ಶಿವಮೊಗ್ಗ | ಬಿಜೆ.ಪಿ., ಆರ್.ಎಸ್.ಎಸ್.ನದ್ದು ಸಂವಿಧಾನ ಆಶಯಗಳಿಗೆ ವಿರುದ್ಧ ನಿಲುವು : ಕಿಮ್ಮನೆ ರತ್ನಾಕರ್

Date:

Advertisements

ಶಿವಮೊಗ್ಗ, ಬಿ.ಜೆ.ಪಿ. ಮತ್ತು ಆರ್.ಎಸ್.ಎಸ್. ಪರಿವಾರದವರು ಸಂವಿಧಾನ ಆಶಯಗಳಿಗೆ ವಿರುದ್ಧವಾದ ನಿಲುವನ್ನು ಹೊಂದಿವೆ. ಇಂದಿನ ಬಿ.ಜೆ.ಪಿ. ಕೇಂದ್ರ ಸರ್ಕಾರ, ಹೆಡಗೆವಾರ್, ಗೊಳ್ವಾಳ್ಕರ್‍ಳ್, ಸಾವರ್‌ಕರ್, ಗಾಂಧಿಹಂತಕ ನಾಥುರಾಮ ಗೋಡ್ಸೆ ಬೆಂಬಲಿತ ಚಿಂತನ ಗಂಗಾ ಕೃತಿ, ಸಂಘದರ್ಶನದ, ಸಂವಿಧಾನವನ್ನು, ತಂತ್ರಗಾರಿಕೆಯ ಹಿಂಸೆಯನ್ನು ಪ್ರತಿಪಾದಿಸುವ ವಿಚಾರ ಧಾರೆಯನ್ನು ಅನುಷ್ಠಾನಗೊಳಿಸುವ ಕೇಂದ್ರದ ಬಿ.ಜೆ.ಪಿ. ಸರ್ಕಾರವನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಂಧಿ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ನಾರಾಯಣ ಗುರು, ಜವಹಾರ್‌ಲಾಲ್ ನೆಹರು ಪ್ರತಿಪಾದನೆ ಮಾಡಿದ, ಸಮಾಜವಾದಿ ಚಿಂತನೆಯ, ಜಾತ್ಯತೀತ ನಿಲುವಿನ, ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನವು ಜನರ ಆಶಯಗಳಿಗೆ ಪೂರಕ ನೀತಿಯನ್ನು ಹೊಂದಿದೆ.

ಕಾಂಗ್ರೆಸ್ ಸರ್ವರನ್ನು ಎಲ್ಲ ಜಾತಿ, ಧರ್ಮದವರನ್ನು ಒಳಗೊಳ್ಳುವ, ಶಾಂತಿ ನೆಮ್ಮದಿಯ, ಅಹಿಂಸೆಯ, ಜಾತ್ಯಾತೀತ, ಬಹುತ್ವದ ಭಾರತವನ್ನು ಕಟ್ಟುವ ಮತ್ತು ದೇಶದಲ್ಲಿನ ಸಾಮಾಜಿಕ ಅಸಮಾನತೆ ಮತ್ತು ಶೈಕ್ಷಣಿಕ ಅಸಮಾನತೆಯನ್ನು ತೆಗೆದುಹಾಕಿ, ಸಹಬಾಳ್ವೆಯ ವಾತಾವರಣವನ್ನು ನಿರ್ಮಿಸುವುದು ಕಾಂಗ್ರೆಸ್ ಪಕ್ಷದ ಮೂಲತತ್ವವಾಗಿದೆ ಎಂದರು.

ಶ್ರೇಣೀಕೃತ ಸಮಾಜವನ್ನು ಸಮರ್ಥಿಸುವ, ಮೀಸಲಾತಿಯನ್ನು ವಿರೋಧಿಸುವ, ಸಂವಿಧಾನವನ್ನು ಬದಲಿಸುವ, ದಲಿತ ಸಮಾಜದ ಅಸ್ಪೃಶ್ಯತೆಯನ್ನು ಉಳಿಸಿ ಮನುಷ್ಯನ ದೇಹದಿಂದ ಅವರನ್ನು ಹೊರಗಿಡುವ, ದೇಶದ ಒಕ್ಕೂಟ ವ್ಯವಸ್ಥೆಯನ್ನು ರದ್ದು ಮಾಡಿ, ದೇಶಕ್ಕೆ ಒಂದೇ ಸಂಸತ್, ಒಂದೇ ಭಾಷೆ (ಸಂಸ್ಕೃತಿ), ಸಂಪರ್ಕ ಭಾಷೆಯಾಗಿ ಹಿಂದಿಯನ್ನು ಉಳಿಸಿಕೊಂಡು, ದೇಶದಲ್ಲಿನ ಎಲ್ಲಾ ರಾಜ್ಯ ಭಾಷೆಗಳೊಂದಿಗೆ ಇತರೆ ೪೦೦೦ ಸಾವಿರ ಭಾಷೆಗಳು (ರದ್ದು ಮಾಡುವ) ಅಗತ್ಯವಿಲ್ಲ ಎಂದು ಹೇಳುವ ಮೂಲಕ ಇಂಗ್ಲೀಷ್‌ನ್ನು ತೆಗೆದು ಹಾಕಿ, ಇಂದಿನ ರಾಷ್ಟ್ರಧ್ವಜವನ್ನು ತೆಗೆದು ಹಾಕಿ ಚಿಂತನ ಗಂಗ ಪ್ರತಿಪಾದಿಸುವ ಭಾಗಧ್ವಜವನ್ನು ರಾಷ್ಟ್ರಧ್ವಜವನ್ನು ಮಾಡಬೇಕು ಎನ್ನುವ ಉದ್ದೇಶದಿಂದ ೫೨ ವರ್ಷ ಆರ್.ಎಸ್.ಎಸ್. ಕೇಂದ್ರ ಕಚೇರಿ ನಾಗಪುರದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಿಲ್ಲ. ಬಿ.ಜೆ.ಪಿ. ಮತ್ತು ಪರಿವಾರದವರು, ಸಂವಿಧಾನ ಒಪ್ಪಿದರೆ, ಚಿಂತನಗಂಗ, ಕೃತಿ ಸಂಘ ರೂಪದರ್ಶನ ವಿಚಾರ ಧಾರೆಯನ್ನು ತಿರಸ್ಕಾರ ಮಾಡಬೇಕು. ಎರಡು ಒಂದಾಗಲು ಸಾಧ್ಯವಿಲ್ಲ ಎಂದು ಹೇಳಿದರು.

ಬಿ.ಜೆ.ಪಿ.ಗೆ ರಾಷ್ಟ್ರದಲ್ಲಿ ೩೬೦ ಸಂಸತ್ ಸದಸ್ಯರ ಆಯ್ಕೆಗೊಂಡ ದಿನ ದೇಶದ ನಮ್ಮ ಸಂವಿಧಾನವನ್ನು ತೆಗೆದು ಹಾಕಿ, ಚಿಂತನ ಗಂಗ ಮತ್ತು ಜನವಿರೋಧಿ, ಮನುಷತ್ವ ಮತ್ತು ಮಾನವೀಯತೆಯ ವಿರೋಧ ಕೃತಿ ಸಂಘ ರೂಪದರ್ಶನ ವಿಚಾರ ಧಾರೆಯನ್ನು ಅನುಷ್ಠಾನಗೊಳಿಸುತ್ತಾರೆ.

ಇಂದಿನ ಭಾರತದ ಸಂವಿಧಾನವನ್ನು ಈಗ ಬಿ.ಜೆ.ಪಿ. ಸಮರ್ಥಿಸುವ ವಿಧಾನ, ತಮ್ಮ ಗುರಿಮುಟ್ಟುವವರೆಗಿನ ಒಂದು ತಂತ್ರಗಾರಿಕೆಯಷ್ಟೆ ಎಂದ ಅವರು, ಕಾಂಗ್ರೆಸ್ ಬಿಜೆಪಿಯ ಈ ಎಲ್ಲ ನಿಲುವುಗಳ ವಿರುದ್ಧ ಸದಾ ಹೋರಾಟ ಮುಂದುವರೆಸಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಪಾಷಾ, ಪ್ರಚಾರ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ, ಶಿವಾನಂದ್, ಕಲಗೋಡು ರತ್ನಾಕರ್ ಮೊದಲಾದವರಿದ್ದರು

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೋಜುಗಾದ ಸೂಜು ಮಲ್ಲಿಗೆ ಹುಡುಗಿ ಹಾಡು : ಇಮ್ಮಡಿಯಾದ ಪ್ರೇಕ್ಷಕರ ಉತ್ಸಾಹ

 ಕಳೆದ 10 ದಿನಗಳಿಂದ ದಸರಾ ಉತ್ಸವ ಸಂಭ್ರಮದಲ್ಲಿ ಮುಳುಗಿದ್ದ ಪ್ರೇಕ್ಷಕರ ಉತ್ಸಾಹ...

ತುಮಕೂರು ದಸರಾ : ಸಚಿವರಿಂದ ವಿಶೇಷ ಪೂಜೆ

ತುಮಕೂರು ದಸರಾ ಉತ್ಸವದ ಕಡೆಯ ದಿನವಾದ ವಿಜಯದಶಮಿಯಂದು ಗೃಹ ಹಾಗೂ ಜಿಲ್ಲಾ...

ಯುವಪರಿವರ್ತನೆ ಯಾತ್ರೆ: ಬಾಗಲಕೋಟೆಯಲ್ಲಿ ಚಾಲನೆ

ಯುವಜನರನ್ನು ರಾಜ್ಯದ ಅಭಿವೃದ್ಧಿಯತ್ತ ಚಿತ್ತಹರಿಸಲು, ಪ್ರಜೆಗಳ ಆರೋಗ್ಯ, ಶಿಕ್ಷಣ, ಸಬಲೀಕರಣ, ಉದ್ಯೋಗದ...

ಕೊಪ್ಪಳ | ಪ್ರವಾದಿ ಮಹಮ್ಮದ್‌ ಸಂದೇಶವನ್ನು ನಾವು ಪಾಲನೆ ಮಾಡಬೇಕು: ಲಾಲ್ ಹುಸೇನ್ ಕಂದ್ಗಲ್

'ಖುರಾನ್' ಬರುವ ಪ್ರವಾದಿ ಮಹಮ್ಮದ್‌ ಅವರು ಹೇಳಿದ ಸತ್ಯವನ್ನೇ ಭಾರತೀಯ ಪುರಾಣಗಳು...

Download Eedina App Android / iOS

X