ಗೋಪಾಳದ ಡಿವಿಜಿ ವೃತ್ತದಲ್ಲಿರುವ ಸರ್ವೇ ನಂಬರ್ 1 ರಲ್ಲಿ ಗ್ರಾಮ ಠಾಣಾ ಜಮೀನು 38.00 ಗುಂಟೆ ಹಾಗೂ ಇದಕ್ಕೆ ಹೊಂದಿಕೊಂಡಂತೆ ಇರುವ ಸುಮಾರು 4.00 ಎಕರೆ ಸೆಟ್ಲಮೆಂಟ್ ಭೂ ಪ್ರದೇಶವನ್ನು ಕಬಳಿಸಲು ಮುಂದಾಗಿರುವ ಖಾಸಗಿ ವ್ಯಕ್ತಿಗಳ ಮೇಲೆ ಗುಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಹಾಗೂ ಸದರಿ ಭೂ ಪ್ರದೇಶವನ್ನು ಜಿಲ್ಲಾಡಳಿತವು ವಶಪಡಿಸಿಕೊಂಡು ಕುಳುವ ಸಮುದಾಯಕ್ಕೆ ಸಮುದಾಯ ಭವನ ನಿರ್ಮಾಣ ಮಾಡಲು 90 ವರ್ಷದ ಅವಧಿಗೆ ಲೀಸ್ ಬೇಸ್‌ನಲ್ಲಿ ಮಂಜೂರು ಮಾಡಿಕೊಡಬೇಕೆಂದು ಕುಳುವ ಯುವ ಸೇನೆಯು ಈ ಮೂಲಕ ತಿಳಿಸುವುದೇನೆಂದರೆ.
ಈ ಭೂ ಪ್ರದೇಶವು ಶಿವಮೊಗ್ಗ ಪ್ರಸ್ತುತ ನಗರ ಹಾಗೂ ಅಂದಿನ ಪಂಚಾಯ್ತಿ ವ್ಯಾಪ್ತಿಯಲ್ಲಿದ್ದ ಒಟ್ಟು ಸುಮಾರು ಒಟ್ಟು ಐದು ಎಕರೆ ಗ್ರಾಮ ಠಾಣಾ ಜಮೀನು ಸೆಟ್ಲಮೆಂಟ್ ಪ್ರದೇಶವು ಇದೀಗ ಪೋರ್ಜರಿ ದಾಖಲೆ ಹಾಗೂ ಸುದ್ದಿ ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಲಯಕ್ಕೆ ವಂಚಿಸಿ ಭೂ ಕಬಳಿಕೆ ಮಾಡಿಕೊಂಡಿದ್ದು ಎಂದು ಆರೋಪಿಸಿದೆ.

ಸದರಿ ಅಧಿಕಾರದ ದುರುಪಯೋಗಕ್ಕೆ ತುತ್ತಾಗಿರುವ ಇಂತಹ ಮೀಸಲು ಭೂ ಪ್ರದೇಶಗಳು, ಅಕ್ರಮ ಖಾತೆಗಳಿಗೆ, ಭೂ ಸರ್ವೇ ಸ್ಟೆಪ್ ಗಳಿಗೆ ಒಳಗಾಗುತ್ತಿರುವುದು ಅಲ್ಲದೆ ಡಿ ನೋಟಿಫಿಕೇಶನ್ ಎನ್ನುವ ಜ್ವಲಂತ ಪಿಡುಗುಗಳಿಗೆ ಕಾರಣವಾಗುತ್ತಿರುವ ಗ್ರಾಮ ಲೆಕ್ಕಿಗ, ರಜಸ್ಟ ನೀರೀಕ್ಷಕ, ಸರ್ವೇ ಅಧಿಕಾರಿಗಳನ್ನು ಈ ಕೂಡಲೇ ಅಮಾನತ್ತಿನಲ್ಲಿಟ್ಟು ಮೀಸಲು ಭೂ ಪ್ರದೇಶದಲ್ಲಿ ಅಕ್ರಮವಾಗಿ ಒಳ ಪ್ರವೇಶಿಸಿರುವವರ ಮೇಲೆ ಅಗತ್ಯ ಗುಂಡಾ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲು ಜಿಲ್ಲಾಡಳಿತ ಮುಂದಾಗಬೇಕಿದೆ ಎಂದು ಕುಳುವ ಯುವ ಸೇನೆ ಈ ಮೂಲಕ ಆಗ್ರಹಿಸುತ್ತದೆ ಎಂದು ತಿಳಿಸಿದರು.

ಒಂದು ವೇಳೆ ಜಿಲ್ಲಾಡಳಿತ ವಿಶಂಭನೀತಿ ಅನುಸುರಿಸಿದರೆ ಹೋರಾಟವು ತೀವ್ರಗೊಳಿಸಲು ಕುಳುವ ಯುವ ಸೇನೆ ಮುಂದಾಗುತ್ತದೆ. ಈಗಾಗಲೇ ಕ್ರಮ ಕೈಗೊಳ್ಳಿ ಎಂದು ಶಿವಮೊಗ್ಗ ತಹಶಿಲ್ದಾರ್, ಜಿಲ್ಲಾಡಳಿತಕ್ಕೆ, ಜಿಲ್ಲಾ ಪಂಚಾಯ್ತಿಗೆ ಮುಖ್ಯಮಂತ್ರಿಗಳಿಗೆ, ಕಂದಾಯ ಸಚಿವರಿಗೆ, ಮನವಿ ನೀಡಲಾಗಿದ್ದರು ಇಂದಿಗೂ ಯಾವುದೇ ಪ್ರಕ್ರಿಯೆಗಳು ಮುಂದುವರೆಸಿರುವುದು ನ್ಯಾಯಯುತವಲ್ಲವಾಗಿದೆ ಎಂದು ಆರೋಪಿಸಿದ್ದಾರೆ.
ಹೀಗಾಗಿ ಸಾವಿರಾರು ಕುಟುಂಬಗಳು ಇಲ್ಲಿಯೇ ಮೂರು ತಲೆಮಾರುಗಳಿಂದ ವಾಸವಾಗಿರುವ ಕೊರಮ ಸಮುದಾಯಕ್ಕೆ ಈ ಭೂ ಪ್ರದೇಶವನ್ನು ಲೀಸ್ ಬೇಸ್‌ನಲ್ಲಿ ಮಂಜೂರಾತಿ ಮಾಡಿ ಕೊಡಬೇಕೆಂದು ನಿಮ್ಮಗಳಿಗೆ ಈ ಪ್ರತಿಭಟನೆಯ ಮೂಲಕ ಮತ್ತೊಮ್ಮೆ ಮನವಿ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.
ನೀವು ಭೂ ಕಬಳಿಕೆದಾರರ ಮೇಲೆ ಕ್ರಮ ಜರುಗಿಸಿ ಭೂ ಪ್ರದೇಶವನ್ನು ವಶಪಡಿಸಿಕೊಂಡು ಕುಳುವ ಯುವ ಸಮುದಾಯದ ಬೇಡಿಕೆಯನ್ನು ಈಡೇರಿಸಬೇಕೆಂದು ಸಾಂವಿಧಾನಿಕವಾಗಿ ಈ ಮನವಿಯನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಲೋಕೇಶ್ ಫೈಲ್ವಾನ್, ಪ್ರಫುಲ್ಲ ಚಂದ್ರ ಮತ್ತಿತರರು ಉಪಸ್ಥಿತರಿದ್ದರು.