ಶಿವಮೊಗ್ಗದಲ್ಲಿ ಮೆಡಿಕಲ್ ಕಾಲೇಜು ಆರಂಭಿಸುವಾಗ ಇಂಡಿಯನ್ ಮೆಡಿಕಲ್ ಕೌನ್ಸಿಲ್ ನಿಯಮದ ಪ್ರಕಾರ ಪ್ರತ್ಯೇಕ ಆಸ್ಪತ್ರೆಯನ್ನು ಹೊಂದಬೇಕಿತ್ತು. ಆದರೆ ಮೂಲಸೌಕರ್ಯ ಇದೆ ಎಂದು ತೋರಿಸಲು ತರಾತುರಿಯಲ್ಲಿ ಮೆಗ್ಗಾನ್ ಆಸ್ಪತ್ರೆಯನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಬಳಸಿಕೊಂಡಿತು.
ಇದಕ್ಕೆ ಕೆಲವು ವಷಗಳ ಕರಾರು ಮಾಡಿಕೊಡಲಾಗಿತ್ತು. ಇದನ್ನು ಸಿಮ್ಸ್ ಗೆ ಬಿಟ್ಟುಕೊಟ್ಟು ಜಿಲ್ಲಾಸ್ಪತ್ರೆಯನ್ನು ಶಿಕಾರಿಪುರಕ್ಕೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಸ್ಥಳಾಂತರಿಸಿದ್ದರು.
ಅಂದಿನಿಂದ ಶಿವಮೊಗ್ಗದಲ್ಲಿ ಜಿಲ್ಲಾ ಆಸ್ಪತ್ರೆ ರೋಗಗ್ರಸ್ತವಾಗಿದೆ. ಇದಕ್ಕೆಲ್ಲ ಕಾರಣ ಬಿಜೆಪಿಯವರೇ ಆಗಿದ್ದಾರೆ.
ಈಗ ಸಿಮ್ಸ್‌ಗೆ ಬೇರೆ ಆಸ್ಪತ್ರೆ ಕಟ್ಟಲು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ|| ಶರಣಪ್ರಕಾಶ್ ಪಾಟೀಲರ ಬಳಿ ಮಾತನಾಡಿದ್ದೇನೆ. ಸಿಮ್ಸ್ ಒಪ್ಪಂದದ ಪ್ರಕಾರ ಪ್ರತ್ಯೇಕ ಆಸ್ಪತ್ರೆ ಕಟ್ಟಿಕೊಳ್ಳ್ಳುವುದಾಗಿ ಹೇಳಿದ್ದರೂ ಅದನ್ನು ಮಾಡಲಿಲ್ಲ.
ಈಗಲೂ ಮೆಗ್ಗಾನ್ ಆಸ್ಪತ್ರೆಯನ್ನೇ ಬಳಸಿಕೊಳ್ಳುತ್ತಿದೆ. ಈ ಎಲ್ಲಾ ಗೊಂದಲಗಳನ್ನು ಬಗೆಹರಿಸಲಾಗುವುದು ಎಂದರು.
ಕುವೆಂಪು ವಿವಿಯಲ್ಲಿನ ಅವ್ಯವಸ್ಥೆಗಳಿಗೂ ಬಿಜೆಪಿ ಕಾರಣವಾಗಿದ್ದು, ಈ ಬಗ್ಗೆ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಇಂದು ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.