ಶಿವಮೊಗ್ಗ | ಮೀಟರ್ ಬಳಸದ ಆಟೋಗಳು; ಕಣ್ಮುಚ್ಚಿ ಕುಳಿತ ಪೊಲೀಸರು

Date:

Advertisements

ಶಿವಮೊಗ್ಗ ನಗರದಲ್ಲಿ ಪೊಲೀಸ್ ಇಲಾಖೆ ನಿತ್ಯವೂ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಬದಲಾವಣೆ ತರಲು ಪ್ರಯತ್ನ ಮಾಡುತ್ತಿದೆ. ಆದರೆ ಅಸಲಿಗೆ ಇದು ಸಾಮಾಜಿಕ ಜಾಲತಾಣ ಸುದ್ದಿಗಳಿಗೆ ಪ್ರಶಂಸೆಗೆ ಮಾತ್ರ ಸೀಮಿತವಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಸಾಮಾಜಿಕ ಜಾಲತಾಣದ ಮುಖೇನ ಪೊಲೀಸರು ನಡೆಸುತ್ತಿರುವ ಜಾಗೃತಿ ಎಷ್ಟು ಮುಖ್ಯವೊ ಅದೇ ರೀತಿಯಲ್ಲಿ ಬದಲಾವಣೆಯೂ ಮುಖ್ಯವಾಗಿರುತ್ತದೆ. ಆದರೆ ನಿಜಕ್ಕೂ ಬದಲಾವಣೆಗಳು ಕಾರ್ಯರೂಪಕ್ಕೆ ಬರುತ್ತಿವೆಯೇ ಅನ್ನೋದು ಪ್ರಶ್ನೆ.

ನಗರದಲ್ಲಿ ಕರ್ಕಶ ಶಬ್ದದ ವಿರುದ್ಧ ಅಭಿಯಾನ, ಟ್ರಾಫಿಕ್ ಸಂಬಂಧಿತ ಸಮಸ್ಯೆಗಳ ಜಾಗೃತಿ ಒಂದು ದಿನದ ಪ್ರಚಾರಕ್ಕೆ ಸೀಮಿತವಾದಂತೆ ಕಾಣುತ್ತಿದೆ. ಇದರಿಂದ ನಗರದ ಟ್ರಾಫಿಕ್ ಪೊಲೀಸ್ ಇಲಾಖೆ ಮೇಲೆ ಬೇರೆ ರೀತಿ ಸಂದೇಶ ರವಾನೆಯಾಗಿತ್ತಿದೆ. ಯಾಕಂದ್ರೆ ನಿತ್ಯವೂ ಬಹಳಷ್ಟು ಆಟೋ ಡ್ರೈವರ್‌ಗಳು ಮೀಟರ್ ಬಳಸುತ್ತಿಲ್ಲ. ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಹಾಗೂ ಎಸ್‌ಪಿಯವರು ಕಡ್ಡಾಯವಾಗಿ ಮೀಟರ್ ಬಳಸಲೇಬೇಕೆಂದು ಅದೇಶಿಸಿದ್ದಾರೆ. ಆದೇಶದ ಕುರಿತು ಈಗ ಇಲಾಖೆಯೇ ಸ್ಪಷ್ಟತೆ ಪಡೆದುಕೊಳ್ಳಬೇಕಿದೆ.

ನಗರದ ಸರ್ಜಿ ಆಸ್ಪತ್ರೆಯ ಮುಂಭಾಗದಲ್ಲಿರುವ ವಿಘ್ನೇಶ್ವರ ಆಟೋ ನಿಲ್ದಾಣ ಬಳಿ ಆಸ್ಪತ್ರೆ ಸ್ಥಳದಿಂದ ಶಿವಪ್ಪ ನಾಯಕ ವೃತ್ತಕ್ಕೆ ವೃದ್ಧರೊಬ್ಬರು ಆಟೋ ಹತ್ತಲು ಬಂದಾಗ, ಆಟೋ ಚಾಲಕ ಮೀಟರ್ ಹಾಕುವುದಿಲ್ಲವೆಂದು ಹೇಳಿದರು. ಮೀಟರ್ ಕಡ್ಡಾಯವಾಗಿದೆಯೆಂದು ಟ್ರಾಫಿಕ್ ಪೊಲೀಸ್ ಹಾಗೂ ಎಸ್‌ಪಿ ತಿಳಿಸಿದ್ದಾರೆ. ಯಾಕೆ ಮೀಟರ್ ಹಾಕುವುದಿಕಲ್ಲವೆಂದು ಪ್ರಶ್ನಿಸುತ್ತಿದ್ದಂತೆ.. ಆಟೋ ಚಾಲಕ ʼಎಸ್‌ಪಿ, ಟ್ರಾಫಿಕ್ ಅವರು ಹೇಳಿದಂತೆ ಆಗಲ್ಲ, ಬರೋದಿದ್ದರೆ ನಾವು ಹೇಳಿದಷ್ಟು ಕೊಡಿ, ಇಲ್ಲವಾದರೆ ಹೋಗಿ ಬೇರೆ ಯಾವುದಾದರೂ ಆಟೋ ನೋಡಿಕೊಳ್ಳಿʼ ಎಂದು ಉಡಾಫೆಯಾಗಿ ಮಾತನಾಡಿರುವುದು ಕಂಡುಬರುತ್ತದೆ. ಇದು ಒಂದು ಆಟೋದ ಕಥೆಯಲ್ಲ ಎನ್ನುವುದು ಗಮನಾರ್ಹ. ಆಟೋದವರಿಗೆ ಪೊಲೀಸ್ ಇಲಾಖೆ ಬಗ್ಗೆ ಕನಿಷ್ಠ ಗೌರವವೂ ಇಲ್ಲವೆಂಬುದು ಇದರಿಂದ ಸ್ಪಷ್ಟವಾಗುತ್ತದೆ.

Advertisements
1001288284

“ಬಸ್ ನಿಲ್ದಾಣದಿಂದ ಶಂಕರ್ ಕಣ್ಣಿನ ಆಸ್ಪತ್ರೆ ಅಥವಾ ನಾರಾಯಣ ಹೃದಯಾಲಯ, ಗಾಜನೂರು ಜಲಾಶಯ ಹಾಗೂ ಸಕ್ರೆಬೈಲ್ ಆನೆ ಬಿಡಾರ ಹೀಗೆ ಬಸ್ ನಿಲ್ದಾಣದಿಂದ ಈ ಸ್ಥಳಗಳಿಗೆ ಅಬ್ಬಬ್ಬಾ ಅಂದರೂ 10 ರಿಂದ 13 ಕಿಮೀ ಆಗಬಹುದು. ಮೀಟರ್ ಯಾಕೆ ಹಾಕುವುದಿಲ್ಲ.. ಮೀಟರ್ ಕಡ್ಡಾಯವಿಲ್ಲವೇ? ಒಂದು ಆಟೋಗೆ 3 ಜನ ಮಾತ್ರ ಪೊಲೀಸ್ ಇಲಾಖೆ ನಿರ್ದೇಶನ ನೀಡಿದೆ. ಆದರೆ ಎಷ್ಟು ಜನ ಪ್ರಯಾಣಿಕರನ್ನು ಕೂರಿಸಿಕೊಂಡು ಹೋಗುತ್ತಾರೆ. ಇದೆಲ್ಲ ಪ್ರಶ್ನೆ ಮಾಡೋ ಹಾಗಿಲ್ಲ. ʼಸ್ವಾಮಿ ಇಲ್ಲಿ ಪ್ರಶ್ನೆ ಮಾಡಿದರೆ ಅಲ್ಲೇ ಜಗಳ ಅಸಭ್ಯ ಮಾತುಗಳು.. ಸಾರ್ವಜನಿಕರಿಗೆ ಸಾಕಪ್ಪ ಸಾಕು ಹೇಗೋ ಹೋದರೆ ಸಾಕು, ಆಸ್ಪತ್ರೆ ತಲುಪಿ ಚಿಕಿತ್ಸೆ ಪಡೆದರೆ ಸಾಕು.. ತೆರಳಬೇಕಾದ ಸ್ಥಳಕ್ಕೆ ತೆರಳಿದರೆ ಸಾಕು.. ಎನ್ನುವಂತೆ ಮಾಡುತ್ತಾರೆ” ಎಂಬುದು ನಗರದ ಪ್ರಜ್ಞಾವಂತ ನಾಗರಿಕರ ಅಭಿಪ್ರಾಯ.

“ಬಸ್ ಸ್ಟಾಂಡ್ ಯಿಂದ ಸರ್ಕಾರಿ ಮೆಗ್ಗನ್ ಆಸ್ಪತ್ರೆ ಎಷ್ಟು ದೂರ ಇದೆ ಪೊಲೀಸ್ ಇಲಾಖೆ ಪ್ರಕಾರ 1.5 ಕಿಮೀ ಮೀಟರ್‌ಗೆ ₹40 ನಿಗದಿಯಾಗಿದೆ. ಆದರೆ ಆಟೋದವರು ಕೇಳುವುದೇಷ್ಟು? ಒಂದೊಂದು ಆಟೋನು ಒಂದೊಂದು ದರ ಕೇಳುತ್ತಾರೆ. ಗೊತ್ತಿರುವ ಸ್ಥಳೀಯರಿಗೆ 50 ರಿಂದ 60 ರೂಪಾಯಿ.. ಗೊತ್ತಿಲ್ಲದವರಿಗೆ ಮತ್ತಷ್ಟು ಜಾಸ್ತಿ. ಇಂತಿಷ್ಟು ಅಂತ ಇಲ್ಲ ಪ್ರಯಾಣಿಕರ ನೋಡಿಕೊಂಡು ನಿರ್ಧಾರ ಮಾಡುತ್ತಾರೆ. ಬಸ್ ಸ್ಟಾಂಡ್‌ನಿಂದ ವಿದ್ಯಾನಗರ, ಹರಿಗೆ, ಮಲವಗೋಪ್ಪ ಈ ಮಾರ್ಗಕ್ಕೆ 10 ಕಿಮೀ ಸರಾಸರಿ ಮಲವಗೋಪ್ಪ ಕ್ಕೆ ಅಂದಾಜು ಇಟ್ಟುಕೊಳ್ಳುವ ಬಹಳಷ್ಟು ಆಟೋ ಚಾಲಕರು ಮೀಟರ್ ಹಾಕುವುದೇ ಇಲ್ಲ. ಬೆಳಕಿನ ವೇಳೆಯಲ್ಲಿ ₹300 ರಿಂದ ₹350 ಕೇಳುತ್ತಾರೆ ಸ್ವಾಮಿ” ಎನ್ನುತ್ತಾರೆ ಸ್ಥಳೀಯರು.

WhatsApp Image 2025 03 11 at 11.32.34 AM

ವಾಸ್ತವದಲ್ಲಿ ಮಲವಗೋಪ್ಪಗೆ ಮೀಟರ್ ಹಾಕಿದರೆ 150 ರಿಂದ 160 ರೂಪಾಯಿ ಆಗಲಿದೆ. ಆದರೆ ಇವರು ನಿಗದಿ ಮಾಡೋದು 350 ರೂ. ಈ ಹಣದಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೇ ಪ್ರಯಾಣ ಮಾಡಬಹುದು ಅನ್ನುತ್ತಾರೆ ಸಾರ್ವಜನಿಕರು. ಪ್ರಶ್ನೆ ಮಾಡಿದರೆ ಅಸಭ್ಯ ವರ್ತನೆ, ಇನ್ನೇನಾದ್ರೂ ಆಟೋ ಸ್ಟಾಂಡ್ ಅಲ್ಲಿ ಈ ಪ್ರಶ್ನೆ ಕೇಳಿದರೆ ಮುಗಿದೇ ಹೋಯಿತು.. ಎಲ್ಲಾ ಗುಂಪಾಗಿ ಬಂದು ಅವಾಚ್ಯ ಶಬ್ದಗಳಿಂದ ಬಾಯಿಗೆ ಬಂದಂತೆ ಮಾತನಾಡಿಬಿಡುತ್ತಾರೆ.

ರಸ್ತೆಯಲ್ಲಿ ಬರುವ ಬೇರೆ ಆಟೋ ಅಥವಾ ಪರಿಚಯಸ್ತ ಆಟೋ ಗು ಬರಲು ಹೇಳುವ ಹಾಗಿಲ್ಲ. ಅಲ್ಲೇ ರಸ್ತೆಯಲ್ಲಿ ಸಾರ್ವಜನಿಕ ಸ್ಥಳದಲ್ಲೇ ದಬ್ಬಾಳಿಕೆ ಮಾಡುತ್ತಾರೆ. ದಿನ ನಿತ್ಯ ಜನ ರೋಸಿ ಹೋಗುತ್ತಿದ್ದಾರೆ. ಇನ್ನು ರಾತ್ರಿ ವೇಳೆಯಲ್ಲಿ ಹೇಗಾದ್ರು ಮಾಡಿ ಮನೆ ಹಾಗೂ ಸಂಬಂಧಪಟ್ಟ ಸ್ಥಳಗಳಿಗೆ ತೆರಳುವುದು ಅನಿವಾರ್ಯತೆ ಇದ್ದೇ ಇರುತ್ತೆ. ಇದನ್ನೇ ಬಂಡವಾಳವಾಗಿಸಿಕೊಂಡು ಆಟೋ ಚಾಲಕರು ಸಹಾಯ ಮಾಡುವ ಬದಲು ನಡೆದುಕೊಳ್ಳುವ ರೀತಿಯಂತೂ ತೀರಾ ಕನಿಷ್ಟವಾಗಿರುತ್ತದೆ. ಸಾರ್ವಜನಿಕರು, ರೋಗಿಗಳು, ಮಹಿಳೆಯರು,ಪ್ರಯಾಣಿಕರು, ದಿನ ನಿತ್ಯ ಹಿಡಿ ಶಾಪ ಹಾಕಿಕೊಂಡು ಓಡಾಡುತ್ತಿದ್ದಾರೆ.

1001329271

ಇತ್ತೀಚಿನ ದಿನಗಳಲ್ಲಿ ಪಶ್ಚಿಮ ಸಂಚಾರಿ ಟ್ರಾಫಿಕ್ ಇನ್ಸ್ಪೆಕ್ಟರ್ ತಿರುಮಲೇಶ್ ಶಿವಮೊಗ್ಗ ನಗರದಲ್ಲಿ ಟ್ರಾಫಿಕ್ ಕುರಿತು ಅರಿವು ಮೂಡಿಸುತ್ತಿರುವ ಒಳ್ಳೆಯ ಕೆಲಸಕ್ಕೆ ಹೆಸರುವಾಸಿಯಾಗಿದ್ದಾರೆ. ಆದರೆ ನಗರದಲ್ಲಿ ಓಡಾಡುವ ಖಾಸಗಿ ಬಸ್‌ಗಳ ಕರ್ಕಶ ಶಬ್ದದ ವಿರುದ್ಧ ಒಂದು ಅಭಿಯಾನ ನಡೆಸಿ ಮೊದಲು ಹಾರ್ನ್ ಬದಲಾಯಿಸಿ, ಸಾರ್ವಜನಿಕರಿಗೆ ವಾಹನ ಸವಾರರಿಗೆ ಎಷ್ಟೆಲ್ಲ ಕಿರಿ ಕಿರಿ ಉಂಟಾಗತ್ತೆ ಎಂದು ಅರಿವು ಮೂಡಿಸಲು ಪ್ರಯತ್ನಿಸಿದರು. ಅಂತಹವರ ವಿರುದ್ಧವೇ ಪಿತೂರಿ ಮಾಡಿ ಮೇಲಧಿಕಾರಿಗಳಿಗೆ ದೂರು ನೀಡಿ ಅವರ ಕರ್ತವ್ಯಕ್ಕೆ ಧಕ್ಕೆ ಉಂಟು ಮಾಡಲು ಪ್ರಯತ್ನಿಸಿದ್ದು ಮಾತ್ರ ವಿಪರ್ಯಾಸ.

ರಸ್ತೆಯಲ್ಲಿ ಎಲ್ಲೆಂದರಲ್ಲಿ ಏಕಾಏಕಿ ಆಟೋ ನಿಲ್ಲಿಸುತ್ತಾರೆ. ಇದರಿಂದ ಅಪಘಾತಗಳು ಆಗುವ ಸಂಭವವಿರುತ್ತದೆ. ಹಿಂದಿನಿಂದ ಬರುವ ವಾಹನಗಳು ಪ್ರಶ್ನಿಸಿದರೆ ಜಗಳ ಬೈಗುಳ ಅಸಭ್ಯ ಮಾತು ಅವರದೇ ತಂಡಗಳನ್ನು ಕರೆದು ದಬ್ಬಾಳಿಕೆ ಮಾಡುತ್ತಾರೆ ಎಂಬುದು ವಾಹನ ಸವಾರರ ಅಳಲು. ಆಟೋದವರು ಇಷ್ಟೆಲ್ಲಾ ದರ್ಪ ತೋರಲು ಸ್ಥಳೀಯ ರಾಜಕಾರಣಿಗಳ ಸಹಕಾರ ಇದೆ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುವ ಮಾತು. ರಾಜಕಾರಣಿಗಳ ಸಹಕಾರವಿಲ್ಲದೆ ಇಷ್ಟೆಲ್ಲಾ ಹೇಗೆ ಮಾಡಲು ಸಾಧ್ಯ? ಒಬ್ಬ ಬಡ ಕುಟುಂಬ ವ್ಯಕ್ತಿ ಕೆಲಸ ಮಾಡುತ್ತಾನೆ ಆಟೋ ಓಡಿಸುತ್ತಾನೆ ಬಂದಂತ ಹಣದಲ್ಲಿ ತನ್ನ ಕುಟುಂಬ ಜೀವನ ನಿರ್ವಹಣೆ ಮಾಡುತ್ತಾನೆ ಅದು ಬಿಟ್ಟು ದಬ್ಬಾಳಿಕೆ ಮಾಡುವುದು, ಬೇರೆ ಬೇರೆ ಅವಶ್ಯಕತೆ ಇಲ್ಲದೆ ವರ್ತಿಸುವುದೆಲ್ಲ ಇರುವುದಿಲ್ಲ ಎಂಬುದು ಶಿವಮೊಗ್ಗ ನಾಗರಿಕ ವಿಚಾರವಾಗಿದೆ.

1001329279

ಸಂಘಟನೆಗಳು ಹಾಗೂ ಇತರೆ ರಾಜಕಾರಣಿಗಳ ಒತ್ತಡಕ್ಕೆ ಮಣಿಯದೆ ಪೊಲೀಸ್ ಇಲಾಖೆ ಸೂಕ್ತ ರೀತಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಬೇಕು, ಜೊತೆಗೆ ಮೀಟರ್ ಕಡ್ಡಾಯವಾಗಿದೆ ಎಂಬುದು ಪ್ರಚಾರಕ್ಕೆ ಸೀಮಿತವಾಗದೆ ಇರಲಿ. ಆಟೋ ಸೇವೆ ಕುರಿತು ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆ ಕಡಿಮೆಯಾಗಬೇಕೆಂಬುದು ಈದಿನ ಡಾಟ್‌ ಕಾಮ್‌ ಕಳಕಳಿ.

raghavendra 1
+ posts

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ರಾಘವೇಂದ್ರ
ರಾಘವೇಂದ್ರ
ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

Download Eedina App Android / iOS

X