ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಇಲಾಖೆ ಮಾತಿಗೆ ಬೆಲೆನೆ ಇಲ್ಲವ ಎಂಬ ಪ್ರಶ್ನೆ ಉದ್ಭವ ಆಗುತ್ತಿದೆ? ದಿನ ನಿತ್ಯ ಯಾರು ಬಸ್ ನಲ್ಲಿ ಫುಟ್ ಬೋರ್ಡ್ ನಲ್ಲಿ ನಿಂತು ಹುಚ್ಚಾಟ ಮಾಡುತ್ತಾರೆ, ಅದುನ್ನ ನೋಡಿಕೊಳ್ಳುವುದೇ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಇಲಾಖೆ ಕರ್ತವ್ಯನ? ಬಸ್ ಮಾಲೀಕರು, ಚಾಲಕ, ನಿರ್ವಾಹಕ, ಸಿಬ್ಬಂದಿಗಳ ಜವಾಬ್ದಾರಿ ಏನು ಹಾಗಾದರೆ? ಈ ಪ್ರಶ್ನೆ ಉದ್ಭವ ಆಗಲು ಕಾರಣ ಏನಂದರೆ,
ತೀರ ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ ನಗರದಲ್ಲಿ ಒಬ್ಬ ವಿದ್ಯಾರ್ಥಿ ಬಸ್ ಫುಟ್ ಬೋರ್ಡ್ ನಲ್ಲಿ ನಿಂತು ಬಸ್ ಯಿಂದ ಆಯತಪ್ಪಿ ಬಿದ್ದು ಅಸುನೀಗಿದ್ದ.ತದ ನಂತರ ಟ್ರಾಫಿಕ್ ಪೊಲೀಸರು ಸಭೆ ನಡೆಸಿ ಬಸ್ ಚಲಿಸುವಾಗ ಫುಟ್ ಬೋರ್ಡ್ ಅಲ್ಲಿ ನಿಲ್ಲಬಾರದು ಎಂದು ಬುದ್ದಿವಾದ ಹೇಳಿದ್ದರು.

ಇಷ್ಟೆಲ್ಲಾ ಆದರೂ ಸಹ ಮತ್ತು ಪ್ರತಿನಿತ್ಯ ಖಾಸಗಿ ಬಸ್ ಖಾಲಿ ಇದ್ದರು ಸಹ ಫುಟ್ ಬೋರ್ಡ್ ಅಲ್ಲಿ ನಿಲ್ಲುವುದು ನಿಂತಿಲ್ಲ.ಇದಕ್ಕೂ ಮಿಗಿಲಾಗಿ.ಫುಟ್ ಬೋರ್ಡ್ ಅಲ್ಲಿ ನಿಲ್ಲುವುದರ ಜೊತೆಗೆ ಪುಂಡಾಟಿಕೆ ಕೂಡ ಹೆಚ್ಚು ಆಗುತ್ತಿದೆ.
ಇಂದು ಸಂಜೆ ಸುಮಾರ್ 6:50 ರಿಂದ 7 ಗಂಟೆ ವೇಳೆಯಲ್ಲಿ ಈ ಮೇಲ್ಕಂಡ ಖಾಸಗಿ ಬಸ್ ನಲ್ಲಿ ಈ ರೀತಿಯಾಗಿ ಬಸ್ ಚಲಿಸುವಾಗ ಪುಂಡ ಹುಡುಗರು ಮಹಾದೇವಿ ಟಾಕೀಸ್ ಯಿಂದ ಸಹ್ಯಾದ್ರಿ ಕಾಲೇಜ್ ವರೆಗೂ ಬಸ್ ಚಲಿಸುವವಾಗ ಈ ರೀತಿ ಹುಚ್ಚಾಟ ಮಾಡುತ್ತಿದ್ದು ಕಂಡು ಬಂದಿದೆ.
ಬಸ್ ಓವರ್ ಟೇಕ್ ತೆಗೆದುಕೊಳ್ಳುವಾಗ ಅಕ್ಕ ಪಕ್ಕದ ವಾಹನಗಳನ್ನು ಲೆಕ್ಕಿಸದೆ ರಸ್ತೆಗೆ ತನ್ನ ಕಾಲುಗಳನ್ನು ಚಾಚುವ ಮೂಲಕ ಪುಂಡಾಟಿಕೆ ಮಾಡುತ್ತಿದ್ದ, ಆದರೆ ಬಸ್ ನ ಚಾಲಕ ಅಥವಾ ಸಿಬ್ಬಂದಿ ಯಾರು ಸಹ ಈತನಿಗೆ ಏನು ಬುದ್ದಿವಾದ ಹೇಳಲಿಲ್ಲ.
ಹಾಗೆಯೇ ಈತನಿಗೆ ಅಪಾಯದ ಅರಿವೇ ಇರಲಿಲ್ಲ. ಜೊತೆಗೆ ರಸ್ತೆಯಲ್ಲಿ ಬರುವ ವಾಹನಗಳಿಗೂ ಇವನ ಹುಚ್ಚಾಟಕ್ಕೆ ಏನಾದರು ತೊಂದರೆ ಅದಲ್ಲಿ ಬೇರೆ ವಾಹನಗಳಿಗೂ ಸಮಸ್ಯೆ ಹಾಗೂ ಈತನ ಜೀವಕ್ಕೂ ಸಹ ಸಮಸ್ಯೆ.
ಇದೆಲ್ಲ ನೋಡಿಯೂ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಇಲಾಖೆ ಏನು ಕ್ರಮ ಜರುಗಿಸುವ ಮೂಲಕ ಈ ರೀತಿ ಘಟನೆಗಳು ಮರುಕಳಿಸದಂತೆ ಮಾಡುತ್ತಾರೆ ಎಂಬುದು ಶಿವಮೊಗ್ಗ ಪ್ರಜ್ಞಾವಂತ ಜನರ ಪ್ರಶ್ನೆಯಾಗಿದೆ?

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.