ಶಿವಮೊಗ್ಗ, ಪ್ರತಿಭಾ ಪುರಸ್ಕಾರಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ನಾಯ್ಕ್ ಅಭಿಪ್ರಾಯಪಟ್ಟರು.
ಬುಧವವಾರ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಶಿವಮೊಗ್ಗ ವತಿಯಿಂದ ಆಯೋಜಿಸಿದ್ದ ಸರ್ಕಾರಿ ಶಾಲೆ, ಸರ್ಕಾರಿ ಅನುದಾನಿತ ಶಾಲೆಯ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಕ್ಕೆ ಸೇರಿದ ಪ್ರತಿಭಾವಂತ ಹೆಣ್ಣು ಮಕ್ಕಳಿಗೆ ನೀಡುವ ಕೆನರಾ ಬ್ಯಾಂಕ್ ಬಿಆರ್ ಅಂಬೇಡ್ಕರ್ ವಿದ್ಯಾ ಜ್ಯೋತಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.
ಮಕ್ಕಳು ಬಹಳ ಸಂತೋಷ ಸಂಭ್ರಮ ಪಡೆಯುವ ವಿಚಾರವಾಗಿದ್ದು ಸರ್ಕಾರಿ ಶಾಲೆಯ ಹೆಣ್ಣು ಮಕ್ಕಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ ಪ್ರತಿಭೆಯನ್ನು ಗುರುತಿಸಿ ಬೆನ್ನು ತಟ್ಟುವುದರಿಂದ ಮಕ್ಕಳು ಮೇಲೆ ಬರಲು ಸಾಧ್ಯ ಇಚ್ಛಾ ಶಕ್ತಿ ಇರಬೇಕು ಆಗ ಮಾತ್ರ ಸಾಧನೆ ಮೆಟ್ಟಿಲು ಏರಲು ಸಾಧ್ಯವಾಗುತ್ತದೆ ಎಂದರು.
ಕೆನರಾ ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥ ದೇವರಾಜ್ ಮಾತನಾಡಿ, 20 ವರ್ಷಗಳಿಂದ ಕೆನರಾ ಬ್ಯಾಂಕ್ ವಿದ್ಯಾ ಜ್ಯೋತಿಯನ್ನು ನೀಡುತ್ತಿದೆ. ಬ್ಯಾಂಕಿನ ಪ್ರತಿ ಶಾಖೆಯಿಂದ ಆರು ಮಕ್ಕಳಂತೆ 62 ಶಾಖೆಯಿಂದ 372 ಮಕ್ಕಳಿಗೆ ಒಟ್ಟು 15 ಲಕ್ಷ ರೂ ನೀಡುತ್ತಿದೆ. ಐದು ಆರು ಹಾಗೂ 7ನೇ ತರಗತಿ ಮಕ್ಕಳಿಗೆ 3000 ಹಾಗೂ 8, 9, 1೦ನೇ ತರಗತಿ ಮಕ್ಕಳಿಗೆ 5,000 ಪ್ರತಿಭಾ ಪುರಸ್ಕಾರವನ್ನು ನೀಡಲಾಗುತ್ತಿದೆ ಎಂದರು.
ವಿದ್ಯಾರ್ಥಿನಿಯರು ಐದನೇ ತರಗತಿಯಲ್ಲಿ ವಿದ್ಯಾರ್ಥಿವೇತನ ತೆಗೆದುಕೊಳ್ಳಲು ಪ್ರಾರಂಭಿಸಿದರೆ ಹತ್ತನೇ ತರಗತಿಯವರೆಗೂ ಪ್ರತಿಭಾ ಪುರಸ್ಕಾರ ತೆಗೆದುಕೊಳ್ಳುವಂತಹ ಆಗಬೇಕು ಎಂದು ಹಾರೈಸಿದರು.
ಕೆನರಾ ಬ್ಯಾಂಕ್ ಡಿವಿಜನಲ್ ಮ್ಯಾನೇಜರ್ ರಾಜು ಅಣಜಿ ಹಿರಿಯ ವ್ಯವಸ್ಥಾಪಕ ಪ್ರಶಾಂತ್, ಗೀತಾಂಜಲಿ ಪ್ರಸನ್ನಕುಮಾರ್, ವಿವಿಧ ಶಾಖೆಯ ಮುಖ್ಯಸ್ಥರು ಹಾಗೂ ಪೋಷಕರು ಉಪಸ್ಥಿತರಿದ್ದರು.