ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಎಸ್ ಮಧು ಬಂಗಾರಪ್ಪನವರ ಕನಸಿನ ಯೋಜನೆಯಾದ “ನಮ್ಮ ಶಾಲೆ ನಮ್ಮ ಜವಾಬ್ದಾರಿ ” ಕಾರ್ಯಕ್ರಮದಡಿಯಲ್ಲಿ ಸಾಂತ್ವನ ಟ್ರಸ್ಟಿನ ವತಿಯಿಂದ ಶಿವಮೊಗ್ಗ ಜಿಲ್ಲೆಯ ಮಲೆಶಂಕರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ, ಶಾಲಾ ಕಟ್ಟಡ ಸುಧಾರಣೆಗಾಗಿ ಸುಣ್ಣ -ಬಣ್ಣ ಹಚ್ಚುವ ಮೂಲಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮವು ಪೂರ್ಣವಾದ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ, ಊರಿನ ಮುಖಂಡರು ಸಾಂತ್ವಾನ ಟ್ರಸ್ಟಿನ ಸದಸ್ಯರುಗಳಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮ ಆಯೋಜನೆ ಮಾಡಿದ್ದರು.

ಈ ಕಾರ್ಯಕ್ರಮವನ್ನು ಮಕ್ಕಳಿಗೆ ನೋಟ್ ಬುಕ್ ವಿತರಿಸಲಾಯಿತು ಮತ್ತು ಸಸಿ ನಡುವುದರ ಮೂಲಕ ಸಾಂತ್ವಾನ ಟ್ರಸ್ಟಿನ ಸದಸ್ಯರುಗಳಾದ ಅಭಿಲಾಶ್ ಮರಿಯಪ್ಪ, ವಿನಯ್ ಕೆ ಪ್ರಕಾಶ್, ಮಧು, ವಿನಯ್ ಮಲೆಶಂಕರ ಪ್ರದೀಪ್, ರಂಜಿತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ವೇಳೆ ಶಿವಮೊಗ್ಗ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್, ಮೆಸ್ಕಾಂ ಕುಂಸಿ ವಿಭಾಗ ಸದಸ್ಯರಾದ ನಾಗರಾಜ್ , ಊರಿನ ಮುಖಂಡರು, ಶಾಲಾ ಶಿಕ್ಷಕ ವೃಂದದವರು ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
