ಶಿವಮೊಗ್ಗ ಲಾಂಗನ್ನು ಸಾರ್ವಜನಿಕರಿಗೆ ಭಯಭೀತಿಗೊಳಿಸುವ ರೀತಿಯಲ್ಲಿ ಝಳಪಿಳಿಸುವ ದೃಶ್ಯವನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಯುವಕನ ವಿರುದ್ಧ FIR ದಾಖಲಾಗಿದೆ.
ಟಿಪ್ಪು ನಗರದ ಹೈದರ್ ಎಂಬ ಯುವಕನು ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಸಾರ್ವಜನಿಕದ ಸ್ಥಳದಲ್ಲಿ ಲಾಂಗನ್ನು ಹಿಡಿದು ಭಯ ಹುಟ್ಟಿಸುವ ರೀತಿಯಲ್ಲಿ ಪ್ರದರ್ಶನ ಮಾಡಿದ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ.
ಇದನ್ನ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಹರಿಬಿಟ್ಟಿದ್ದು, ಇದು ದೊಂಬಿಗೆ ಮತ್ತು ಪ್ರಚೋದನ ಕಾರ್ಯ ದೃಶ್ಯವೆಂದು ಪರಿಗಣಿಸಿದ ತುಂಗಾನಗರ ಪೊಲೀಸರು ಈತನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಆರೋಪಿ ಹೈದರ್ ನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ