀಸ್ ನಿರೀಕ್ಷಕರು, ಶಿಕಾರಿಪುರ ಟೌನ್ ವೃತ್ತ ರವ ಮೇಲ್ವಿಚಾರಣೆಯಲ್ಲಿ, ಶರತ್ ಪಿಎಸ್‌ಐ ಶಿಕಾರಿಪುರ ಟೌನ್ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂಧಿಗಳಾದ ಎಎಸ್‌ಐ ಮಲ್ಲೇಶಪ್ಪ, ವಿಶ್ವನಾಥ್, ಹೆಚ್ ಸಿ ರವರಾದ ಸಂದೀಪ್ ಗಂಗಾಧ‌ರ್, ಸಿಪಿಸಿ ರವರಾದ ಶಿವಾಜಿ, ಗಿರೀಶ್, ಕೊಟ್ರೇಶ್, ಕುಮಾರ್, ಗಜೇಂದ್ರ, ವಿಜಯ್, ಚೇತನ್ ನಾಗರಾಜ್ ನವೀನ್, ರಾಜ್ ಕುಮಾರ್, ಜಯಶೀಲ, ವೀರೇಶ್ ಹಾಗೂ ತಾಂತ್ರಿಕ ವಿಭಾಗದ ಹೆಚ್ ಸಿ ಇಂದ್ರೇಶ್ ಮತ್ತು ಎ ಹೆಚ್ ಸಿ ಕೃಷ್ಣಸ ರವರುಗಳನ್ನೊಳಗೊಂಡ ತನಿಖಾ ತಂಡವ ರಚಿಸಲಾಗಿರುತ್ತದೆ.

ತನಿಖಾ ತಂಡವು ಪ್ರಕರಣದ ಆರೋಪಿತರಾದ ಪ್ರತಾಪ್, 33 ವರ್ಷ, ದೊಡ್ಡಲಿಂಗೇನಹಳ್ಳಿ, ತರೀಕೆರೆ ಚಿಕ್ಕಮಗಳೂರು ಮತ್ತು ಭೋಜರಾಜ, 32 ವರ್ಷ, ಬಿಳಚೋಡ್ ಗ್ರಾಮ, ಜಗಳೂರು ದಾವಣಗೆರೆ ಇವರುಗಳನ್ನು ದಸ್ತಗಿರಿ ಮಾಡಿ ಸದರಿ ಇಬ್ಬರು ಆರೋಪಿತರಿಂದ ಈ ಕೆಳಕಂಡ ಪೊಲೀಸ್‌ ಠಾಣೆಗಳಲ್ಲಿ ವರದಿಯಾದಶಿಕಾರಿಪುರ ಟೌನ್ ಪೊಲೀಸ್ ಠಾಣೆಯ 01, ಅರಸೀಕೆರೆ ಪೊಲೀಸ್ ಠಾಣೆಯ 01, ತರೀಕೆರೆ ಪೊಲೀಸ್ ಠಾಣೆಯ 02, ಚನ್ನರಾಯ ಪಟ್ಟಣ ಪೊಲೀಸ್‌ ಠಾಣೆಯ 01, ಶಿರಾ ಪೊಲೀಸ್‌ ಠಾಣೆಯ 01, ಚಿತ್ರದುರ್ಗ ಪೊಲೀಸ್ ಠಾಣೆಯ 01, ಜಗಳೂರು ಪೊಲೀಸ್ ಠಾಣೆಯ 01, ಕೂಡ್ಲಿ ಪೊಲೀಸ್ ಠಾಣೆಯ 01, ಕೊಟ್ಟೂರು ಪೊಲೀಸ್‌ ಠಾಣೆಯ 01, ಹಗರೀ ಬೊಮ್ಮನ ಹಳ್ಳಿ ಪೊಲೀಸ್‌ ಠಾಣೆಯ 01, ಹೊಸಪೇಟೆ ಪೊಲೀಸ್‌ ಠಾಣೆಯ 01, ಬೆಂಡೆಗೇರೆ ಪೊಲೀಸ್ ಠಾಣೆಯ 01, ಮುನಿರಾಬಾದ್ ಪೊಲೀಸ್ ಠಾಣೆಯ 01, ಮುಂಡರಗಿ ಪೊಲೀಸ್ ಠಾಣೆಯ 01 ಮತ್ತು ಹೂವಿನ ಹಡಗಲಿ ಪೊಲೀಸ್ ಠಾಣೆಯ 01 ಸೇರಿ ಅಂದಾಜು ಮೌಲ್ಯ 20,50,000/- ರೂಗಳ – ಒಟ್ಟು 16 ಬೈಕ್‌ ಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ.

Advertisements

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

Download Eedina App Android / iOS

X