ಶಿವಮೊಗ್ಗ | ಜನ ಪ್ರತಿನಿಧಿಯಾಗಿ ’ಜನರಿಗೆ ನಾನು ಉತ್ತರದಾಯಿ’ : ಸಂಸದ ಬಿ.ವೈ ರಾಘವೇಂದ್ರ

Date:

Advertisements

ಶಿವಮೊಗ್ಗ ಜಿಲ್ಲೆ ಅಂತರರಾಷ್ಟ್ರೀಯ ಮಟ್ಟಕ್ಕೆ ಸರ್ವಾಂಗೀಣ ಅಭಿವೃದ್ದಿ – ’ಜನರಿಗೆ ನಾನು ಉತ್ತರದಾಯಿ’ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.

ಶಿವಮೊಗ್ಗ ಜಿಲ್ಲೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೇರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಹಕಾರದಿಂದ ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿ ಸಾಕಾರ ಗೊಳ್ಳುತ್ತಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು.

1002074978

ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಜನ ಪ್ರತಿನಿಧಿಯಾಗಿ ಜನರಿಗೆ ಉತ್ತರದಾಯಿಯಾಗಿರಬೇಕು. ನನ್ನ ಆಸೆ ಮತ್ತು ಜನರ ಅಪೇಕ್ಷೆಯಂತೆ ಶಿವಮೊಗ್ಗ ಜಿಲ್ಲೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸುವ ನಿಟ್ಟನಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿ ಪಡಿಸಿದರೆ ಜಿಲ್ಲೆ ತನ್ನಿಂದ ತಾನೇ ಅಂತರರಾಷ್ಟ್ರೀಯಮಟ್ಟಕ್ಕೆ ಗುರುತಿಸಲ್ಪಡುತ್ತದೆ. ಅದು ಪ್ರವಾಸೋದ್ಯಮದಲ್ಲಿರಬಹುದು, ಕೈಗಾರಿಕೆಯಲ್ಲಿರಬಹುದು. ರೈಲ್ವೆ, ಏರ್ ಬೇಸ್ ಯೋಜನೆಗಳಿರಬಹುದು. ಶಿವಮೊಗ್ಗ ಜಿಲ್ಲೆಗೆ ಯಾರೆ ಬಂದರೂ ನೆಮ್ಮದಿಯಿಂದ ಇರುವಂತೆ ಅಭಿವೃದ್ದಿ ಮಾಡುವ ಪ್ರಯತ್ನ ನಡೆದಿದೆ ಎಂದರು.

Advertisements

“ಮೊದಲೆ ಬಾರಿಗೆ ಚುನಾವಣೆಗೆ ಸ್ಪರ್ಧೆ ಮಾಡಿದಾಗ ಗೆಲುವಿನ ಅಂತರ 52 ಸಾವಿರ ಇತ್ತು, ಈಗ 2.50 ಲಕ್ಷದ ಹತ್ತಿರ ಬಂದಿದೆ. ಇದಕ್ಕೆ ಕಾರಣ ನರೇಂದ್ರ ಮೋದಿ ಕೊಟ್ಟ ಸಹಕಾರದಿಂದ ಆದ ನಮ್ಮ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿ, ಮತ್ತು ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್ ಯಡಿಯೂರಪ್ಪ ಅವರು ಕೊಟ್ಟ ಅಭಿವೃದ್ದಿಕಾರ್ಯ, ಜೆಡಿಎಸ್ -ಬಿಜೆಪಿ ಹೊಂದಾಣಿಕೆಯ ಬಲ.

ವಿಶೇಷವಾಗಿ ಪಕ್ಷದ ಸಂಘಟನೆ -ಹಾರೈಕೆಯಿಂದ ಗೆಲುವು ಸಾಧ್ಯವಾಯಿತು. ಜನರ ಕೊಟ್ಟ ಬೆಂಬಲಕ್ಕೆ ನಾನು ಉತ್ತರದಾಯಿಯಾಗಿದ್ದೇನೆ ಎಂದರು.

1002074885

”ಜಿಲ್ಲೆಯಲ್ಲಿ ಶರಾವತಿ ನದಿ ಪ್ರದೇಶದಲ್ಲಿ ವಾಟರ್ ಬೇಸ್ ಅಭಿವೃದ್ದಿಗೆ ಚಿಂತನೆ ನಡೆದಿದೆ. ಎಲ್ಲಾಕಾಲದಲ್ಲೂ ನೀರು ಇದ್ದು ಕ್ರೂಸ್, ಬೊಟ್ ಗಳು ಓಡಾಡುವಂತೆ ಜಲಸಂಚಾರ ಮೂಲಗಳನ್ನು ಗುರುತಿಸುವ ಕೆಲಸ ಆಗುತ್ತಿದೆ. ಕೋಟೆ ಗಂಗೂರಿನಲ್ಲಿ 100 ಕೋ.ರೂಗಳ ರೈಲ್ವೆ ಕೋಚಿಂಗ್ ಕೆಲಸ ನಡೆಯುತ್ತಿದೆ. ಇದರಿಂದ ಪ್ರಮುಖ ರೈಲುಗಳು ಈ ಡೀಪೋದಿಂದಲೆ ಓಡಾಡುವ ಮತ್ತು ಶಿವಮೊಗ್ಗಕ್ಕೆ ಸಂಪರ್ಕ ಪಡೆಯಲಿವೆ. ಮೈಸೂರು, ಬೆಂಗಳೂರು ಜಂಕ್ಷನ್ ಗಳಲ್ಲಿ ಒತ್ತಡ ಹೆಚ್ಚಾಗಿದ್ದು ಮಂದಿನ ದಿನಗಳಲ್ಲಿ ಪ್ರಮುಖ ರೈಲುಗಳನ್ನು ಶಿವಮೊಗ್ಗಕ್ಕೆ ತಿರುಗಿಸುವ ನಿಟ್ಟಿನಲ್ಲಿ ಈಗಾಗಲೆ ಯೋಜನೆಯ ಸಿದ್ದಗೊಳ್ಳುತ್ತಿದೆ ಎಂದು ತಿಳಿಸಿದರು.

ವಿಶೇಷವಾಗಿ ತಾಳಗುಪ್ಪ-ಹೊನ್ನಾವರ, ತಾಳಗುಪ್ಪ- ಸಿದ್ದಾಪುರ ನಡುವೆ ರೈಲು ಮಾರ್ಗಕ್ಕೆ ಸರ್ವೆ ಆಗಿ, ವರದಿಯೂ ಬಂದಿದೆ. ತಾಳುಗುಪ್ಪ -ಸಿದ್ದಾಪುರ ನಡುವಿನ ಮಾರ್ಗ ವಾಣಿಜ್ಯ ದೃಷ್ಟಿಯಿಂದ ಶೇ. 80 ರಷ್ಟು ಕಾರ್ಯಸಾಧುವಾಗಿದ್ದರೆ, ತಾಳಗುಪ್ಪ-ಹೊನ್ನಾಪುರ ಶೇ 8 ಮೈನಸ್ ತೋರಿಸುತ್ತಿದೆ. ತಾಳಗುಪ್ಪ-ಹೊನ್ನಾವರ ಮಾರ್ಗ ನಿರ್ಮಾಣ ವೆಚ್ಚ ಹೆಚ್ಚಾದರೂ ಅದನ್ನು ಮಾಡಲೇಬೇಕು ಎಂದು ನಾನು ಮತ್ತು ವಿಶ್ವೇಶ್ವರ ಹೆಗಡೆ (ಉತ್ತರಕನ್ನಡ ಸಂಸದ) ರೈಲ್ವೆ ಸಚಿವರಿಗೆ ಮನವಿ ಮಾಡಿಕೊಂಡಿದ್ದೇವೆ ಎಂದರು.

1002075002

ಈ ಸಂಬಂಧ ರೈಲ್ವೆ ಅಧಿಕಾರಿಗಳು ಹೋಂ ವರ್ಕ್ ಮಾಡುತ್ತಿದ್ದಾರೆ. ಶಿವಮೊಗ್ಗ- ಹರಿಹರ ರೈಲ್ವೆ ಮಾರ್ಗಕ್ಕೆ ರಾಜ್ಯ ಸರ್ಕಾರದ ಅಸಹಕಾರದಿಂದ ರದ್ದುಗೊಳಿಸುವುದಾಗಿ ರೈಲ್ವೆ ಸಚಿವರು ಹೇಳಿದ್ದಾರೆ. ನಾನು ರಾಜ್ಯ ಸರ್ಕಾರದ ಸಂಪರ್ಕದಲ್ಲಿದ್ದೇನೆ.ಕೇಂದ್ರ ಸಚಿವರಿಗೆ ಮನವೊಲಿಸಿ ಈ ಯೋಜನೆ ಕಾರ್ಯಗತಗೊಳಿಸಲಾಗುವುದು. ಶಿಕಾರಿಪುರ -ರಾಣೆಬೆನ್ನೂರು ರೈಲು ಮಾರ್ಗಕ್ಕೆ 25 ಕೋ.ರೂ ಬಿಡುಗಡೆ ಆಗಿದೆ. ಇನ್ನೂ ಬಾಕಿ 75 ಕೋ ರೂ.ಗಳಿ ಬರಬೇಕಿದೆ. ಅದನ್ನು ತರುವಲ್ಲಿ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ಶರಾವತಿ ಪಂಪ್ ಸ್ಟೋರೆಜ್ ವಿರೋಧಿಸುತ್ತೇವೆ. ಪರಿಸರ ನಾಶ ಆಗುವುದು ಸರಿಯಲ್ಲ.ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯನ್ನು 388 ಚದುರ ಕಿ.ಮೀ ಕಡಿತಗೊಳಿಸಿ ಪರಿಹರಿಸಲಾಗಿದೆ. ಅರಣ್ಯ ಇಲಾಖೆಯಲ್ಲಿದ್ದ ಕಂದಾಯ ಜಾಗವನ್ನು ಬಿಡಿಸಲಾಗಿದೆ. ಅರಸಾಳುನಿಂದ ತೀರ್ಥಹಳ್ಳಿ, ಶೃಂಗೇರಿ – ಚಿಕ್ಕಮಗಳೂರು ಲಿಂಕ್ ಮಾಡಿ ಅಲ್ಲಿಂದ ಹಾಸನಕ್ಕೆ ಮೂಲಕ ಮಂಗಳೂರಿಗೆ ರೈಲ್ವೆ ಸಂಪರ್ಕವಿಐಎಸ್ ಎಲ್ ಈಗ ಡಿಸ್ ಇನ್ವೆಸ್ಟ್ ಮೆಂಟ್ ಸ್ಥಿತಿಯಲ್ಲಿದ್ದರೂ ಸೈಲ್ ನಿಮದ ಹಂತ ಹಂತವಾಗಿ ಬಂಡವಾಳ ಹೂಡಿಕೆ ಮಾಡಿ ಮುನ್ನಡೆಸಲು ತೀರ‍್ಮಾನಿಸಲಾಗಿದೆ. ಈ ಬಗ್ಗೆ ಕೈಗಾರಿಕಾ ಸಚಿವರಾದ ನಮ್ಮ ರಾಜ್ಯದವರೆ ಆದ ಹೆಚ್.ಡಿ ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಡಿಸಂಬರ್ ವೇಳೆಗೆ ಕಾರ್ಖಾನೆ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ ಎಂದರು.

ಭದ್ರಾವತಿ, ಚನ್ನಗಿರಿ ಮೂಲಕ ಚಿಕ್ಕಜಾಜೂರಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಯೋಜನೆಯೂ ಸಿದ್ದವಾಗುತ್ತಿದೆ ಎಂದ ಸಂಸದ ಬಿ.ವೈ ರಾಘವೇಂದ್ರ ಮುಂದಿನ ದಿನಗಳಲ್ಲಿ ರೈಲ್ವೆ ಯೋಜನೆಗಳಲ್ಲಿ ಜಿಲ್ಲೆ ಪ್ರಗತಿ ಕಾಣಲಿದೆ ಎಂದು ತಿಳಿಸಿದರು.

1002075003

ವಿಮಾನನಿಲ್ದಾಣದಲ್ಲಿ ರಾತ್ರಿ ವಿಮಾನ ಸಂಚಾರಕ್ಕೆ ಪೂರಕವಾದ ಕೆಲಸ ನಡೆಯುತ್ತಿದೆ. ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ದಿ ಪಡಿಸಲಾಗುವುದು. ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 2500 ಕೋಟ.ರೂಗಳ ಕಾಮಗಾರಿಗಳು ನಡೆಯಬೇಕಿದೆ, ಕೊಲ್ಲೂರು ಕಾರಿಡಾರ್‌ಗೆ 150 ಕೋ ರೂಗಳ ಮಂಜೂರಾಗಿದ್ದು, ಕುಂದಾಪುರ ಮತ್ತು ಗಂಗೊಳ್ಳಿ ನಡುವೆ ನದಿಗೆ ಸೇತುವೆ ನಿರ‍್ಮಾಣಕ್ಕೆ ಬಂದರು ಮತ್ತು ಜಲಸಂಪನ್ಮೂಲ ಸಚಿವಾಲಯದಿಂದ ಎನ್. ಓ ಸಿ ಸಿಕ್ಕಿದೆ. ಇದರಿಂದ ಈ ಭಾಗದ ಜನರಿಗೆ ಹೆಚ್ಚು ಅನುಕೂಲ ಆಗಲಿದೆ ಎಂದು ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಸೆ.3ರಂದು ಬಸವ ಸಂಸ್ಕೃತಿ ಅಭಿಯಾನ : ರಂಗೋಲಿ, ಬಾಲ ಶರಣರ ವೇಷಧಾರಿ ಸ್ಪರ್ಧೆ

ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಅಭಿಯಾನ ಸಮಿತಿ ವತಿಯಿಂದ ಬೀದರ್ ನಗರದಲ್ಲಿ...

ಬೀದರ್‌ | ಎಫ್‌ಆರ್‌ಎಸ್ ಕ್ರಮ ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

Download Eedina App Android / iOS

X