ಶಿವಮೊಗ್ಗ, ರೈಲ್ವೆ ನಿಲ್ದಾದಾಣದ ೧೦೦ ಮೀಟರ್ ಒಳಗೆ ಆಟೋ ಬರುವುದನ್ನು ನಿಷೇಧಿಸಿದ್ದು ನೂರರಿಂದ ೨೦೦ ಮೀಟರ್ ದೂರದಲ್ಲಿ ಆಟೋವನ್ನು ನಿಲ್ಲಿಸಬೇಕು. ಅಲ್ಲಿಯೇ ಪ್ರಯಾಣಿಕರ ಲಗೇಜ್ ಹಾಕಿಕೊಂಡು ಆಟೋಗಳಲ್ಲಿ ಕಡ್ಡಾಯವಾಗಿ ಮೀಟರ್ ಹಾಕಿಕೊಂಡು ಹೋಗಬೇಕು ಎಂದು ಆಟೋ ಚಾಲಕರಿಗೆ ಕಡ್ಡಾಯ ಪಾಲನೆಯ ನಿರ್ದೇಶನ ನೀಡಲಾಗಿದೆ. ಟ್ರಾಫಿಕ್ ಇನ್ಸ್ಪೆಕ್ಟರ್ ದೇವರಾಜ್,
ಈ ಸೂಚನೆ ನೀಡಿದ್ದಲ್ಲದೆ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಮೂರು ಕಡೆ ಡಿವೈಡ್ ಮಾಡಿದ್ದು ಒಂದು ಕಡೆ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಿದ್ದು ಆಟೋದವರು ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದಿದ್ದಾರೆ.
ಬಹುದಿನಗಳ ಬೇಡಿಕೆ ಪ್ರಿಪೇಯ್ಡ್ ಆಟೋಗೆ ಸದ್ಯದಲ್ಲಿಯೇ ಚಾಲನೆ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಬಹು ದಿನಗಳ ಬೇಡಿಕೆ ಪ್ರಿಪೇಯ್ಡ್ ಆಟೋ ವ್ಯವಸ್ಥೆ ಮಾಡಿದರೆ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುತ್ತದೆ ಎಂದಿದ್ದಾರೆ.
ಈ ನಿಟ್ಟಿನಲ್ಲಿ ಇನ್ಸ್ಪೆಕ್ಟರ್ ದೇವರಾಜ್ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಹಾಗೂ ಆರ್ ಟಿ ಓ, ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿ ಸಾರ್ವಜನಿಕರ ಬಹುದಿನಗಳ ಬೇಡಿಕೆಗೆ ಶಾಶ್ವತ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ.
ಸಂತೋಷದ ವಿಷಯ, ಸುಮಾರು ವರ್ಷಗಳಿಂದ ಕಾಯುತ್ತಿದ್ದೆವು ಯಾವಾಗ ಬರುತ್ತದೆ ಇ ಒಂದು ಒಳ್ಳೆಯ ದಿನ, ದೇವರು ಒಳ್ಳೇದು ಮಾಡಲಿ, ಹಾಗೆಯೇ ಪ್ರಯದವರು ಬಂದರೆ ಹೇಗೆ ಸುಧಾರಿಸುತ್ತಿರ ಅವರ ಬಗ್ಗೆ ಸ್ವಲ್ಪ ಯೋಚಿಸಿ ಮತ್ತು ಸರಿಯಾದ ಅಧಿಕಾರಿಗಳಿಗೆ ನೇಮಿಸಿ ರೈಲ್ ಬರುವಾಗ ಮತ್ತು ಹೋಗುವಾಗ, ಪ್ರೀ ಫೈಡ್ ಆಟೋ ಬೇಗನೆ ಚಾಲು ಮಾಡಿಸಿ