ಶಿವಮೊಗ್ಗ ನಗರದ ಖಾಸಗಿ ಬಸ್ ನಿಲ್ದಾಣದ ಹಿಂಭಾಗ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ. ಮಣಿಪಾಲ ಆಸ್ಪತ್ರೆಯಿಂದ ಹಿಂತಿರುಗಿದ ಅನುಪಿನಕಟ್ಟೆಯ ಮಹೇಶ ಕುಮಾರ್ ಎಂಬುವವರ ಬೈಕ್ ಕಳ್ಳತನವಾಗಿದೆ.
ಮಹೇಶ ಕುಮಾರ್ ಅವತು ತಮ್ಮ ಪಲ್ಸರ್ ಬೈಕ್ ಅನ್ನು ಖಾಸಗಿ ಬಸ್ ನಿಲ್ದಾಣದ ಹಿಂಭಾಗ ಅಂಗಡಿ ಮುಂದೆ ಬೆಳಗ್ಗೆ ತಂದು ನಿಲ್ಲಿಸಿದ್ದರು.
ಮಣಿಪಾಲ ಆಸ್ಪತ್ರೆಗೆ ಹೋಗಿ ಬಸ್ಸಿನಲ್ಲಿ ಸಂಜೆ ಹಿಂತಿರುಗಿದಾಗ ಬೈಕ್ ಇರಲಿಲ್ಲ. ಎಲ್ಲೆಡೆ ಹುಡುಕಿದರೂ ಬೈಕ್ ಸಿಗದ ಹಿನ್ನೆಲೆ ದೂರು ನೀಡಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.