ಶಿವಮೊಗ್ಗದಲ್ಲಿ ಬಿಸಿ ಊಟ ತಯಾರಕರ ಬೇಡಿಕೆಗಳನ್ನು ಈಡೇರಿಸಬೇಕು ಅದಕ್ಕಾಗಿ ಶಿಕ್ಷಣ ಸಚಿವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಬೇಕು ಎಂದು ಆಗ್ರಹಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಶನ್ ವತಿಯಿಂದ( ಎ ಐ ಟಿ ಯು ಸಿ) ಇಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಕಳೆದ 24 ವರ್ಷಗಳಿಂದ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಕಿರಿಯ ಕಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಧ್ಯಾಹ್ನದ ಉಪಹಾರ ಯೋಜನೆಯಲ್ಲಿ ಅಡುಗೆಯವರಾಗಿ ಕೆಲಸ ನಿರ್ವಹಿಸುತ್ತಿರುವ ಬಿಸಿಊಟ ತಯಾರಕರ ಬೇಡಿಕೆಗಳು ಇನ್ನೂ ಈಡೇರಿಲ್ಲ ತಕ್ಷಣವೇ ಸರ್ಕಾರ ಬಿಸಿಯೂಟ ತಯಾರಕರ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿದಾರರು ತಿಳಿಸಿದರು.
ಸ್ಕೀಮ್ ವರ್ಕರ್ಸ್ ಎನ್ನುವುದನ್ನು ಬದಲಾಯಿಸಿ ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ ಜಾರಿಗೊಳಿಸಬೇಕು. ನಿವೃತ್ತಿ ಬಿಸಿಊಟ ತಯಾರಿಕರಿಗೆ ಇಡೀ ಗಂಟು ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ,ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದಾಗ ಬಿಸಿ ಊಟ ತಯಾರಕರನ್ನು ಅಡಿಗೆ ಕೆಲಸದಿಂದ ಯಾವುದೇ ಕಾರಣಕ್ಕೂ ಬಿಡುಗಡೆಗೊಳಿಸಬಾರದು, ಒಂದು ಪಕ್ಷ ಬಿಡುಗಡೆಗೊಳಿಸುವುದೇ ಆದರೆ ಅವರಿಗೂ ಹಿಡಿಗಂಟು ಹಣ ಕೊಡಬೇಕು, 100 ವಿದ್ಯಾರ್ಥಿಗಳು ಇರುವ ಶಾಲೆಯಲ್ಲಿ ಎರಡು ಜನ ಅಡಿಗೆ ಅವರಿಗೆ ಕೆಲಸದ ಹೊರೆಯಾಗುತ್ತಿದ್ದು ಅದನ್ನು ಹೆಚ್ಚಿಸಬೇಕು, ಬಿಸಿಊಟ ತಯಾರಿಕರಿಗೆ ಗೌರವಧನವನ್ನು ಅವರ ಬ್ಯಾಂಕ್ ಖಾತೆಗೆ ಸರಿಯಾದ ಸಮಯದಲ್ಲಿ ಜಮಾ ಆಗುವಂತೆ ನೋಡಿಕೊಳ್ಳಬೇಕು, ಬಿಸಿಯೂಟ ತಯಾರಿಕರಿಗೆ 10 ಲಕ್ಷ ಮರಣ ಪರಿಹಾರ ಜಾರಿಗೊಳಿಸಬೇಕು, ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಬಿಸಿ ಊಟ ತಯಾರಕರ ಫೆಡರೇಷನ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ ಜಿ ಅಕ್ಕಮ್ಮ ಪದಾಧಿಕಾರಿಗಳಾದ ಉಮಾ, ಸರೋಜಮ್ಮ, ಹುಲಿಗಮ್ಮ, ಗೌರಮ್ಮ, ಶಾರದಮ್ಮ ಸೇರಿದಂತೆ ಹಲವರಿದ್ದರು.
