ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆ ನಡೆಯುತ್ತಿದ್ದು ಪರೀಕ್ಷೆಗೆ ಹಾಜರಾಗುವಾಗ ಕೆಲವೊಂದು ವಸ್ತುಗಳನ್ನು ತೆಗೆದುಕೊಂಡು ಹೋಗಬಾರದೆಂಬ ನಿಯಮವಿದೆ ಆದರೆ ನೆನ್ನೆ ದಿವಸ ಒಬ್ಬ ಬ್ರಾಹ್ಮಣ ವಿದ್ಯಾರ್ಥಿಗೆ ಜನಿವಾರ ತೆಗೆದಿಟ್ಟು ಪರೀಕ್ಷೆಗೆ ಹಾಜರಾಗುವಂತೆ ಸೆಕ್ಯೂರಿಟಿ ಸೂಚಿಸಿದ್ದು ತೀರಾ ಖಂಡನೀಯ, ಶಿವಮೊಗ್ಗ ನಗರದ ಜೆ ಏನ್ ಏನ್ ಕಾಲೇಜಿನಲ್ಲೂ ಸಹ ವಿದ್ಯಾರ್ಥಿಗಳಿಗೆ ರುದ್ರಾಕ್ಷಿ ಮಾಲೆಯನ್ನು ತೆಗೆದು ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಿರುವುದು ಬಹಳ ಬೇಸರದ ವಿಚಾರವಾಗಿದೆ.
ಬ್ರಾಹ್ಮಣರಲ್ಲಿ ಜನಿವಾರಕ್ಕೆ ತನ್ನದೇ ಆದ ಧಾರ್ಮಿಕ ಕಟ್ಟುಪಾಡುಗಳಿವೆ ಹಾಗೂ ಹಿಂದೂ ಧರ್ಮದಲ್ಲಿ ರುದ್ರಾಕ್ಷಿ ಮಾಲೆ, ಜನಿವಾರ ಇವುಗಳ ಬಗ್ಗೆ ವಿಶೇಷವಾದ ಗೌರವ ಭಕ್ತಿ ಇದ್ದು ವಿದ್ಯಾರ್ಥಿಗಳು ಪರೀಕ್ಷೆಯ ಸಂದರ್ಭದಲ್ಲಿ ದೇವರಲ್ಲಿ ಭಕ್ತಿಯಿಂದ ಬೇಡಿಕೊಂಡು ಪರೀಕ್ಷೆ ಬರೆಯಲು ಬಂದಿರುತ್ತಾರೆ ಇಂತಹ ಸಂದರ್ಭದಲ್ಲಿ ಈ ರೀತಿಯ ಘಟನೆಗಳು ನಡೆದಿರುವುದು ವಿಷಾಧನೆಯ.ಇದನ್ನು ಅರಿಯದ ಸಿಬ್ಬಂದಿ ಜನಿವಾರ ಹಾಗೂ ರುದ್ರಾಕ್ಷಿ ಮಾಲೆಯನ್ನು ತೆಗೆಯಲು ಹೇಳಿದ್ದು ಖಂಡನೀಯ.
ಜನಿವಾರವನ್ನು, ರುದ್ರಾಕ್ಷಿ ಮಾಲೆ ಈ ರೀತಿ ಧರ್ಮಕ್ಕೆ ಸಂಬಂಧಪಟ್ಟ ಮಾಲೆಗಳನ್ನು ತೆಗೆದಿಟ್ಟು ಪರೀಕ್ಷೆ ಬರೆಯಬೇಕೆಂಬ ಯಾವ ಸರ್ಕಾರದ ಸುತ್ತೋಲೆಯೂ ಇಲ್ಲ ಹಾಗೂ ಇಂತಹ ಸಂದರ್ಭದಲ್ಲಿ ಯಾವುದೇ ಧರ್ಮಕ್ಕೂ ದಕ್ಕೆ ತರದಂತೆ ಕ್ರಮ ಕೈಗೊಳ್ಳಬೇಕೆಂದು ಹಾಗೂ ಈ ಘಟನೆಗೆ ಸಂಬಂಧಿಸಿದ ವ್ಯಕ್ತಿಯ ವಿರುದ್ಧ ಕ್ರಮಕ್ಕೆ ಜರಗಿಸುವುದು, ಇನ್ನು ಮುಂದೆ ಈ ತರಹದ ಘಟನೆಗಳು ನಡೆಯದಂತೆ ಅಧಿಕಾರಿಗಳು ಕ್ರಮ ವಹಿಸತಕ್ಕದ್ದು ಹಾಗೂ ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದೇವೆಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ 2023ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಚ್ ಸಿ ಯೋಗೇಶ್ ತಿಳಿಸಿದರು.
ನಾಲಾಯಕ್ಗಳು