ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದ ಪುರಸಭಾ ವ್ಯಾಪ್ತಿಯ ಹಿರೇಶಕುನ ಗ್ರಾಮದಲ್ಲಿ ಆರಿದ್ರಾ ಮಳೆಯಲ್ಲಿ ಜರುಗುವ ಹೆಡೆಗೆ ಜಾತ್ರೆಯು ಸಡಗರ ಹಾಗೂ ಸಂಭ್ರಮದಿಂದ ನೆರವೇರಿತು.
ಗ್ರಾಮದಲ್ಲಿ ೨೩ ವರ್ಷಗಳಿಂದ ನಿಂತು ಹೋಗಿದ್ದ ಹೆಡೆಗೆ ಜಾತ್ರಾ ಸಂಪ್ರದಾಯವನ್ನು ಈ ವರ್ಷ ಗ್ರಾಮಸ್ಥರೆಲ್ಲರೂ ಬೆಳಗ್ಗೆಯಿಂದ ಸಂಜೆಯವರೆಗೂ ಗ್ರಾಮ ದೇವತೆಗಳಿಗೆ ಪೂಜೆ ಸಲ್ಲಿಸಿ ವಿವಿಧ ರೀತಿಯ ಸಾಂಪ್ರದಾಯಕ ಉಡುಗೆಗಳನ್ನು ತೊಟ್ಟು ಪೂಜೆ ಸಲ್ಲಿಸುವ ಬುಟ್ಟಿಗೆ ತೋರಣಗಳನ್ನು ಕಟ್ಟಿ ಶೃಂಗಾರ ಮಾಡಿ ದೇವತೆಗಳಿಗೆ ನೈವೇದ್ಯ ಇಟ್ಟುಕೊಂಡು ಗ್ರಾಮದ ಮಾರಿಕಾಂಬ ಹಾಗೂ ದುರ್ಗಾಂಬ ದೇವಾಲಯಗಳಲ್ಲಿ ಪೂಜಿಸಿ,
ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಿ ಗ್ರಾಮದ ಹಿರಿಯರು ಮಕ್ಕಳು ನಾರಿಯರು ಸೇರಿದಂತೆ ನೂರಾರು ಜನರು ಪಾಲ್ಗೊಂಡು ಗ್ರಾಮದ ಹೊರ ಬೀಡುವಿನಲ್ಲಿ ಪೂಜಾ ಕಂಕಾರ್ಯಗಳನ್ನ ಸಂಪನ್ನಗೊಳಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಸಮಿತಿ ಅಧ್ಯಕ್ಷ ಗುರುಮೂರ್ತಿ, ಉಮೇಶ್, ರೇವಣ್ ಕುಮಾರ್, ಹನುಮಂತಪ್ಪ, ರಾಮಪ್ಪ, ಪರಶುರಾಮ ಸಣ್ಣಬೈಲು, ಮೋಹನ್ ಸುರಭಿ, ಢಾಕಪ್ಪ, ಗೋಪಾಲ್, ಚಿನ್ನಪ್ಪ, ಲಿಂಗರಾಜ್ ಉಪಸ್ಥಿತರಿದ್ದರು.