ಶಿವಮೊಗ್ಗ ಸೇರಿದಂತೆ ರಾಜ್ಯದಲ್ಲಿ ಸಾರಿಗೆ ನಿಗಮಗಳ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಂದಿನಿಂದ ಮುಷ್ಕರ ಪ್ರಾರಂಭಿಸಿದ್ದಾರೆ. ಇದರಿಂದಾಗಿ ಶಿವಮೊಗ್ಗದ ಕೇಂದ್ರ ಬಸ್ ನಿಲ್ದಾಣದಲ್ಲಿ ಬೆರಳೆಣಿಕೆಯಷ್ಟು ಬಸ್ಗಳು ಮಾತ್ರ ಸಂಚಾರ ನಡೆಸುತ್ತಿವೆ.
ಶಿವಮೊಗ್ಗಕ್ಕೆ ಬೇರೆ ಬೇರೆ ಡಿಪೋಗಳಿಂದ ಆಗಮಿಸಿದ ಬಸ್ಗಳು, ಪ್ರಯಾಣಿಕರನ್ನು ಇಳಿಸಿ ತಮ್ಮ ತಮ್ಮ ಡಿಪೋಗಳಿಗೆ ವಾಪಸ್ ಆಗುತ್ತಿದ್ದವು. ಉಳಿದಂತೆ, ದೂರದೂರುಗಳಿಗೆ ಹೊರಡುವ ಪ್ರಯಾಣಿಕರು ಪರದಾಡುತ್ತಿದ್ದ ದೃಶ್ಯ ಕಂಡುಬಂತು.
ತರಬೇತಿ ಚಾಲಕ, ನಿರ್ವಾಹಕರನ್ನು ಬಳಸಿದ ಅಧಿಕಾರಿಗಳು
ಡಿಪೋದಲ್ಲಿ ಟ್ರೈನಿ ಡ್ರೈವರ್ಸ್ ಹಾಗೂ ಕಂಡಕ್ಟರ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ಸಾಗರ, ಹೊನ್ನಾಳಿ, ಶಿಕಾರಿಪುರ, ಭದ್ರಾವತಿಗೆ ಬಸ್ಗಳು ಎಂದಿನಂತೆ ಸಂಚಾರ ನಡೆಸುತ್ತಿವೆ. ಆದರೆ ಬೆಂಗಳೂರು ಮಾರ್ಗದ ಬಸ್ಗಳು ಸಿಗದೆ ಪ್ರಯಾಣಿಕರು ಪರದಾಡುವಂತಾಗಿದೆ.
ಪ್ರಯಾಣಿಕರ ಪರದಾಟ ಜಿಲ್ಲೆಯ ಜನರು ಖಾಸಗಿ ಬಸ್‌ಗಳನ್ನು ಹೆಚ್ಚು ಅವಲಂಬಿಸಿದ್ದು, ಎಲ್ಲ ತಾಲೂಕುಗಳಿಗೂ ಬಸ್ ಸೌಲಭ್ಯವಿದೆ. ಶಿವಮೊಗ್ಗದಿಂದ ಹೊರ ಜಿಲ್ಲೆಗಳಾದ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ತುಮಕೂರು , ಮಂಗಳೂರು, ಉಡುಪಿ, ಚಿಕ್ಕಮಗಳೂರಿಗೂ ಖಾಸಗಿ ಬಸ್ಗಳು ಸಂಚರಿಸುತ್ತಿವೆ.
ಇದನ್ನು ಓದಿದ್ದೀರಾ? ಕಲಬುರಗಿ | ನೌಕರರ ಮುಷ್ಕರದಿಂದಾಗಿ ಸಾರಿಗೆ ವ್ಯವಸ್ಥೆ ಬಂದ್: ದುಪ್ಪಟ್ಟು ದರ ತೆತ್ತು ಪ್ರಯಾಣಿಸಿದ ಸಾರ್ವಜನಿಕರು!
ಸಾರಿಗೆ ನೌಕರರು ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ ನಡೆಸುವುದಾಗಿ ಹಿಂದೆಯೇ ಸರ್ಕಾರಕ್ಕೆ ತಿಳಿಸಿದ್ದರು. ನಿನ್ನೆ ಸರ್ಕಾರದ ಜೊತೆಗಿನ ಮಾತುಕತೆ ವಿಫಲವಾಗಿದ್ದು ಇಂದು ಪ್ರತಿಭಟನೆ ಕೈಗೊಂಡಿವೆ.